ಪ್ಯಾಂಗಾಂಗ್ ಗಡಿಯಲ್ಲಿ ಫೈಬರ್ ನೆಟವರ್ಕ್ ವರದಿ ಸುಳ್ಳು ಎಂದ ಚೀನಾ

ನವದೆಹಲಿ, ಸಪ್ಟೆಂಬರ್.15: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ನಿರ್ಮಿಸಲಾಗುತ್ತಿದೆ ಎಂದ ಮಾಧ್ಯಮಗಳ ವರದಿಯನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್ ತಳ್ಳಿ ಹಾಕಿದ್ದಾರೆ.

ಲಡಾಖ್ ಪೂರ್ವ ಗಡಿಯಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರ ದಕ್ಷಿಣದ ವಿವಾದಿತ ಪ್ರದೇಶಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ಬಳಸಿಕೊಳ್ಳುವುದಕ್ಕೆ ಚೀನಾ ಮುಂದಾಗಿದೆ. ಚೀನಾ ತನ್ನ ಸೇನೆಯ ಜೊತೆಗೆ ಉತ್ತಮ ಸಂಪರ್ಕ ಹೊಂದುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಚೀನಾ ಮುಂದಾಗಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು.

ದೀರ್ಘಕಾಲಿಕ ಚಳಿಗಿಂತ ತಾಪಮಾನದ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪರ್ವತಗಳಲ್ಲಿ ಹಿಮ ಸಂಗ್ರಹವಾಗುತ್ತಿದೆ. ಈ ಹಿನ್ನೆಲೆ ಚೀನಾ ಸೇನೆಯ ಜೊತೆಗೆ ನಿರಂತರ ಮತ್ತು ಸುರಕ್ಷಿತ ಸಂಪರ್ಕ ಸಾಧಿಸುವ ಉದ್ದೇಶದಿಂದ ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಟ್ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ ಎಂದು ರಾಯಟರ್ಸ್ ಗೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೈಬರ್ ನೆಟವರ್ಕ್ ಸುದ್ದಿಗಳೇ ಸುಳ್ಳು ಎಂದ ಚೀನಾ ವಕ್ತಾರ

ಫೈಬರ್ ನೆಟವರ್ಕ್ ಸುದ್ದಿಗಳೇ ಸುಳ್ಳು ಎಂದ ಚೀನಾ ವಕ್ತಾರ

"ನನಗೆ ತಿಳಿದ ಮಟ್ಟಿಗೆ ಹಿಮಾಲಯದ ವಿವಾದಿತ ಪ್ರದೇಶಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗಾಗಿ ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ನಿರ್ಮಿಸುತ್ತಿರುವ ಬಗ್ಗೆ ಪ್ರಕಟವಾಗಿರುವ ವರದಿಗಳೇ ಸುಳ್ಳಾಗಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್ ತಿಳಿಸಿದ್ದಾರೆ.

ಆಪ್ಟಿಕಲ್ ಫೈಬರ್ ಕೇಬಲ್ ಬಳಕೆ ಬಗ್ಗೆ ಆತಂಕ

ಆಪ್ಟಿಕಲ್ ಫೈಬರ್ ಕೇಬಲ್ ಬಳಕೆ ಬಗ್ಗೆ ಆತಂಕ

"ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಗಡಿಯಲ್ಲಿ ಅವರು ಸೇನೆಯ ಜೊತೆಗೆ ಉತ್ತಮ ಸಂಪರ್ಕ ಸಾಧಿಸುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ವಿವಾದಿತ ಪ್ರದೇಶಗಳಿಂದ ಕೊಂಚ ದೂರದಲ್ಲೇ ಆಪ್ಟಿಕಲ್ ಫೈಬರ್ ಕೇಬಲ್ ನೆಟ್ ವರ್ಕ್ ಅಳವಡಿಕೆ ಮಾಡಿಕೊಳ್ಳುತ್ತಿರುವುದು ಕೊಂಚ ಆತಂಕವನ್ನು ಹುಟ್ಟಿಸುತ್ತಿದೆ" ಎಂದು ಭಾರತೀಯ ಸೇನೆಯ ಉನ್ನತ ಅಧಿಕಾರಿಯೊಬ್ಬರು ರಾಯಟರ್ಸ್ ಗೆ ತಿಳಿಸಿದ್ದರು ಎಂದು ವರದಿಯಾಗಿತ್ತು.

ಭಾರತ-ಚೀನಾ ಗಡಿಯಲ್ಲಿ ಫೈಬರ್ ಕೇಬಲ್ ಪತ್ತೆ

ಭಾರತ-ಚೀನಾ ಗಡಿಯಲ್ಲಿ ಫೈಬರ್ ಕೇಬಲ್ ಪತ್ತೆ

ಕಳೆದ ನಾಲ್ಕು ತಿಂಗಳಿನಿಂದಲೂ ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರ ಮಧ್ಯೆ ಆಗಸ್ಟ್ ತಿಂಗಳಿನಲ್ಲಿ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಭಾರತೀಯ ವಾಯು ಪಡೆಯು ಪರಿವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಇದೇ ಆಪ್ಟಿಕಲ್ ಫೈಬರ್ ಕೇಬಲ್ ಗಳು ಪತ್ತೆಯಾಗಿದ್ದವು ಎಂದು ತಿಳಿದು ಬಂದಿದೆ.

Recommended Video

    Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada
    ಭಾರತದಿಂದ ರೇಡಿಯೋ ನೆಟ್ ವರ್ಕ್ ಬಳಕೆ

    ಭಾರತದಿಂದ ರೇಡಿಯೋ ನೆಟ್ ವರ್ಕ್ ಬಳಕೆ

    ಹಿಮಾಲಯ ಪರ್ವತಗಳ ಮಧ್ಯೆ ನಿಂತಿರುವ ಭಾರತೀಯ ಯೋಧರ ಜೊತೆಗೆ ಸಂಪರ್ಕ ಸಾಧಿಸುವುದಕ್ಕೆ ಹಳೆಯ ತಂತ್ರಜ್ಞಾನವನ್ನೇ ಬಳಕೆ ಮಾಡಲಾಗುತ್ತಿದೆ. ಪ್ರಸ್ತುತ ಭಾರತೀಯ ಸೇನೆಯು ರೇಡಿಯೋ ಸಾಧನವನ್ನು ಬಳಕೆ ಮಾಡುತ್ತಿದೆ. ರೇಡಿಯೋ ಸಾಧನಕ್ಕೆ ಹೋಲಿಸಿದ್ದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ನೆಟವರ್ಕ್ ಹೆಚ್ಚು ವೇಗ ಮತ್ತು ಸುರಕ್ಷಿತವಾಗಿರುತ್ತದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+