India & Canada: ರಾಜೀನಾಮೆ ಕೊಡಿ ಅಂತಾ ಕೇಳಿದ್ದಕ್ಕೆ ಕೆನಡಾ ಪ್ರಧಾನಿ ಹೇಳಿದ್ದೇನು?
ಕೆನಡಾ
ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದ ವಿಚಾರದಲ್ಲಿ ಪದೇ, ಪದೇ ಎಡವಟ್ಟು ಮಾಡಿಕೊಳ್ಳುತ್ತಿರುವ ಆರೋಪ & ಆಕ್ರೋಶ ಮೊಳಗಿತ್ತು. ಅಲ್ಲದೆ ಖುದ್ದು ಕೆನಡಾ ನೆಲದಲ್ಲಿ ಕೂಡ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಾಲು ಸಾಲು ಸಮಸ್ಯೆ ಎದುರಾಗಿದೆ. ಹೀಗಿದ್ದಾಗ ಸ್ವತಃ ಜಸ್ಟಿನ್ ಟ್ರುಡೊ ಅವರ ಪಕ್ಷದವರೇ ಇದೀಗ ಜಸ್ಟಿನ್ ಟ್ರುಡೊ ರಾಜೀನಾಮೆಗೆ ಒತ್ತಾಯ ಮಾಡಿದ್ದರು. ಆದರೆ ಈ ರೀತಿ ತಮ್ಮ ರಾಜೀನಾಮೆ ಒತ್ತಾಯಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಬನ್ನಿ ತಿಳಿಯೋಣ. id="toptextpromo"> id='are-slot-1' class='oiad oi-axt oiadv'> id='top-searched-articles'>ಕೆನಡಾ
& ಭಾರತದ ಸಂಬಂಧ ಚೆನ್ನಾಗಿಯೇ ಇತ್ತು, ಆದರೆ ಯಾವಾಗ ಖಲಿಸ್ತಾನಿಗಳ ಮ್ಯಾಟರ್ ಅಡ್ಡ ಬರಲು ಶುರು ಆಗಿತ್ತೋ ಆಗಲೇ ಕಿರಿಕ್ ಜೋರಾಗಿತ್ತು. ಅದರಲ್ಲೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ಕೊಡಲೇಬೇಕು & ಈ ಮೂಲಕ ಅಧಿಕಾರ ಬಿಟ್ಟು ಹೋಗಬೇಕು ಎಂಬ ಒತ್ತಡ ಜೋರಾಗಿತ್ತು. ಈ ಒತ್ತಾಯಕ್ಕೆ ಈಗ ಪ್ರತಿಕ್ರಿಯೆ ನೀಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ತಮ್ಮದೇ ಪಕ್ಷದ 20ಕ್ಕೂ ಅಧಿಕ ಸಂಸದರ ವಿರೋಧ ಇದ್ದರೂ ರಾಜೀನಾಮೆ ನೀಡಲ್ಲ ಎಂಬ ಹಠಕ್ಕೆ ಬಿದ್ದಿದ್ದಾರೆ. ಈ ಬಗ್ಗೆ ತಮ್ಮ ಪಕ್ಷದ ಸಭೆಯಲ್ಲಿ ಕೂಡ ಜಸ್ಟಿನ್ ಟ್ರುಡೊ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಕೆನಡಾ ಪ್ರಧಾನಿಯ ಈ ಭಂಡತನ ಇದೀಗ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಒದಗಿಸಿದೆ. id='are-slot-2' class='oiad oi-axt oiadv'>












Click it and Unblock the Notifications