Israel & Gaza: ಹಿಂಸೆ ನಡೆದಿದ್ದ ಜಾಗದಲ್ಲಿ ಈಗ ಖುಷಿ, ಸಂಭ್ರಮ & ಕುಣಿದಾಟ!

ಹಿಂಸಾಚಾರ, ರಕ್ತಪಾತ, ಎಲ್ಲಿ ನೋಡಿದರೂ ಹೆಣಗಳ ರಾಶಿ... ಅಂದಹಾಗೆ ಇದು ಗಾಜಾ ಪಟ್ಟಿ ಪರಿಸ್ಥಿತಿ. ಕಳೆದ 15 ತಿಂಗಳಿಂದ ಕೂಡ ಇದೇ ರೀತಿಯಾಗಿ ನರಳಿ ನರಳಿ ಹೋಗಿತ್ತು ಗಾಜಾ ಪಟ್ಟಿ ಪ್ರದೇಶ. ಅಲ್ಲಿನ ಜನರು ಅನ್ನ & ನೀರು ಇಲ್ಲದೆ ನರಳಿ ಹೋಗಿದ್ದರು. ಹಾಗೇ, ಜನಕ್ಕೆ ಮಲಗಲು ಒಂದು ಸೂರು ಕೂಡ ಇಲ್ಲದಂತೆ ಕಟ್ಟಡಗಳು ನಾಶವಾಗಿ ಹೋಗಿದ್ದವು. ಇಷ್ಟೆಲ್ಲಾ ಒತ್ತಡದ ನಡುವೆ ಇದೀಗ ಸಂಭ್ರಮಾಚರಣೆ ಶುರುವಾಗಿದೆ!

ಹೌದು, ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ವಿರುದ್ಧ 5000 ರಾಕೆಟ್‌ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗಡೆ ನುಗ್ಗಿಬಿಟ್ಟರು. ಆ ನಂತರ ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಈ ಘಟನೆ ನಡೆದು ಹತ್ತಿರ ಹತ್ತಿರ 15 ತಿಂಗಳುಗಳೇ ಕಳೆದಿದೆ. 15 ತಿಂಗಳ ಅವಧಿಯಲ್ಲಿ ತನ್ನ ಶತ್ರು ನಾಶ ಮಾಡಲು ಇಸ್ರೇಲ್ ಬಳಸಿರುವುದು ಸಾವಿರಾರು ಟನ್ ಬಾಂಬ್‌ನ & ಲಕ್ಷಾಂತರ ಗುಂಡುಗಳನ್ನ.

Ceasefire Deal Between Israel and Hamas Sparks Celebrations in Gaza

ಯುದ್ಧದ ನೆಲದಲ್ಲಿ ಭರ್ಜರಿ ಸಂಭ್ರಮ!

ಗಾಜಾ & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಒಂದು ಅಂತಿಮ ಮುದ್ರೆ ಒತ್ತಲು & ಈ ಮೂಲಕ ಹಿಂಸಾಚಾರ ನಿಲ್ಲಿಸಲು ಇದೀಗ ಮಹತ್ವದ ಮಾತುಕತೆ ಮುಗಿದಿದೆ. ಈ ಮಾತುಕತೆ ಫಲವಾಗಿ, ಹಮಾಸ್ & ಇಸ್ರೇಲ್ ಯುದ್ಧ ನಿಲ್ಲಿಸಲು ಒಪ್ಪಿಗೆ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಜನರು ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಯುದ್ಧ ನಿಂತ ಖುಷಿಯಲ್ಲಿ ಕುಣಿದಾಡಿದ್ದಾರೆ. ಇಷ್ಟು ದಿನ ಅನ್ನ & ನೀರು, ನೆರಳು ಇಲ್ಲದೆ ಪರದಾಡಿದ್ದವರ ಪಾಲಿಗೆ ಶಾಂತಿ ಒಪ್ಪಂದ ಹೊಸ ಹುಮ್ಮಸ್ಸು ನೀಡಿದೆ.

3ನೇ ಮಹಾಯುದ್ಧದ ಭಯ ಕಾಡಿತ್ತು!

ರಷ್ಯಾ & ಉಕ್ರೇನ್ ಯುದ್ಧದಂತೆ ಆರಂಭ ಆಗಿದ್ದ ಹಮಾಸ್ & ಇಸ್ರೇಲ್ ಯುದ್ಧ ಭಾರಿ ಆಘಾತ ನೀಡಿತ್ತು. ಯಾಕಂದ್ರೆ ಜಾಗತಿಕವಾಗಿ ಈ ಯುದ್ಧ ಭಯ ಹುಟ್ಟಿಸಿ ಮತ್ತೊಂದು ಮಹಾಯುದ್ಧದ ಆತಂಕ ಮೂಡಿಸಿತ್ತು. ಯುರೋಪ್ ಖಂಡದಲ್ಲಿ ರಷ್ಯಾ & ಉಕ್ರೇನ್ ಬಡಿದಾಟದ ನಡುವೆ, ಇನ್ನೊಂದು ಕಡೆ ಹಮಾಸ್ VS ಇಸ್ರೇಲ್ ಕೂಡ ಕಾದಾಟ ನಡೆಸಿದ್ದವು. ಇಷ್ಟೆಲ್ಲದರ ಪರಿಣಾಮ ಹಮಾಸ್ VS ಇಸ್ರೇಲ್ ಯುದ್ಧ ನಿಲ್ಲಿಸಲು ಒತ್ತಡ ಹೆಚ್ಚಾಗಿತ್ತು. ಈಗ ಅದು ಬಗೆಹರಿದು ಎಲ್ಲವೂ ತಣ್ಣಗಾಗಿದೆ.

20 ಲಕ್ಷ ಜನ ಇಸ್ರೇಲ್ & ಹಮಾಸ್ ಯುದ್ಧ ನಂತರ ಅತಂತ್ರ ಸ್ಥಿತಿಗೆ ತಲುಪಿದ್ದಾರೆ ಎನ್ನುವ ಭಾರಿ ಗಂಭೀರ ಆರೋಪ ಮಾಡಲಾಗಿದೆ. ಇದರ ಜೊತೆಗೆ ಸಾವಿನ ಸಂಖ್ಯೆ ಕೂಡ ಕೈಮೀರಿ ಹೋಗಿ ಜನರು ನರಳಿದ್ದಾರೆ. ರಫಾ ಗಡಿ ಪ್ರದೇಶದಲ್ಲೂ ಜನರು ನರಳಾಡಿದ್ದರು, ಹಾಗೇ ಉತ್ತರ ಗಾಜಾ ಕೂಡ ರಕ್ತದಲ್ಲಿ ಮುಳುಗಿತ್ತು. ಇದೀಗ ಯುದ್ಧ ನಿಂತ ನೆಮ್ಮದಿ ಜೊತೆಗೆ ಗಾಜಾ ಪಟ್ಟಿಯಲ್ಲಿ ಸಾಮಾನ್ಯ ಜನರಿಗೆ ಬದುಕಿನ ಚಿಂತೆ ಕೂಡ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+