ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ಗೆ ಚೀನಾದಿಂದ ಬಂತು ಮೂಗಿನ ಸಿಂಪಡಣೆ ಲಸಿಕೆ

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 10: ಕೊರೊನಾ ವೈರಸ್‌ಗೆ ಮೊದಲ ಪರಿಣಾಮಕಾರಿ ಲಸಿಕೆಯನ್ನು ಕಂಡುಹಿಡಿಯುವ ಪೈಪೋಟಿ ತೀವ್ರವಾಗಿದ್ದು, ಮೂಗಿಗೆ ಸಿಂಪಡಿಸುವ ಹೊಸ ಬಗೆಯ ಲಸಿಕೆಯ ಪ್ರಯೋಗಕ್ಕೆ ಚೀನಾ ಗುರುವಾರ ಅನುಮತಿ ನೀಡಿದೆ.

ಚೀನಾದ ಅಧಿಕೃತ ಮಾಧ್ಯಮ ವರದಿಗಳ ಪ್ರಕಾರ, ಮೂಗಿಗೆ ಸಿಂಪಡಿಸುವ ಲಸಿಕೆಯ ಮೊದಲ ಹಂತದ ಪ್ರಯೋಗವು ನವೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಅಧಿಕಾರಿಗಳು 100 ಮಂದಿ ಸ್ವಯಂ ಸೇವಕರನ್ನು ಬಳಸಿಕೊಳ್ಳುತ್ತಿದೆ.

ಭಾರತದಲ್ಲಿಯೂ 'ಕೋವಿಶೀಲ್ಡ್' ಲಸಿಕೆ ಪ್ರಯೋಗಕ್ಕೆ ತಡೆಭಾರತದಲ್ಲಿಯೂ 'ಕೋವಿಶೀಲ್ಡ್' ಲಸಿಕೆ ಪ್ರಯೋಗಕ್ಕೆ ತಡೆ

ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನ ಆಡಳಿತವು ಅನುಮೋದನೆ ನೀಡಿರುವ ಈ ಬಗೆಯ ಏಕೈಕ ಲಸಿಕೆ ಇದಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಹಾಂಕಾಂಗ್ ಹಾಗೂ ಚೀನಾ ಮುಖ್ಯ ಭೂಮಿ ನಡುವಿನ ಸಹಯೋಗದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹಾಂಕಾಂಗ್ ವಿಶ್ವವಿದ್ಯಾಲಯ, ಕ್ಸಿಯಾಮೆನ್ ವಿಶ್ವವಿದ್ಯಾಲಯ ಮತ್ತು ಬೀಜಿಂಗ್ ವಾಂಟೈ ಬಯಾಲಾಜಿಕಲ್ ಫಾರ್ಮಸಿಯ ಸಂಶೋಧಕರು ಜತೆಗೂಡಿ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಮುಂದೆ ಓದಿ.

ರಕ್ಷಣಾ ಸಾಮರ್ಥ್ಯ ವೃದ್ಧಿ

ರಕ್ಷಣಾ ಸಾಮರ್ಥ್ಯ ವೃದ್ಧಿ

ಪ್ರತಿಕಾಯ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಈ ಲಸಿಕೆಯು ಉಸಿರಾಟ ಸಂಬಂಧಿತ ವೈರಸ್ ಸೋಂಕುಗಳ ವಿರುದ್ಧದ ಕ್ರಿಯೆಯನ್ನು ಪ್ರಚೋದಿಸುತ್ತದೆ. ಈ ಲಸಿಕೆ ಪಡೆದುಕೊಂಡವರಲ್ಲಿ ಇನ್‌ಫ್ಲೂಯೆಂಜಾ ಮತ್ತು ನಾವಲ್ ಕೊರೊನಾ ವೈರಸ್‌ನ ವಿರುದ್ಧದ ರಕ್ಷಣಾ ಸಾಮರ್ಥ್ಯ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಇತರೆ ವೈರಸ್‌ಗಳ ನಿಯಂತ್ರಣ

ಇತರೆ ವೈರಸ್‌ಗಳ ನಿಯಂತ್ರಣ

ಇದರ ಜತೆಗೆ ಎಚ್‌1ಎನ್1, ಎಚ್3ಎನ್2 ಮತ್ತು ಬಿ ಇನ್‌ಫ್ಲೂಯೆಂಜಾ ವೈರಸ್‌ಗಳನ್ನೂ ನಾಸಿಕ ಸಿಂಪಡೆಣೆಯ ಲಸಿಕೆ ನಿಯಂತ್ರಿಸಬಲ್ಲದು. ಇದರು ಮೂರು ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಮೈಕ್ರೊಬಯಾಲಜಿಸ್ಟ್ ಯುಯೆನ್ ಕ್ವೊಕ್ ಯುಂಗ್ ತಿಳಿಸಿದ್ದಾರೆ.

ಕೊವಿಡ್ 19: ವಿಶ್ವದೆಲ್ಲೆಡೆ 2 ಕೋಟಿ ಮಂದಿ ಚೇತರಿಕೆ!ಕೊವಿಡ್ 19: ವಿಶ್ವದೆಲ್ಲೆಡೆ 2 ಕೋಟಿ ಮಂದಿ ಚೇತರಿಕೆ!

ಐದು ಲಸಿಕೆ ತಂತ್ರಜ್ಞಾನ

ಐದು ಲಸಿಕೆ ತಂತ್ರಜ್ಞಾನ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಹೆಚ್ಚಿನ ಪರಿಶೀಲನೆಗಾಗಿ ಪರಿಗಣಿಸಿರುವ ಐದು ಲಸಿಕೆ ತಂತ್ರಜ್ಞಾನಗಳಲ್ಲಿ ಈ ನಾಸಿಕ ಸಿಂಪಡಣೆ ಲಸಿಕೆಯ ಮಾದರಿಯೂ ಸೇರಿದೆ. ಚೀನಾದ ಎಮರ್ಜಿಂಗ್ ಇನ್‌ಫೆಕ್ಟಿಯಸ್ ಡಿಸೀಸಸ್ ಪ್ರಯೋಗಾಲಯವು ಲಸಿಕೆಯ ಸುಧಾರಣೆಯ ಕಾರ್ಯದಲ್ಲಿ ಕ್ಸಿಯಾಮೆನ್ ವಿಶ್ವವಿದ್ಯಾಲಯ ಹಾಗೂ ಬೀಜಿಂಗ್ ವಾಂಟೈ ಬಯಾಲಾಜಿಕಲ್ ಫಾರ್ಮಸಿಯೊಂದಿಗೆ ಕೆಲಸ ಮಾಡುತ್ತಿದೆ.

Recommended Video

China ವಿರುದ್ಧ Siachen ನಲ್ಲಿ ನಮ್ಮ ಯೋಧರಿಗೆ ಎದುರಾಯ್ತು ದೊಡ್ಡ ಸಂಕಷ್ಟ. | Oneindia Kannada
ನಾಲ್ಕು ಬಗೆಯ ತಂತ್ರಜ್ಞಾನ

ನಾಲ್ಕು ಬಗೆಯ ತಂತ್ರಜ್ಞಾನ

ಈ ನಾಸಿಕ ಸಿಂಪಡಣೆ ಲಸಿಕೆಯು ಇನ್‌ಫ್ಲೂಯೆಂಜಾ ಲಸಿಕೆಯ ಅಂಶಗಳನ್ನೇ ಬಳಸಿಕೊಂಡಿದೆ. ಇದರ ಜತೆಗೆ ಚೀನಾವು ಇನ್‌ಆಕ್ಟಿವೇಟೆಡ್ ಲಸಿಕೆಗಳು, ಅಡೆನೊವೈರಲ್ ವೆಕ್ಟರ್ ಆಧಾರಿತ ಲಸಿಕೆಗಳು, ಡಿಎನ್‌ಎ ಮತ್ತು ಎಂಆರ್‌ಎನ್‌ಎ ಲಸಿಕೆಗಳ ಇತರೆ ನಾಲ್ಕು ತಂತ್ರಜ್ಞಾನವನ್ನು ಬಳಸಿ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್‌ಆಕ್ಟಿವೇಟೆಡ್ ಲಸಿಕೆಗಳು ಮಾರುಕಟ್ಟೆಗೆ ಆದಷ್ಟು ಬೇಗನೆ ಬರುವ ನಿರೀಕ್ಷೆಯಿದೆ.

English summary
China has approved for the clinical trials of first nasal spray vaccine for covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X