ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾ ಜೊತೆ ಚೀನಾ ಡೀಲ್: ಫಲಿಸುತ್ತಾ ಈ ಇಬ್ಬರ ಉದ್ದೇಶ?

|
Google Oneindia Kannada News

ಬೀಜಿಂಗ್, ಮೇ 14: ಕೊರೊನಾ ವೈರಸ್‌ ತಡೆಯಲು ಸರ್ಕಾರಗಳು ಒಂದೆಡೆ ಪ್ರಯತ್ನ ಮಾಡ್ತಿದ್ರೆ, ಮತ್ತೊಂದೆಡೆ ವೈಜ್ಞಾನಿಕ ಪ್ರಯೋಗಾಲಯಗಳು ಕೊವಿಡ್‌ಗೆ ಔಷಧ ಪತ್ತೆ ಹಚ್ಚುವ ಸಾಹಸದಲ್ಲಿದೆ.

ಚೀನಾ, ಅಮೆರಿಕ, ಯುಕೆ, ಜರ್ಮನ್, ಭಾರತ, ಇಟಲಿ ಹೀಗೆ ವಿಶ್ವದ ಪ್ರಮುಖ ದೇಶಗಳು ಕೊರೊನಾಗೆ ಮದ್ದು ಕಂಡುಹಿಡಿಯವ ಮಾರ್ಗದಲ್ಲಿ ಹೆಜ್ಜೆಯಿಡುತ್ತಿದೆ. ಅದ್ಯಾವ ದೇಶ ಈ ಸೋಂಕಿಗೆ ಮೊದಲು ಔಷಧ ಕಂಡುಹಿಡಿಯುತ್ತೋ ಗೊತ್ತಿಲ್ಲ. ಆದರೆ, ಈ ಹೋರಾಟದಲ್ಲಿ ಗೆಲುವು ಕಾಣುವ ದೇಶಕ್ಕೆ ಜಗತ್ತಿನ ಇತರೆ ರಾಷ್ಟ್ರಗಳ ಮಧ್ಯೆ ಪ್ರಾಬಲ್ಯ ಸಾಧಿಸಲು ಇದು ಒಳ್ಳೆಯ ಅವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊರೊನಾದಲ್ಲಿ ಹೋದ ಚೀನಾದ ಮಾನ, ಮಾಸ್ಕ್ ನಲ್ಲಿ ಮೂರಾಬಟ್ಟೆ ಆಯಿತು! ಕೊರೊನಾದಲ್ಲಿ ಹೋದ ಚೀನಾದ ಮಾನ, ಮಾಸ್ಕ್ ನಲ್ಲಿ ಮೂರಾಬಟ್ಟೆ ಆಯಿತು!

ದೇಶ-ದೇಶಗಳು ಔಷಧ ಕಂಡು ಹಿಡಿಯಲು ಪರಸ್ಪರ ಒಪ್ಪಂದ ಮಾಡಿಕೊಳ್ಳುತ್ತಿವೆ. ಇದೀಗ, ಕೆನಡಾ ಜೊತೆ ಚೀನಾ ಡೀಲ್ ಮಾಡಿದೆ. ಕೆನಡಾ ದೇಶಕ್ಕೆ ಚೀನಾ ಬೆಂಬಲಿಸಲು ಮುಂದಾಗಿದೆ. ಮುಂದೆ ಓದಿ....

ಖಚಿತ ಪಡಿಸಿದ ಚೀನಾ

ಖಚಿತ ಪಡಿಸಿದ ಚೀನಾ

ಕೊರೊನಾ ವೈರಸ್‌ ರೋಗಕ್ಕೆ ಲಸಿಕೆ ಕಂಡುಹಿಡಿಯುವ ಉದ್ದೇಶದಿಂದ ಕೆನಡಾಗೆ ಚೀನಾ ಸಂಪೂರ್ಣ ಸಹಕಾರ ನೀಡುತ್ತೆ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಬುಧವಾರ ಖಚಿತಪಡಿಸಿದ್ದಾರೆ. ಕೆನಡಾ ಮಾತ್ರವಲ್ಲ ವಿಶ್ವದ ರಾಷ್ಟ್ರಗಳೊಂದಿಗೆ ಚೀನಾ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಚೀನಾ ಲ್ಯಾಬ್ ಜೊತೆ ಸಹಕಾರ

ಚೀನಾ ಲ್ಯಾಬ್ ಜೊತೆ ಸಹಕಾರ

ಚೀನಾದ ಕ್ಯಾನ್‌ಸಿನೊ ಬಯೋಲಾಜಿಕ್ಸ್ ಇಂಕ್‌ ಲ್ಯಾಬ್‌ನೊಂದಿಗೆ ಕೆನಡಾ ಸಹಕರಿಸುತ್ತಿದೆ ಎಂದು ಕೆನಡಾದ ರಾಷ್ಟ್ರೀಯ ಸಂಶೋಧನಾ ಮಂಡಳಿ ಮಂಗಳವಾರ ಹೇಳಿತ್ತು. ಬುಧವಾರ ಆ ಸುದ್ದಿಯನ್ನು ಚೀನಾವೂ ಖಚಿತಪಡಿಸಿದೆ.

32 ಟನ್ ವೈದ್ಯಕೀಯ ಸಾಮಾಗ್ರಿ ರವಾನೆ

32 ಟನ್ ವೈದ್ಯಕೀಯ ಸಾಮಾಗ್ರಿ ರವಾನೆ

''ಚೀನಾ ಸರ್ಕಾರವು 32 ಟನ್ ವೈದ್ಯಕೀಯ ಸಾಮಾಗ್ರಿಗಳನ್ನು ಕೆನಡಾಕ್ಕೆ ರವಾನಿಸಿದೆ. ಕೆನಡಾ ಕಡೆಯವರಿಗೆ ಇಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ನಾವು ಸಕ್ರಿಯ ಸಹಾಯ ಮತ್ತು ಅನುಕೂಲವನ್ನು ನೀಡುತ್ತಿದ್ದೇವೆ'' ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ವೈರಸ್‌ಗೆ ಗಡಿ ಇಲ್ಲ

ವೈರಸ್‌ಗೆ ಗಡಿ ಇಲ್ಲ

ಕೊರೊನಾ ವೈರಸ್ ಯಾವುದೇ ಗಡಿ ಇಲ್ಲ. ಇಡೀ ಮಾನವಕುಲ ಇದರಿಂದ ಸಮಸ್ಯೆ ಎದುರಿಸುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಅತ್ಯಗತ್ಯ. ಡ್ರಗ್ಸ್ ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಕೆನಡಾ ಸೇರಿದಂತೆ ವಿಶ್ವ ರಾಷ್ಟ್ರಗಳೊಂದಿಗೆ ಅಂತರರಾಷ್ಟ್ರೀಯ ಸಹಕಾರವನ್ನು ನೀಡಲು ಚೀನಾ ಸಿದ್ಧ ಎಂದು ಹೇಳಿದ್ದಾರೆ.

English summary
China Foreign Ministry spokesperson confirms cooperation with Canada on COVID-19 vaccine Development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X