ಮಾಡಿದ್ದುಣ್ಣೋ ಮಹಾರಾಯ: ಚೀನಾಗೂ ಬಿತ್ತು ಕೊರೊನಾ ವೈರಸ್ ಪೆಟ್ಟು!

ಬೀಜಿಂಗ್, ಮೇ.22: ನೊವೆಲ್ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಚೀನಾ ಸರ್ಕಾರವು ಹೊಸ ಮಂತ್ರ ಜಪಿಸುತ್ತಿದೆ. ದೇಶದ ಆರ್ಥಿಕತೆಗೆ ಹಣಕಾಸಿನ ಬೆಂಬಲ ನೀಡುವ ಉದ್ದೇಶದಿಂದ ಈ ಸಾಲಿನಲ್ಲಿ ಜಿಪಿಡಿ ಗುರಿ ನಿಗದಿಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ.

Recommended Video

      ಭಾರತಕ್ಕೆ ಆಘಾತ | ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತ | Oneindia Kannada

      ಚೀನಾದಲ್ಲಿ ವಾರ್ಷಿಕ ಸಂಪುಟ ಸಭೆ ಆರಂಭಕ್ಕೂ ಮೊದಲು ಪ್ರೀಮಿಯರ್ ಲೀ ಕೆಕ್ಯೂಯಾಂಗ್ ಈ ಬಗ್ಗೆ ವರದಿ ಪ್ರಕಟಿಸಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ವಿಶ್ವದಲ್ಲಿ ದೊಡ್ಡ ಪ್ರಮಾಣದ ಅನಿಶ್ಚಿತತೆ ಉಂಟಾಗಿದೆ.

      ಚೀನಾ ಸರ್ಕಾರವು ಜಿಡಿಪಿ ಗುರಿ ನಿಗದಿಗೊಳಿಸುವುದಕ್ಕಿಂತ ಮೊದಲು ಉದ್ಯೋಗ ಸ್ಥಿರತೆ ಹಾಗೂ ಪ್ರಜೆಗಳ ಜೀವನ ಮಟ್ಟ ಅಭಿವೃದ್ಧಿಪಡಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ ಎಂದು ಲೀ ಕೆಕ್ಯೂಯಾಂಗ್ ತಿಳಿಸಿದೆ.

      3 ದಶಕಗಳ ನಂತರ ಮೊದಲ ಬಾರಿ ತೀರ್ಮಾನ

      3 ದಶಕಗಳ ನಂತರ ಮೊದಲ ಬಾರಿ ತೀರ್ಮಾನ

      ಚೀನಾದಲ್ಲಿ 30 ವರ್ಷಗಳಲ್ಲೇ ಮೊದಲ ಬಾರಿಗೆ ಈ ರೀತಿಯ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 1990 ರಿಂದ ಈವರೆಗೂ ಪ್ರತಿವರ್ಷ ದೇಶದ ಒಟ್ಟು ದೇಶೀಯ ಉತ್ಪಾದನೆಗೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ ಮೊದಲ ಬಾರಿಗೆ ಜಿಡಿಪಿಗೆ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸದಿರಲು ಚೀನಾ ಸರ್ಕಾರವು ತೀರ್ಮಾನಿಸಿದೆ.

      140 ಬಿಲಿಯನ್ ನಷ್ಟ ಅನುಭವಿಸುತ್ತಾ ಚೀನಾ?

      140 ಬಿಲಿಯನ್ ನಷ್ಟ ಅನುಭವಿಸುತ್ತಾ ಚೀನಾ?

      ಕೊರೊನಾ ವೈರಸ್ ಅಟ್ಟಹಾಸದಿಂದ ಚೀನಾದಲ್ಲಿ ಆರ್ಥಿಕ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ಲೀ ಕೆಕ್ಯೂಯಾಂಗ್ ತಿಳಿಸಿದೆ. ಕಳೆದ ಆರ್ಥಿಕ ಸಾಲಿಗೆ ಹೋಲಿಸಿದರೆ ಈ ವರ್ಷದಲ್ಲಿ ಚೀನಾ ಜಿಡಿಪಿಯ ಶೇ.3.6ರಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಅದರ ಮೌಲ್ಯ ಬರೋಬ್ಬರಿ 140(1 ಟ್ರಿಲಿಯನ್ ಯುವಾನ್) ಬಿಲಿಯನ್ ಯುಎಸ್ ಡಾಲರ್ ಆಗಿದೆ. ಕೊರೊನಾ ವೈರಸ್ ನಿಂದಾಗಿ ಹಾನಿ ಆಗಿರುವ ಮೂಲಸೌಕರ್ಯಗಳಿಗಾಗಿ ಸರ್ಕಾರ ವಿಶೇಷ ಬಾಂಡ್ ಘೋಷಿಸಿದ್ದು ಹೆಚ್ಚುವರಿಯಾಗಿ 3.75 ಟ್ರಿಲಿಯನ್ ಯುವಾನ್ ನಷ್ಟವಾಗುತ್ತೆ ಎನ್ನಲಾಗಿದೆ.

      ಚೀನಾದಲ್ಲಿ ಹೆಚ್ಚುವರಿ ನಿಧಿ ಬಳಸು ಕಠಿಣ ಕ್ರಮ

      ಚೀನಾದಲ್ಲಿ ಹೆಚ್ಚುವರಿ ನಿಧಿ ಬಳಸು ಕಠಿಣ ಕ್ರಮ

      ಚೀನಾದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬುವ ಉದ್ದೇಶದಿಂದ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಹೊಸ ಉತ್ಪಾದನೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚುವರಿ ನಿಧಿ ಹಾಗೂ ಸಂಗ್ರಹಿತ ಹಣದ ಪುನರ್ ಬಳಕೆಗೆ ಸರ್ಕಾರ ಮುಂದಾಗಿದೆ. ಕೊರೊನಾ ವೈರಸ್ ಹರಡುವಿಕೆಯಿಂದ ವಿಶ್ವದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತವನ್ನು ಮನಗಂಡು ಚೀನಾ ಜಾಗೃತಿ ವಹಿಸಿದೆ.

      ಚೀನಾದಲ್ಲಿ ಈ ಮೊದಲು ಜಿಡಿಪಿ ಇಮ್ಮಡಿಗೊಳಿಸಲು ತೀರ್ಮಾನ

      ಚೀನಾದಲ್ಲಿ ಈ ಮೊದಲು ಜಿಡಿಪಿ ಇಮ್ಮಡಿಗೊಳಿಸಲು ತೀರ್ಮಾನ

      ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಹರಡುವ ಮೊದಲು ಈ ವರ್ಷ ಚೀನಾದಲ್ಲಿ ಒಟ್ಟು ದೇಶೀಯ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. 2010ಕ್ಕೆ ಹೋಲಿಸಿ ನೋಡಿದರೆ 2020ರಲ್ಲಿ ಜಿಡಿಪಿ ಎರಡರಷ್ಟು ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಆಘಾತಕಾರಿ ಬೆಳವಣಿಗೆಯಲ್ಲಿ ಕೊರೊನಾ ವೈರಸ್ ನಿಂದಾಗಿ ಮೊದಲ ತ್ರೈಮಾಸಿಕದಲ್ಲಿ 6.8ಕ್ಕೆ ಜಿಡಿಪಿ ಕುಸಿಯಿತು. ಕಳೆದ 10 ವರ್ಷಗಳಲ್ಲೇ ಮೊದಲ ಬಾರಿಗೆ ಚೀನಾ ಜಿಡಿಪಿ ಇಷ್ಟೊಂದು ಕುಸಿತ ಕಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+