• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಬಿಬಿಸಿ’ ಬ್ಯಾನ್ ಮಾಡಿದ ಚೀನಾ, ಕಾರಣವೇನು ಗೊತ್ತಾ..?

|

ಚೀನಾದಲ್ಲಿ ವಿಶ್ವ ವಿಖ್ಯಾತ ಬಿಬಿಸಿ ಚಾನೆಲ್ ತನ್ನ ಪ್ರಸಾರ ನಿಲ್ಲಿಸಬೇಕಾಗಿ ಬಂದಿದೆ. ಚೀನಾದಲ್ಲಿ ಬಿಬಿಸಿ ಸುದ್ದಿ ಪ್ರಸಾರ ಮಾಡದಂತೆ ಚೀನಿ ಸರ್ಕಾರ ನಿಷೇಧ ಹೇರಿದೆ. ಈಗಾಗಲೇ ಪ್ರತಕರ್ತರು ಹಾಗೂ ಪತ್ರಿಕೋದ್ಯಮದ ಹಕ್ಕು ಕಿತ್ತುಕೊಂಡಿರುವ ಆರೋಪವೂ ಸೇರಿದಂತೆ ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ ಹಲವು ಎಡವಟ್ಟುಗಳನ್ನ ಮಾಡಿಕೊಂಡಿರುವ ಚೀನಾ, ಮತ್ತೊಮ್ಮೆ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ 'ಸ್ಟೇಟ್‌ ಫಿಲ್ಮ್‌, ಟಿವಿ ಆ್ಯಂಡ್‌ ರೇಡಿಯೊ ಅಡ್ಮಿನಿಸ್ಟ್ರೇಷನ್‌' ಬಿಬಿಸಿ ಸಂಸ್ಥೆಗೆ ನಿಷೇಧ ಹೇರಿರುವ ಬಗ್ಗೆ ಸ್ಪಷ್ಟನೆ ನೀಡಿದೆ.

ಕಮ್ಯೂನಿಸ್ಟ್ ದೇಶ ಚೀನಾದಲ್ಲಿ ಸುದ್ದಿಗಳ ಪ್ರಸಾರಕ್ಕೆ ತನ್ನದೇ ಕಠಿಣ ನಿಯಮಗಳು ಇವೆ. ನಿಯಮ ಉಲ್ಲಂಘಿಸುವ ಪತ್ರಕರ್ತರು ಅಥವಾ ಮಾಧ್ಯಮ ಸಂಸ್ಥೆಗಳ ವಿರುದ್ಧ ಈವರೆಗೂ ನಿರ್ಧಾಕ್ಷಿಣ್ಯ ಕ್ರಮಗಳನ್ನು ಜರುಗಿಸಿದೆ ಚೀನಾ. ಇದೀಗ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಮಾಧ್ಯಮ ಸಂಸ್ಥೆಯಾಗಿರುವ ಬಿಬಿಸಿ ಸಂಸ್ಥೆಗೆ ಕೂಡ ಚೀನಿ ನಿಯಮಗಳ ಬಿಸಿ ತಟ್ಟಿದೆ. ಚೀನಾದ ವಿದ್ಯಮಾನಗಳ ಬಗ್ಗೆ ಸುದ್ದಿ ಮಾಡುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಉಲ್ಲಂಘಿಸಿರುವ ನೆಪ ಹೇಳಿಕೊಂಡು 'ಬಿಬಿಸಿ ವರ್ಲ್ಡ್‌ ನ್ಯೂಸ್'ಗೆ ನಿಷೇಧ ಹೇರಲಾಗಿದೆ.

ಸರಿಯಾದ ರೀಪ್ಲೆ ಕೊಟ್ಟ ಬ್ರಿಟನ್..!

ಸರಿಯಾದ ರೀಪ್ಲೆ ಕೊಟ್ಟ ಬ್ರಿಟನ್..!

ಬಿಬಿಸಿ ಹುಟ್ಟಿದ್ದು ಬ್ರಿಟನ್‌ನಲ್ಲಿ. ಸುಮಾರು 98 ವರ್ಷದ ಹಿಂದೆ ಅಂದ್ರೆ, 1922ರಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಎಂಬ ಹೆಸರಲ್ಲಿ ಬಿಬಿಸಿ ಹುಟ್ಟಿಕೊಂಡಿದ್ದು. 1927ರಲ್ಲಿ ‘ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್' ಆಗಿ ಬದಲಾಗಿತ್ತು. ಹೀಗೆ ಸುಮಾರು 1 ಶತಮಾನದಷ್ಟು ಇತಿಹಾಸ ಈ ಸಂಸ್ಥೆಗೆ ಇದೆ. ಹೀಗಾಗಿ ಬಿಬಿಸಿ ಸಂಸ್ಥೆ ಬಗ್ಗೆ ಬ್ರಿಟನ್‌ಗೆ ಹೆಮ್ಮೆ ಇದೆ. ಆದರೆ ಇದೀಗ ಚೀನಾ ತನ್ನ ನೆಲದಲ್ಲಿ ಬಿಬಿಸಿ ಸಂಸ್ಥೆಗೆ ನಿಷೇಧ ಹೇರಿದೆ. ಇದು ಬ್ರಿಟನ್‌ಗೆ ಸಹಜವಾಗಿ ಕೋಪ ತರಿಸಿದೆ. ಚೀನಾ ಕೈಗೊಂಡಿರುವ ನಿರ್ಧಾವನ್ನು ಬ್ರಿಟನ್ ಖಂಡಿಸಿದ್ದು, ನಾವು ಇದನ್ನ ಅಪೇಕ್ಷೆ ಮಾಡಿರಲಿಲ್ಲ. ಇದು ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದು ತೀಕ್ಷ್ಣ ಉತ್ತರ ನೀಡಿದೆ ಬ್ರಿಟನ್.

‘ಬಿಬಿಸಿ’ ಬಗ್ಗೆ ಚೀನಾಗೆ ಮುನಿಸು ಏಕೆ..?

‘ಬಿಬಿಸಿ’ ಬಗ್ಗೆ ಚೀನಾಗೆ ಮುನಿಸು ಏಕೆ..?

ಉಯಿಘರ್ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸುದ್ದಿಯೊಂದನ್ನು ಇತ್ತೀಚೆಗೆ ಬಿಬಿಸಿ ಪ್ರಸಾರ ಮಾಡಿತ್ತು. ಇದರಲ್ಲಿ ಚೀನಾ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಕಠಿಣಕ್ರಮಕ್ಕೆ ಮುಂದಾಗಿದೆ ಚೀನಿ ಸರ್ಕಾರ. ಈ ಹಿಂದೆ ಕೂಡ ಇದೇ ರೀತಿ ಚೀನಾ ಸಾಕಷ್ಟು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ವಿರುದ್ಧ ನಿಷೇಧ ಹೇರಿದ್ದು ಉಂಟು. ಆದರೆ ಈವರೆಗೂ ಬಿಬಿಸಿ ತಂಟೆಗೆ ಹೋಗಿರಲಿಲ್ಲ. ಇದೀಗ ಆ ನಿರ್ಧಾರವನ್ನೂ ಕೈಗೊಂಡಿದೆ ಚೀನಾ. ಈ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳ ಮಾಧ್ಯಮಗಳಿಗೆ ವಾರ್ನಿಂಗ್ ಕೊಟ್ಟಿದೆ ಡ್ರ್ಯಾಗನ್ ನಾಡು.

ಅಮೆರಿಕ ಸುಮ್ಮನೆ ಕೂರುತ್ತಾ..!?

ಅಮೆರಿಕ ಸುಮ್ಮನೆ ಕೂರುತ್ತಾ..!?

ಹೌದು, ಚೀನಾದ ಬಹುದೊಡ್ಡ ಶತ್ರು ಅಮೆರಿಕ. ಹಾಗೇ ಅಮೆರಿಕ ಪಾಲಿನ ದೊಡ್ಡ ಶತ್ರು ಚೀನಾ. ರಷ್ಯಾ ಬಿಟ್ಟು ಅಮೆರಿಕವನ್ನ ಹೆಚ್ಚು ಕಾಡುತ್ತಿರುವುದು ಚೀನಾ. ಹೀಗಾಗಿ ಬಿಬಿಸಿ ಮೇಲಿನ ನಿಷೇಧವನ್ನು ಅಮೆರಿಕ ಖಂಡಿಸಿದೆ. ತನ್ನ ಗೆಳೆಯ ಬ್ರಿಟನ್ ಪರವಾಗಿ ಬ್ಯಾಟ್ ಬೀಸಿರುವ ಅಮೆರಿಕ, ಚೀನಾ ವಿರುದ್ಧ ಗಂಭೀರ ಆರೋಪ ಮಾಡಿದೆ. ಪತ್ರಿಕಾ ಸ್ವಾತಂತ್ರ್ಯ ಹರಣ ಸಹಿಸಲು ಸಾಧ್ಯವಿಲ್ಲ, ಚೀನಾ ಬಿಬಿಸಿ ವಿರುದ್ಧ ಕೈಗೊಂಡ ನಿರ್ಣಯ ಖಂಡನೀಯ ಎಂದು ಪ್ರತ್ಯುತ್ತರ ನೀಡಿದೆ ಅಮೆರಿಕದ ವೈಟ್‌ಹೌಸ್.

ಯುರೋಪ್‌ ದೇಶಗಳಲ್ಲೂ ಫ್ಯಾನ್ಸ್..!

ಯುರೋಪ್‌ ದೇಶಗಳಲ್ಲೂ ಫ್ಯಾನ್ಸ್..!

ಬಿಬಿಸಿ ಮಾಧ್ಯಮ ಸಂಸ್ಥೆಗೆ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಅದರಲ್ಲೂ ಯುರೋಪ್‌ನಲ್ಲಿ ಬಿಬಿಸಿ ಜನಪ್ರಿಯವಾಗಿದೆ. ಆದರೆ ಈಗ ಚೀನಾ ಬಿಬಿಸಿ ಸಂಸ್ಥೆ ವಿರುದ್ಧ ಕೈಗೊಂಡ ನಿರ್ಧಾರಕ್ಕೆ ಯುರೋಪ್‌ನ ದೇಶಗಳು ಹೇಗೆ ಪ್ರತಿಕ್ರಿಯೆ ನೀಡಲಿವೆ ಕಾದು ನೋಡಬೇಕು. ಏಕೆಂದರೆ ಚೀನಾ ತನ್ನ ಅಸ್ತಿತ್ವಕ್ಕಾಗಿ ಈಗಾಗಲೇ ಯುರೋಪ್‌ ಒಕ್ಕೂಟದ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಬಿಸಿ ಸಂಸ್ಥೆ ಮೇಲಿನ ನಿಷೇಧ ಸಹಜವಾಗಿ ಈ ಸಂಬಂಧಕ್ಕೆ ಹುಳಿ ಹಿಂಡುವ ಪ್ರಯತ್ನವೂ ಆಗಬಹುದು.

English summary
China banned BBC World News for violating countries news publishing law. Britain and other countries condemned China’s decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X