ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ ಎಕ್ಸ್‌ಪೋದಲ್ಲಿ ಮಾರಕ ಅಸ್ತ್ರಗಳನ್ನು ಪ್ರದರ್ಶಿಸಿದ ಚೀನಾ

|
Google Oneindia Kannada News

ನವದೆಹಲಿ, ನವೆಂಬರ್ 16: ಭಾರತದ ವಿರೋಧಿ ರಾಷ್ಟ್ರವಾಗಿರುವ ಪಾಕಿಸ್ತಾನವು ತನ್ನ ರಕ್ಷಣಾ ಡಿಫೆನ್ಸ್ ಎಕ್ಸ್‌ಪೋ ಬಗ್ಗೆ ಬಹಳ ಉತ್ಸುಕತೆ ತೋರುತ್ತಿದೆ. ಪಾಕಿಸ್ತಾನದ ಡಿಫೆನ್ಸ್ ಎಕ್ಸ್‌ಪೋ ಚೀನಾದ ಹೊಸ ತಂತ್ರ ಎನ್ನಲಾಗಿದೆ.

ಚೀನಾ ದೇಶದ ಆಪ್ತಮಿತ್ರನಂತೆ ಮೆರೆಯುತ್ತಿರುವ ಪಾಕಿಸ್ತಾನದ ಡಿಫೆನ್ಸ್ ಎಕ್ಸ್‌ಪೋದಲ್ಲಿ ತನ್ನ ದೇಶದಲ್ಲಿ ತಯಾರಿಸಿದ ಮಾರಕ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಾಧನಗಳನ್ನು ಚೀನಾ ಪ್ರದರ್ಶಿಸುತ್ತಿದೆ. ಡಿಫೆನ್ಸ್ ಎಕ್ಸೋ ಡ್ರೋನ್‌ಗಳು ಮತ್ತು ಆಂಟಿ-ಡ್ರೋನ್ ಸಿಸ್ಟಮ್‌ಗಳನ್ನು ಒಳಗೊಂಡಂತೆ ಹಲವಾರು ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಚೀನಾ ಪ್ರದರ್ಶಿಸಿತು. ಉಭಯ ದೇಶಗಳ ರಕ್ಷಣಾ ಸಹಕಾರವು ಭಾರತದ ವಿರುದ್ಧ ಹೊಸ ನಡೆ ಎಂದು ವಿಶ್ಲೇಷಕರು ಹೇಳಿಕೊಂಡಿದ್ದಾರೆ. 7 ಚೀನೀ ರಕ್ಷಣಾ ವ್ಯಾಪಾರ ಕಂಪನಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಡಿಫೆನ್ಸ್ ಎಕ್ಸ್‌ಪೋದ 11ನೇ ಅಧಿವೇಶನದಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ "ಚೀನಾ ಡಿಫೆನ್ಸ್" ನಿಯೋಗದ ಅಡಿಯಲ್ಲಿ ಭಾಗವಹಿಸುತ್ತಿವೆ.

G-20 ಶೃಂಗಸಭೆ: ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಖಾಮುಖಿG-20 ಶೃಂಗಸಭೆ: ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಖಾಮುಖಿ

ಪಾಕಿಸ್ತಾನ ರಕ್ಷಣಾ ಎಕ್ಸ್‌ಪೋ

ರಕ್ಷಣಾ ಎಕ್ಸ್‌ಪೋವು ವಿಂಗ್ ಲೂಂಗ್ ಸರಣಿಯ ಡ್ರೋನ್‌ಗಳು ಸಿಎಚ್‌(CH) ಸರಣಿಯ ಡ್ರೋನ್‌ಗಳು, WJ-700 ಡ್ರೋನ್ ಮತ್ತು ರಕ್ಷಣಾ ವ್ಯವಸ್ಥೆಗಳು, VT4 ಮುಖ್ಯ ಯುದ್ಧ ಟ್ಯಾಂಕ್, SR5 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್, YLC-2E ಬಹು-ಪಾತ್ರವನ್ನು ಒಳಗೊಂಡಿರುತ್ತದೆ. ರಾಡಾರ್, ಕಮಾಂಡ್ ಮಾಹಿತಿ ವ್ಯವಸ್ಥೆ ಮತ್ತು ನ್ಯಾವಿಗೇಷನ್ ಸಿಸ್ಟಮ್‌ನ್ನು ಒಳಗೊಂಡಿದೆ.

China displays advanced weapons, equipment at Pakistani defense expo

ಚೀನಾದ ಬಲದ ಮೇಲೆ ಯಾವಾಗಲೂ ಭಾರತದ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನವು ಈ ಡಿಫೆನ್ಸ್ ಎಕ್ಸ್‌ಪೋ ಬಗ್ಗೆ ಬಹಳ ಉತ್ಸುಕತೆ ತೋರುತ್ತಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಈ ಎಕ್ಸ್‌ಪೋ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು ಮತ್ತು ಚೀನಾದ ನಿಯೋಗವನ್ನು ಭೇಟಿ ಮಾಡಿದರು. ಚೀನಾದ ಮಿಲಿಟರಿ ಉಪಕರಣಗಳು ಮತ್ತು ತಂತ್ರಜ್ಞಾನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಅಧಿಕಾರಿಯನ್ನು ಉಲ್ಲೇಖಿಸಲಾಗಿದೆ.

English summary
China is displaying many advanced weapons and equipment, including drone and anti-drone systems, at an ongoing defense expo in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X