China plane crash: ಚೀನಾದಲ್ಲಿ 133 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ

ಬೀಜಿಂಗ್‌, ಮಾರ್ಚ್ 21: ದಕ್ಷಿಣ ಚೀನಾದಲ್ಲಿ ಬೋಯಿಂಗ್ 737 ಪ್ರಯಾಣಿಕ ವಿಮಾನವು ಪತನವಾಗಿದ್ದು, ಈ ವಿಮಾನದಲ್ಲಿ 133 ಮಂದಿ ಪ್ರಯಾಣಿಕರು ಇದ್ದರು ಎಂದು ವರದಿಯು ಉಲ್ಲೇಖ ಮಾಡಿದೆ. ಈವರೆಗೆ ಯಾವುದೇ ಸಾವು ನೋವುಗಳ ಬಗ್ಗೆ ಮಾಹಿತಿ ಲಭಿಸಿಲ್ಲ.

133 ಜನರಿದ್ದ ಪ್ರಯಾಣಿಕ ವಿಮಾನವು ದಕ್ಷಿಣ ಚೀನಾದ ಗುವಾಂಗ್‌ಕ್ಸಿ ಪ್ರಾಂತ್ಯದಲ್ಲಿ ಪತನಗೊಂಡಿದೆ. ಈ ಪ್ರದೇಶದಲ್ಲಿ ಹೊಗೆ ಆವರಿಸಿದೆ ಎಂದು ವರದಿಗಳು ಉಲ್ಲೇಖ ಮಾಡಿದೆ.

ಪ್ರಸ್ತುತ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದ, ಯಾವುದೇ ಸಾವು ನೋವುಗಳ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

China Eastern Airlines plane carrying 133 people crashes in southern China

ಇದು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಹೋಗುವ ಮಾರ್ಗದಲ್ಲಿ ಚೀನಾ ಸದರ್ನ್‌ನಿಂದ ನಿರ್ವಹಿಸಲ್ಪಡುವ ಬೋಯಿಂಗ್-737 ಆಗಿತ್ತು. 133 ಜನರು ಈ ವಿಮಾನದಲ್ಲಿ ಇದ್ದರು. ಟೆಂಗ್‌ಕ್ಸಿಯಾನ್ ಕೌಂಟಿ, ವುಝೌ, ಗುವಾಂಗ್‌ಕ್ಸಿಯಲ್ಲಿ ಪರ್ವತದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಡಾ ವರದಿ ಹೇಳಿದೆ.

ಇನ್ನು ಈ ಬಗ್ಗೆ ಚೀನಾದ ಅಧಿಕಾರಿಗಳು ಈವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಸದ್ಯ ಬೆಟ್ಟಗಳು ದಗದಗನೆ ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+