India & Canada: ಅಮಿತ್ ಶಾ ಅವರ ವಿರುದ್ಧವೂ ಕೆನಡಾ ಕಿರಿಕ್, ಏನಿದು ಟ್ರುಡೋ ಸರ್ಕಾರದ ಹೊಸ ಗೋಳು?

ಉಂಡ ಮನೆಗೆ ದ್ರೋಹ ಬಗೆಯೋದು ಹೇಗೆ? ಅನ್ನೋದನ್ನ ಕೆನಡಾ ನೋಡಿ ಕಲಿಯಬೇಕು ಎಂಬ ಆರೋಪ ಕೇಳಿ ಬರುತ್ತಿದೆ. ಈ ಮಾತು ಯಾಕಪ್ಪಾ ಅಂದ್ರೆ ಕೆನಡಾ ಏನೇ ಮಾಡಿದ್ರು ತನ್ನ ಬುದ್ಧಿ ಸರಿ ಮಾಡಿಕೊಳ್ಳುತ್ತಿಲ್ಲ. ಕೆನಡಾ ಆಡಳಿತ ನಡೆಸುವ ಜಸ್ಟಿನ್ ಟ್ರುಡೋ ಸರ್ಕಾರ ತಲೆ & ಬುಡ ಇಲ್ಲದ ಆರೋಪ ಮಾಡುತ್ತಾ, ತಾಳ್ಮೆ ಕಳೆದುಕೊಂಡು ಹುಚ್ಚರಂತೆ ವರ್ತನೆ ತೋರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಕೆನಡಾಗೆ ಸಮಾಧಾನ ಇಲ್ಲ ಅಂತಾ ಕಾಣುತ್ತೆ, ಪದೇ ಪದೇ ಭಾರತದ ಜೊತೆಗೆ ಕಿರಿಕ್ ತೆಗೆಯುತ್ತಲೇ ಇದೆ.

ಇಷ್ಟು ದಿನ ಕೆನಡಾ ಸರ್ಕಾರ ಭಾರತದ ಅಧಿಕಾರಿಗಳು & ಗುಪ್ತಚರ ಇಲಾಖೆ ಸಿಬ್ಬಂದಿಯ ಬಗ್ಗೆ ವಿರುದ್ಧ ಬಾಯಿಗೆ ಬಂದ ರೀತಿ ಮಾತನಾಡಿತ್ತು. ಆದರೆ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಖುದ್ದು ಗೃಹ ಸಚಿವರ ಬಗ್ಗೆಯೂ ಮಾತನಾಡಿದ್ದು ಭಾರತವನ್ನ ಕೆರಳುವಂತೆ ಮಾಡಿದೆ. ಹಾಗಾದ್ರೆ ಗೃಹ ಸಚಿವರಾದ ಅಮಿತ್ ಶಾ ಅವರ ಬಗ್ಗೆ ಕೆನಡಾ ಹೇಳಿದ್ದು ಏನು..? ಮುಂದೆ ಓದಿ.

Canada Government Alleged This Against The Amit Shah

ಕೆನಡಾ ಕಿರಿಕ್ ಮತ್ತೆ ಶುರು

ಖಲಿಸ್ತಾನಿಗಳ ಬೆನ್ನಿಗೆ ನಿಂತು ಪದೇ ಪದೇ ಭಾರತದ ವಿರುದ್ಧ ಕಿರಿಕ್ ಮಾಡುತ್ತಿರುವ ಇದೇ ಕೆನಡಾ, ತನ್ನ ಬುದ್ಧಿಯನ್ನ ಮಾತ್ರ ಬದಲು ಮಾಡಿಕೊಳ್ಳುತ್ತಿಲ್ಲ. ಅದರಲ್ಲೂ ಭಾರತದ ಬಗ್ಗೆ ಹಾಗೂ ಭಾರತೀಯರ ಬಗ್ಗೆ ಕೆನಡಾ ಸರ್ಕಾರಕ್ಕೆ ಗೌರವವೇ ಇಲ್ವಾ? ಎಂಬ ಪ್ರಶ್ನೆ ಕೂಡ ಈ ಸಮಯದಲ್ಲಿ ಮೂಡಿದೆ. ಯಾಕಂದ್ರೆ ಕೆನಡಾ ಸರ್ಕಾರದ ನಡೆ ಭಾರತೀಯರನ್ನ ಕೆರಳಿಸಿದೆ. ಮತ್ತೊಂದು ಕಡೆ ಭಾರತದ ಗೃಹ ಸಚಿವರಾದ ಅಮಿತ್ ಶಾ ಅವರ ವಿರುದ್ಧವೂ ಕೆನಡಾ ಈಗ ಕಿರಿಕ್ ಶುರು ಮಾಡಿದೆ.

ಕೆನಡಾ ಸರ್ಕಾರ ಸೈಲೆಂಟ್ ಆಗಲ್ವಾ?

ಅಂದಹಾಗೆ ಕೆನಡಾದ ಸಿಖ್‌ ಪ್ರತ್ಯೇಕತಾವಾದಿಗಳು ಒಬ್ಬೊಬ್ಬರಾಗಿ ಜೀವ ಬಿಟ್ಟಿದ್ದಾರೆ. ಆದ್ರೆ ಖಲಿಸ್ತಾನಿ ಉಗ್ರರು ಹೀಗೆ ಸಾಯಲು ಭಾರತದ ಅಧಿಕಾರಿಗಳ ಕೈವಾಡ ಇದೆ ಅಂತಾ ಕೆನಡಾ ಇಷ್ಟುದಿನ ಆರೋಪ ಮಾಡುತ್ತಿತ್ತು. ಇದು ಭಾರತ & ಕೆನಡಾ ನಡುವಿನ ಸಂಬಂಧ ಹಾಳು ಮಾಡಿರುವ ಸಮಯದಲ್ಲೇ, ಭಾರತದ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಕೂಡ ಕೆನಡಾ ಪ್ರತಿಕ್ರಿಯೆ ನೀಡಿರುವ ಆರೋಪ ಕೇಳಿಬಂದಿದೆ. ಕೆನಡಾ ನೆಲದಲ್ಲಿ ಖಲಿಸ್ತಾನಿಗಳನ್ನ ಟಾರ್ಗೆಟ್ ಮಾಡುವಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ, ಅಂತ ಕೆನಡಾ ಸರ್ಕಾರ ಈಗ ಆರೋಪ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+