• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ಮಹಾಗೋಡೆ ಪ್ರವಾಸಿಗರಿಗೆ ಭಾಗಶಃ ಓಪನ್

|

ಚೀನಾದ ಮಹಾ ಗೋಡೆಯನ್ನು ಮಂಗಳವಾರ ಭಾಗಶಃ ತೆರೆಯಲಾಗಿದೆ. ಕೊರೊನಾ ವೈರಾಣು ಆತಂಕದಿಂದ ಎರಡು ತಿಂಗಳಿಂದ ಮುಚ್ಚಲಾಗಿತ್ತು. ಈ ಪ್ರದೇಶವನ್ನು ಬೆಳಗ್ಗೆ 9ರಿಂದ ಸಂಜೆ 4 ಗಂಟೆ ಮಧ್ಯೆ ತೆರೆದಿರಲಾಗುತ್ತದೆ. ಒಂದು ದಿನಕ್ಕೆ 19,500 ಸಂದರ್ಶಕರಿಗೆ ಮಿತಿ ನಿಗದಿ ಮಾಡಲಾಗಿದೆ. ಮಂಗಳವಾರ ಮಧ್ಯಾಹ್ನ 2ರ ಹೊತ್ತಿಗೆ 892 ಟಿಕೆಟ್ ಗಳನ್ನು ಮಾತ್ರ ಕಾದಿರಿಸಲಾಗಿದ್ದವು.

ಸಂದರ್ಶಕರು ಅಧಿಕೃತ ವೆಬ್ ಸೈಟ್ ನಲ್ಲಿ ಅಥವಾ ವಿ ಚಾಟ್ ಮೂಲಕ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು. ವೈಯಕ್ತಿಕ ಮಾಹಿತಿಯನ್ನು ನೀಡಿ, ಹೆಲ್ತ್ ಕೋಡ್ ಪಡೆಯಬೇಕು. ಪ್ರವೇಶದ ಸಂದರ್ಭದಲ್ಲಿ ದೇಹದ ಉಷ್ಣಾಂಶವನ್ನು ಪರೀಕ್ಷಿಸಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಜನ ಸಂದಣಿ ಆಗಬಾರದು ಎಂಬ ಕಾರಣಕ್ಕೆ ಒನ್ ವೇ ಸರ್ಕ್ಯುಲರ್ ಟೂರ್ ಆಯೋಜಿಸಲಾಗಿದೆ.

ದ ಕೇಬಲ್ ವೇ, ಚೈನಾ ಗ್ರೇಟ್ ವಾಲ್ ಮ್ಯೂಸಿಯಂ ಸೇರಿದಂತೆ ಇತರ ವಿಭಾಗಗಳನ್ನು ಇನ್ನೂ ತೆರೆದಿಲ್ಲ. ಬದಲಿಂಗ್ ವಿಭಾಗವು ಬೀಜಿಂಗ್ ನ ಯಾಕಿಂಗ್ ಜಿಲ್ಲೆಯಲ್ಲಿದೆ. ಇದು ನಗರ ಕೇಂದ್ರದಿಂದ 60 ಕಿ.ಮೀ. ಈಶಾನ್ಯಕ್ಕೆ ಇದೆ. ಇದನ್ನೇ ಮೊದಲನೆಯದಾಗಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.

ಈ ಸುಂದರ ಪ್ರದೇಶಕ್ಕೆ 2018ನೇ ಇಸವಿಯಲ್ಲಿ 99 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಕೊರೊನಾವನ್ನು ನಿಯಂತ್ರಿಸುವ ಕಾರಣಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು.

English summary
China great wall open partially for visitors. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X