ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ವಿಶ್ವದ ಎತ್ತರದ ವಾಯು ಮಾಲಿನ್ಯ ಶುದ್ಧೀಕರಣ ಘಟಕ

|
Google Oneindia Kannada News

ಬೀಜಿಂಗ್, ನವೆಂಬರ್ 09 : ವಿಶ್ವದಲ್ಲಿಯೇ ಅತೀವೇಗವಾಗಿ ಕಾಡನ್ನು ಬೆಳೆಸುತ್ತಿದ್ದು, ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ಹರಸಾಹಸಪಡುತ್ತಿದ್ದರೂ, ಚೀನಾ ಕೂಡ ಈ ವಾಯು ಮಾಲಿನ್ಯದ ಪಿಡುಗಿನಿಂದ ಪರಿತಪಿಸುತ್ತಿದೆ.

ಇದು ಜಾಗತಿಕ ತಾಪಮಾನದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿರುವುದರಿಂದ, ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ಜಗತ್ತಿನ ಅತೀ ಎತ್ತರವಾದ ವಾಯು ಶುದ್ಧೀಕರಣ ಘಟಕ(328 ಅಡಿ ಎತ್ತರ)ವನ್ನು ನಿರ್ಮಿಸಿದೆ. ಇದನ್ನು ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕ್ಸಿಯನ್ ಎಂಬಲ್ಲಿ ನಿರ್ಮಿಸಲಾಗಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

ಲ್ಯಾನ್ಸೆಟ್ ವರದಿಯ ಪ್ರಕಾರ, ಚೀನಾದಲ್ಲಿ ವಾಯು ಮಾಲಿನ್ಯದಿಂದ 1.8 ಮಿಲಿಯನ್ ಜನರು ಅಸುನೀಗಿದ್ದಾರೆ. ಇಡೀ ದೇಶವನ್ನು ಕಂಗೆಡಿಸಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ, ಪ್ರಯೋಗಾತ್ಮಕವಾಗಿ ವಿಶ್ವದಲ್ಲಿಯೇ ಎತ್ತರವಿದೆ ಎನ್ನಲಾದ 100 ಮೀಟರ್ ಎತ್ತರದ ವಾಯು ಶುದ್ಧೀಕರಣ ಘಟಕ ಸ್ಥಾಪಿಸಿದೆ.

China builds tallest air purifier to combat pollution

ಈ ಘಟಕ ಸ್ಥಾಪನೆಯಾದಾಗಿನಿಂದ ಆ ಪ್ರದೇಶದಲ್ಲಿರುವ ವಾಯು ಮಾಲಿನ್ಯ ಸಾಕಷ್ಟು ತಗ್ಗಿದೆ ಮತ್ತು ಜನರು ಶುದ್ಧ ವಾಯು ಸೇವಿಸುವಂತಾಗಿದೆ. ಮಲಿನವಾದ ವಾಯುವನ್ನು ಈ ಘಟಕದಲ್ಲಿರುವ ಗ್ಲಾಸ್ ಹೌಸ್ ಸೆಳೆದು, ಅದನ್ನು ಸೌರ ಶಕ್ತಿಯನ್ನು ಬಳಸಿ ಬಿಸಿ ಮಾಡಲಾಗುತ್ತದೆ. ನಂತರ ಅದನ್ನು ಸ್ವಚ್ಛಗೊಳಿಸುವ ವಿವಿಧ ಫಿಲ್ಟರ್ ಗಳ ಮೂಲಕ ವಾತಾವರಣಕ್ಕೆ ಬಿಡಲಾಗುತ್ತದೆ.

ವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರುವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರು

ದೆಹಲಿಯಲ್ಲಿಯೂ ಇವೆ : ಭಾರತದ ರಾಜಧಾನಿ ನವದೆಹಲಿಯಲ್ಲಿ ಕೂಡ ಎರಡು ಸಣ್ಣ ಪ್ರಮಾಣದ ವಾಯು ಶುದ್ಧೀಕರಣ ಸಾಧನಗಳನ್ನು ಅಳವಡಿಸಲಾಗಿದೆ. ಆದರೆ, ಕೇವಲ 500 ಮೀಟರ್ ಸುತ್ತಳತೆಯಲ್ಲಿರುವ ವಾಯುವನ್ನು ಮಾತ್ರ ಸೆಳೆದುಕೊಂಡು ಶುದ್ಧೀಕರಿಸುತ್ತದೆ. ನವದೆಹಲಿಯ ನಿವಾಸಿಗಳ ಉಸಿರುಗಟ್ಟಿಸುತ್ತಿರುವ ವಾಯು ಮಾಲಿನ್ಯದ ಪ್ರಮಾಣ ನೋಡಿದರೆ ಇದು ಯಾವುದಕ್ಕೂ ಸಾಲುವುದಿಲ್ಲ.

English summary
China has built tallest air purifier (328 feat) to combat air pollution. According to the Lancet report, air pollution in China killed about 1.8 million people. According to the Lancet report, air pollution in China killed about 1.8 million people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X