ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಬೀ ಪ್ರಾಂತ್ಯ "ಕೊರೊನಾ ಹೈಡೇಂಜರ್ ಝೋನ್" ಎಂದು ಗುರುತಿಸಿದ ಚೀನಾ

|
Google Oneindia Kannada News

ಬೀಜಿಂಗ್, ಜನವರಿ 05: ಕೊರೊನಾ ವೈರಸ್ ನ ಹದಿನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಬೀಜಿಂಗ್ ಸಮೀಪದ ಹೆಬೀ ಪ್ರಾಂತ್ಯದಲ್ಲಿನ ಕೆಲವು ಪ್ರದೇಶಗಳನ್ನು "ಕೊರೊನಾ ವೈರಸ್ ನ ಭಾರೀ ಅಪಾಯಕಾರಿ ವಲಯ" ಎಂದು ಚೀನಾ ಸರ್ಕಾರ ಗುರುತಿಸಿದೆ.

ಪತ್ತೆಯಾದ ಹೊಸ 14 ಪ್ರಕರಣಗಳಲ್ಲಿ 11 ಪ್ರಕರಣಗಳು, 2022ರಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲು ನಿಗದಿಪಡಿಸಿರುವ ಶಿಜಿಯಾಜುಂಗ್ ನಗರದ್ದಾಗಿದೆ. ಜೊತೆಗೆ, ಯಾವುದೇ ಲಕ್ಷಣಗಳಿಲ್ಲದೇ ಇಲ್ಲಿ ಹೆಚ್ಚುವರಿಯಾಗಿ ಮೂವತ್ತು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಪ್ರಾಂತೀಯ ಆರೋಗ್ಯ ಆಡಳಿತ ತಿಳಿಸಿದೆ.

ಭಾರತದ ಗಡಿಯಲ್ಲಿ ಚೀನಾ ಸೇನಾ ಆಕ್ರಮಣ ವಿರೋಧಿಸುವ ಕಾಯ್ದೆ ಅಂಗೀಕರಿಸಿದ ಅಮೆರಿಕಭಾರತದ ಗಡಿಯಲ್ಲಿ ಚೀನಾ ಸೇನಾ ಆಕ್ರಮಣ ವಿರೋಧಿಸುವ ಕಾಯ್ದೆ ಅಂಗೀಕರಿಸಿದ ಅಮೆರಿಕ

ಇನ್ನುಳಿದ ಮೂರು ಪ್ರಕರಣಗಳು ಯಾಂತೈ ಹಾಗೂ ಶಿಜಿಯಾಜುಂಗ್ ನ ಇನ್ನಿತರೆ ಪ್ರದೇಶದ್ದಾಗಿದೆ. ಯಾಂತೈ ಪ್ರದೇಶವನ್ನು ಮಧ್ಯಮ ಅಪಾಯಕಾರಿ ವಲಯ ಎಂದು ಗುರುತಿಸಿದೆ.

China Announces Parts Of Hebei Province As Coronavirus High Danger Zone

ಈ ಪ್ರದೇಶಗಳಲ್ಲಿ ಕೊರೊನಾ ವೈರಸ್ ನ ಕಠಿಣ ಪರೀಕ್ಷೆ ಹಾಗೂ ಪ್ರತ್ಯೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಹೊಸ ಕೊರೊನಾ ಪ್ರಕರಣಗಳಿಂದ ಹೆಬೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19ಕ್ಕೆ ಮುಟ್ಟಿದ್ದು, ಕುಟುಂಬ ಸಮಾರಂಭದಂಥ ಒಂದೇ ಘಟನೆ ಈ ಸೋಂಕು ಹರಡಲು ಕಾರಣವಾಗಿದೆಯೇ ಎಂಬುದರ ಕುರಿತು ವೈದ್ಯಕೀಯ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಚೀನಾದಲ್ಲಿ ಪ್ರಸ್ತುತ 87,183 ಕೊರೊನಾ ಸೋಂಕಿನ ಪ್ರಕರಣಗಳಿದ್ದು, ಸೋಂಕಿನಿಂದ ಇದುವರೆಗೂ 4634 ಮಂದಿ ಸಾವನ್ನಪ್ಪಿದ್ದಾರೆ. ಯಾವ ಗುಣಲಕ್ಷಣಗಳಿಲ್ಲದೇ ಕೊರೊನಾ ಸೋಂಕು ಕಾಣಿಸಿಕೊಂಡವರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ.

English summary
China has designated parts of Hebei province near Beijing as a coronavirus high danger zone after 14 new cases of COVID-19 were found
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X