ಚೀನಾದಲ್ಲಿ ಚಾನ್ ಹೋಮ್ ಬಿರುಗಾಳಿ ಹಾವಳಿ

ಶಾಂಘೈ, ಜು. 11: ಚೀನಾದಲ್ಲಿ ಬಿರುಗಾಳಿ ಆರ್ಭಟ ಆರಂಭವಾಗಿದ್ದು ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಏಳುತ್ತಿವೆ. "ಚಾನ್‌-ಹೊಮ್‌' ಹೆಸರಿನ ಭಾರೀ ಬಿರುಗಾಳಿ ಚೀನಾದ ಪೂರ್ವ ಪ್ರಾಂತ್ಯದ ಕಡೆ ಧಾವಿಸುತ್ತಿದ್ದು ಸುಮಾರು 8.6ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಜಪಾನ್‌ನ ಓಕಿನಾವ ದ್ವೀಪ ಸರಣಿ ಹಾಗೂ ತೈವಾನ್‌ ಮೇಲೆ ವಾಯುಭಾರ ಕುಸಿತ ಉಂಟಾಗಿ ಪ್ರಬಲ ಚಂಡಮಾರುತ ಎದ್ದಿದೆ. ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದ್ದು ಭೂಕುಸಿತಗಳಿಗೆ ಕಾರಣವಾಗುವ ಸಂಭವವಿದೆ ಎಂದು ಚೀನಾ ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಸಿದೆ.[ವಿಶ್ವದ ಅತಿದೊಡ್ಡ ಭೂಭಾಗ ಮಾರಾಟಕ್ಕೆ ಸಿದ್ಧ]

rain

ಉತ್ತರ ಭಾರತದಲ್ಲೂ ಭಾರೀ ಮಳೆಯಾಗುತ್ತಿದೆ. ಜಪಾನ್ ನಲ್ಲಿ ಉಂಟಾಗಿದ್ದ ಹವಾಮಾನ ವೈಪರೀತ್ಯ, ಚೀನಾದ ಮೇಲೆ ಪ್ರಭಾವ ಬೀರುತ್ತಿದೆ. ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಬಿರುಗಾಳಿ ಮತ್ತು ಭಾರೀ ಗಾತ್ರದ ಅಲೆಗಳಿಗೆ ಕಾರಣವಾಗಿದೆ.

ತಿಂಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪ ಸಾವಿರಾರು ಜನರನ್ನು ಬಲಿ ಪಡೆದಿತ್ತು. ಇದೀಗ ಚೀನಾಕ್ಕೆ ನೈಸರ್ಗಿಕ ವಿಕೋಪದ ಸೂಚನೆ ಸಿಕ್ಕಿದ್ದು ಅಲ್ಲಿನ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.[ಧಾರಾಕಾರ ಮಳೆಗೆ ರಾಜಧಾನಿ ದೆಹಲಿ ತತ್ತರ]

ವಿಮಾನ ಸೇವೆ ಸ್ಥಗಿತ
ಅನೇಕ ವಿಮಾನ ಸೇವೆಗಳನ್ನು ಸ್ಥಗಿತ ಮಾಡಲಾಗಿದೆ. 1949 ರಲ್ಲಿ ಕಂಡುಬಂದಿದ್ದ ರೀತಿಯ ಬಿರುಗಾಳಿ ಮತ್ತೆ ಕಾಣಿಸಿಕೊಳ್ಳಲಿದೆ ಎಂದು ಚೀನಾ ಹವಾಮಾನ ಇಲಾಖೆ ತಿಳಿಸಿದ್ದು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+