ಭಾರತಕ್ಕೆ ಬೆನ್ನುಲುಬಾಗಿ ನಿಂತ ಜಗತ್ತು, 7500 ಕೋಟಿ ಕೊಡಲಿದೆ ಕೆನಡಾ..!

ಕೊರೊನಾ ಕೂಪದಲ್ಲಿ ನರಳುತ್ತಿರುವ ಭಾರತಕ್ಕೆ ಜಗತ್ತು ನೆರವು ನೀಡುತ್ತಿದೆ. ಭಾರತದ ಪಾಲಿಗೆ ಶತ್ರುಗಳೆಂದು ತಿಳಿದಿದ್ದ ರಾಷ್ಟ್ರಗಳು ಕೂಡ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವು ನೀಡಲು ಮುಂದಾಗಿವೆ. ಮತ್ತೊಂದ್ಕಡೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಷ್ಟೋ ಇಷ್ಟೋ ಸಹಾಯ ಮಾಡುತ್ತಿವೆ. ಆದರೆ ಕೆನಡಾ ಎಲ್ಲಾ ಎಲ್ಲೆಗಳನ್ನೂ ಮೀರಿ ಸುಮಾರು 7500 ಕೋಟಿ ರೂಪಾಯಿ, ಅಂದರೆ ಬರೋಬ್ಬರಿ ಒಂದು ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ನೆರವು ಘೋಷಿಸಿದೆ.

ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡಲು ಕೆನಡಾ ಸಿದ್ಧವೆಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಪ್ರಕಟಿಸಿದ್ದಾರೆ. ಆರ್ಥಿಕ ನೆರವಿನ ಜತೆ ಹೆಚ್ಚುವರಿ ವೈದ್ಯಕೀಯ ಸೌಲಭ್ಯ ಪೂರೈಕೆ ಸೇರಿದಂತೆ ಯಾವುದೇ ರೀತಿಯಲ್ಲಿ ಭಾರತಕ್ಕೆ ನೆರವಾಗಲು ಸಿದ್ಧವೆಂದು ಕೆನಡಾ ಸ್ಪಷ್ಟವಾಗಿ ತಿಳಿಸಿದೆ.

ಕೆನಡಿಯನ್ ರೆಡ್‌ ಕ್ರಾಸ್‌ ಸಂಸ್ಥೆ ಮೂಲಕ ಭಾರತೀಯ ರೆಡ್‌ ಕ್ರಾಸ್‌ಗೆ 1 ಬಿಲಿಯನ್ ಡಾಲರ್ ಹಣ ನೀಡಲು ಸಿದ್ಧರಿದ್ದೇವೆ. ಈ ಹಣ ಆಂಬುಲೆನ್ಸ್ ಹಾಗೂ ಪಿಪಿಇ ಕಿಟ್ ಖರೀದಿ ಸೇರಿದಂತೆ ಯಾವುದೇ ರೀತಿ ಕೊರೊನಾ ವೆಚ್ಚಗಳಿಗೆ ಬಳಸಬಹುದು ಎಂದು ಕೆನಡಾ ಪ್ರಧಾನಿ ವಿವರಿಸಿದ್ದಾರೆ.

ಜಗತ್ತಿನ ಹಲವು ರಾಷ್ಟ್ರಗಳ ನೆರವು

ಜಗತ್ತಿನ ಹಲವು ರಾಷ್ಟ್ರಗಳ ನೆರವು

ಭಾರತಕ್ಕೆ ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳು ನೆರವು ನೀಡಿವೆ. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಕೈಲಾದಷ್ಟು ಸಹಾಯ ಸಿಗುತ್ತಿದೆ. ಯುರೋಪ್ ದೇಶಗಳು, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿವೆ. ಆದ್ರೆ ಕೆನಡಾ ಈವರೆಗೆ ಯಾವುದೇ ಘೋಷಣೆ ನೀಡಿರಲಿಲ್ಲ. ಇದೀಗ ದಿಢೀರ್ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ಘೋಷಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಮುಖ್ಯವಾಗಿ ಕೆನಡಾ ಭಾರತದ ಮಿತ್ರರಾಷ್ಟ್ರ. ಹಲವು ದಶಕಗಳಿಂದ ಕೆನಡಾ ಭಾರತದ ಜೊತೆ ಸಂಬಂಧವನ್ನು ವೃದ್ಧಿಸುತ್ತಲೇ ಬಂದಿದೆ. ಇದೀಗ ತಾನು ಭಾರತದ ಮಿತ್ರ ಎಂಬುದನ್ನು ಸಂಕಷ್ಟದ ಸಮಯದಲ್ಲಿ ಸ್ಪಷ್ಟಪಡಿಸಿದೆ.

 3 ಲಕ್ಷ 60 ಸಾವಿರ ಸೋಂಕಿತರು

3 ಲಕ್ಷ 60 ಸಾವಿರ ಸೋಂಕಿತರು

ಭಾರತದಲ್ಲಿ ಮಂಗಳವಾರ 3 ಲಕ್ಷ 60 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಡೀ ಜಗತ್ತಿನಲ್ಲಿ ಯಾವುದೇ ದೇಶದಲ್ಲಿ ದಾಖಲಾಗದ ನಿತ್ಯದ ಸೋಂಕಿತರ ಸಂಖ್ಯೆ ಮಂಗಳವಾರ ಒಂದೇ ದಿನ ದಾಖಲಾಗಿದೆ. ಹಿಂದೆ ಅಮೆರಿಕ ಹೆಸರಲ್ಲಿದ್ದ ದಾಖಲೆಯೂ ಉಡೀಸ್ ಆಗಿದೆ. ದೇಶಾದ್ಯಂತ ಕೊರೊನಾ ಅಲೆ ಸ್ಫೋಟಗೊಂಡ ಹಿನ್ನೆಲೆ ಜಗತ್ತಿನಾದ್ಯಂತ ಭಾರತದ ಸುದ್ದಿ ಬಿತ್ತರವಾಗುತ್ತಿವೆ. ಅದ್ರಲ್ಲೂ ಜಾಗತಿಕ ಮಾಧ್ಯಮಗಳ ಕಣ್ಣು ಭಾರತದ ಮೇಲೆ ನೆಟ್ಟಿದೆ. 1 ವರ್ಷದ ನಂತರ ಮತ್ತೆ ಕೊರೊನಾ ಅಬ್ಬರಿಸುತ್ತಿದೆ.

ಅಮೆರಿಕದಂತೆ ಭಾರತದಲ್ಲೂ ಆತಂಕ..?

ಅಮೆರಿಕದಂತೆ ಭಾರತದಲ್ಲೂ ಆತಂಕ..?

ವಿಶ್ವದ ದೊಡ್ಡಣ್ಣ ಎಂಬ ಪಟ್ಟ ಕಟ್ಟಿಕೊಂಡಿದ್ದ ಅಮೆರಿಕ ಕೊರೊನಾ ಅಲೆಯಲ್ಲಿ ನಲುಗಿ ಹೋಗಿದೆ. ಆದರೆ ಈಗಿನ ಸ್ಥಿತಿಗತಿ ನೋಡಿದರೆ ಭಾರತದಲ್ಲೂ ಅಮೆರಿಕ ರೀತಿಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಜಗತ್ತಿನಾದ್ಯಂತ ಭಾರತದ ಕೊರೊನಾ ಪರಿಸ್ಥಿತಿ ಕಂಡು ಕಳವಳ ವ್ಯಕ್ತವಾಗಿದೆ. ಈಗಾಗಲೇ ಚೀನಾ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ಇದೇ ರೀತಿ ವಿಶ್ವದ ಅನೇಕ ರಾಷ್ಟ್ರಗಳು ಭಾರತಕ್ಕೆ ಸಹಾಯ ಹಸ್ತ ಚಾಚಲು ಮುಂದಾಗಿವೆ. ಆದರೆ ಸದ್ಯಕ್ಕೆ ಕೊರೊನಾ ಕಂಟ್ರೋಲ್‌ಗೆ ಸಿಗುವುದು ಅನುಮಾನವಾಗಿದೆ.

ಅಮೆರಿಕದಲ್ಲಿ 3 ಕೋಟಿ ಸೋಂಕಿತರು..!

ಅಮೆರಿಕದಲ್ಲಿ 3 ಕೋಟಿ ಸೋಂಕಿತರು..!

ಅಮೆರಿಕದಲ್ಲಿ ಈವರೆಗೆ 3 ಕೋಟಿ 30 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೇ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ 80 ಲಕ್ಷದ ಗಡಿ ದಾಟಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಲ್ಲದೆ 5 ಲಕ್ಷ 87 ಸಾವಿರ ಅಮೆರಿಕನ್ನರು ಡೆಡ್ಲಿ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 1 ಕೋಟಿ 44 ಲಕ್ಷ ಸೋಂಕಿತರು ಪತ್ತೆಯಾಗಿದ್ದರೆ ಈ ಪೈಕಿ 3 ಲಕ್ಷ 95 ಸಾವಿರ ಜನರು ಮೃತಪಟ್ಟಿದ್ದಾರೆ.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ 'ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲಿ ಕೊರೊನಾ 2ನೇ ಅಲೆ ಎದುರಾಗಿದ್ದರೂ ಅಮೆರಿಕದ ದಾಖಲೆ ಮೀರಿಸಲು ಆಗಲ್ಲ. ಅಷ್ಟರೊಳಗೆ ಭಾರತದಲ್ಲಿ 2ನೇ ಅಲೆಯ ಆರ್ಭಟ ತಣ್ಣಗಾಗುವ ವಿಶ್ವಾಸವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿ 2ನೇ ಅಲೆ ನಿಯಂತ್ರಣಕ್ಕೆ ಜನರು ಕೂಡ ಸಾಥ್ ನೀಡಬೇಕಿದ್ದು, ಕೊರೊನಾ ನಿಯಮಗಳನ್ನು ಪಾಲಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+