China: ಅಂಡರ್ ವಾಟರ್ 'ಬುಲೆಟ್ ರೈಲು' ಮಾರ್ಗ ನಿರ್ಮಾಣ ಪೂರ್ಣ, ವೈಶಿಷ್ಟ್ಯವೇನು?
Underwater Bullet Train: ತಂತ್ರಜ್ಞಾನದಲ್ಲಿ ದಶಕಗಳಷ್ಟು ಮುಂದೆ ಇರುವ ಚೀನಾ ದೇಶದಲ್ಲಿ ಇದೀಗ ಅಂಡರ್‌ವಾಟರ್ ಬುಲೆಟ್ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿನ ಯಾಂಗ್ಟ್ಜಿ ನದಿ ಅಡಿಯಲ್ಲಿ 11.8 ಕಿ.ಮೀ. ಉದ್ದದ ಅತಿವೇಗದ ಸುರಂಗ ನಿರ್ಮಾಣವು ಪೂರ್ಣಗೊಳಿಸಿ ಚೀನಾ ಮೈಲಿಗಲ್ಲು ಸಾಧನೆ ಮಾಡಿದೆ. ಇದು ಶಾಂಘೈನ ಚಾಂಗ್ಮಿಂಗ್‌ನಿಂದ ಜಿಯಾಂಗ್ಸು ಪ್ರಾಂತ್ಯದ ತೈಕಾಂಗ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ.
ಒಟ್ಟು 14.25 ಕಿ.ಮೀ. ಬುಲೆಟ್ ರೈಲು ಯೋಜನೆ ಇದಾಗಿದೆ. ಅದರಲ್ಲಿ 11.18 ಕಿ.ಮೀ. ಸುರಂಗವು ನೀರಿನ ಅಡಿಯಲ್ಲಿ ನಿರ್ಮಾಣವಾಗಿದೆ. ಹೊಸ ತಂತ್ರಜ್ಞಾನಗಳ ಸಹಾಯ ಮತ್ತು "ಲಿಂಗ್‌ಹಾಂಗ್" ಶೀಲ್ಡ್ ಟನೆಲಿಂಗ್ ಯಂತ್ರ ಬಳಸಿ ನಿರ್ಮಿಸಿದ ಅಂಡರ್ ವಾಟರ್ ಬುಲೆಟ್ ಮಾರ್ಗ ಇದಾಗಿದೆ. ಸದರಿ ಮಾರ್ಗದಲ್ಲಿ ಬುಲೆಟ್ ರೈಲುಗಳು ಒಂದು ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚರಿಸಲು ಸಹಾಯವಾಗುವಂತೆ ಸ್ಥಾಪಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

2024ರಲ್ಲಿ ಅನಾವರಣಗೊಂಡ 'ಸಿಆರ್450 ಬುಲೆಟ್ ರೈಲು', ವಿಶ್ವದ ಅತ್ಯಂತ ವೇಗದ ರೈಲು ಎಂದು ಖ್ಯಾತಿ ಪಡೆದಿದೆ. ಸಿಜಿಟಿಎನ್ ಪ್ರಕಾರ, ಗರಿಷ್ಠ 453 ಕಿ.ಮೀ. ವೇಗದಲ್ಲಿ ಬರೋಬ್ಬರಿ 896 ಕಿ.ಮೀ. ಸಂಚಾರ ಮಾಡಿ ದಾಖಲೆ ನಿರ್ಮಿಸಿತ್ತು. ಇದನ್ನು ಸಿಆರ್‌ಆರ್‌ಸಿ ಚಾಂಗ್‌ಚುನ್ ವೇಹಿಕಲ್ಸ್ ಮತ್ತು ಸಿಆರ್‌ಆರ್‌ಸಿ ಸಿಫಾಂಗ್ ಕಂ. ಸಂಸ್ಥೆ ಜಂಟಿಯಾಗಿ ಸ್ಥಾಪಿಸಿವೆ.
ಬುಲೆಟ್ ರೈಲು ವೈಶಿಷ್ಟ್ಯ
ಸಿಆರ್450ರ ಪ್ರಮುಖ ಅಂಶಗಳೆಂದರೆ ಅದರ ವಾಯುಬಲ ವಿನ್ಯಾಸ ಮತ್ತು ರಚನಾತ್ಮಕ ಸುಧಾರಣೆಗಳನ್ನು ರೈಲಿನಲ್ಲಿ ತರಲಾಗಿದೆ. ಈ ಬುಲೆಟ್ ರೈಲು ಪ್ರಸ್ತುತ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಅದಕ್ಕಾಗಿ ಅದರ ರೈಲಿನ ಮುಂದಿನ ಇಂಜಿನ್ ಭಾಗವನ್ನು ಸುಮಾರು 12.5-15 ಮೀಟರ್‍ವರೆಗೆ ಮೂಗಿನ ರೀತಿ ಉದ್ದನೆಯವಾಗಿ ವಿಸ್ತರಿಸಲಾಗಿದೆ. ಈ ರೈಲು ಕೇವಲ 4 ನಿಮಿಷ 40 ಸೆಕೆಂಡ್‌ಗಳಲ್ಲಿ ನಿಂತ ಸ್ಥಿತಿಯಿಂದ ಗಂಟೆಗೆ 350 ಕಿ.ಮೀ. ವೇಗ ತಲುಪುವ ಸಾಮರ್ಥ್ಯ ಹೊಂದಿದೆ. ಇದರ ಒಟ್ಟಾರೆ ಪ್ರತಿರೋಧವನ್ನು 22ರಷ್ಟಾಗಿದೆ ಎಂದು ಚೀನಾ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬುಲೆಟ್ ರೈಲು ಬೋಗಿಗಳನ್ನು ಸಂಪೂರ್ಣವಾಗಿ ಜೋಡಿಸುವಾಗ ಸ್ಕರ್ಟ್ ಫಲಕಗಳನ್ನು ಕಡಿಮೆ ಮಾಡಲಾಗುತ್ತದೆ. ಚಕ್ರಗಳು ಗಾಳಿಗೆ ತೆರೆದುಕೊಳ್ಳುವುದನ್ನು ಕಡಿಮೆ ಮಾಡುವ ತಂತ್ರಜ್ಞಾನ ಇದರಲ್ಲಿದೆ. ಕಂಪನಿಯ ರೇಸ್ ಕಾರುಗಳಿಗೆ ಹೋಲುವ ವಿನ್ಯಾಸ ಇಲ್ಲಿ ಅಳವಡಿಸಲಾಗಿದೆ. ಇನ್ನೂ ರೈಲಿನ ಎತ್ತರ 20 ಸೆಂಟಿ ಮೀಟರ್‌ನಷ್ಟಿದೆ. ಇದು ಒಟ್ಟು 50 ಟನ್ ಭಾರ ಹೊಂದಿದೆ. ಒಟ್ಟಾರೆ ಚೀನಾ ಅಂಡರ್‌ವಾಟರ್‌ನಲ್ಲಿ ಬುಲೆಟ್ ರೈಲು ಮಾರ್ಗ ಸ್ಥಾಪಿಸಿ ದಾಖಲೆ ಮಾಡಿದೆ.












Click it and Unblock the Notifications