ಆ. 21ರವರೆಗೆ ಭಾರತದ ವಿಮಾನಗಳಿಗೆ ನಿಷೇಧ ಹೇರಿದ ಕೆನಡಾ

ನವದೆಹಲಿ, ಜುಲೈ 20: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಭಾರತದಿಂದ ಹಾರಾಟವಾಗುವ ವಿಮಾನಗಳ ನಿಷೇಧವನ್ನು ಕೆನಡಾ ಸರ್ಕಾರ ಆ. 21ರವರೆಗೆ ವಿಸ್ತರಿಸಿದೆ.

ಕೊರೊನಾ ಸೋಂಕಿನ ನಡುವೆ ಡೆಲ್ಟಾ ರೂಪಾಂತರಿ ಕೂಡ ಹರಡುವ ಭೀತಿಯಿಂದ ಕೆನಡಾ ಸರ್ಕಾರ ಭಾರತದ ಪ್ರಯಾಣಿಕರ ವಿಮಾನಯಾನವನ್ನು ಮತ್ತೆ ಒಂದು ತಿಂಗಳು ನಿಷೇಧಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೆನಡಾ ಆರೋಗ್ಯ ಇಲಾಖೆ, "ಭಾರತದಿಂದ ಕೆನಾಡಾಕ್ಕೆ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ವಿಸ್ತರಿಸಿದ್ದು, ಸಾರ್ವಜನಿಕರ ಆರೋಗ್ಯ ಸಲಹೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ,'' ಎಂದು ತಿಳಿಸಿದೆ.

Canada Govt Extends Ban On Passenger Flights From India Till Aug 21 Over Covid-19

ಭಾರತಕ್ಕೆ ಹೋಗಲು ಅಮೆರಿಕನ್ನರಿಗೆ ಅನುಮತಿ
ಕೊರೊನಾ ಸೋಂಕು ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿದ್ದ ಕಾರಣದಿಂದಾಗಿ ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರಯಾಣಿಸುವ ಪ್ರಯಾಣಿಕರ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಅಮೆರಿಕ ಸಡಿಲಿಸಿದೆ.

"ಭಾರತ ಮತ್ತು ಪಾಕಿಸ್ತಾನಕ್ಕೆ ತೆರಳುವವರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದ್ದು, ಸೋಮವಾರ ವಿದೇಶಾಂಗ ಇಲಾಖೆ ಸಭೆಯಲ್ಲಿ ಎರಡು ರಾಷ್ಟ್ರಗಳ ಕೋವಿಡ್ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗಿದೆ,'' ಎಂದು ಅಮೆರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದ ಅಮೆರಿಕನ್ನರು ಭಾರತ ಮತ್ತು ಪಾಕಿಸ್ತಾನಕ್ಕೆ ತೆರಳಬಹುದಾಗಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+