International: ಮನುಷ್ಯನ ಅಂಡಾಣು-ವೀರ್ಯಾಣು ಇಲ್ಲದೇ ಭ್ರೂಣ ನಿರ್ಮಾಣ
ನವದೆಹಲಿ, ಜೂನ್ 15: ಕ್ಯಾಲಿಫೋನಿಯಾದ ತಾಂತ್ರಿಕ ಸಂಸ್ಥೆ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸಂಶೋಧಕರು ಹೆಣ್ಣು ಅಂಡಾಣು ಮತ್ತು ಗಂಡಿನ ವೀರ್ಯ ಇಲ್ಲದೆಯೆ ಸಂಶ್ಲೇಷಿತ ಭ್ರೂಣಗಳನ್ನು ನಿರ್ಮಾಣ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇಂದು ವಿಜ್ಞಾನ-ತಂತ್ರಜ್ಞಾನ ಕಲಾ. ತಾಂತ್ರಿಕತೆ ಬುದುಕಿಗೆ ಭವಿಷ್ಯವನ್ನು ತೋರಿಸುವ ಶಕ್ತಿ ಇದೆ. ಈ ವಿಜ್ಞಾನ, ತಂತ್ರಜ್ಞಾನವು ಮಗುವಿನ ಸೃಷ್ಟಿವರೆಗು ಬಂದು ನಿಂತಿದೆ. ಸದ್ಯ ನಿರ್ಮಾಣವಾದ ಭ್ರೂಣಗಳ ಕುರಿತು 'ದಿ ಸ್ಪೆಕ್ಟಾಟರ್ ಇಂಡೆಕ್ಸ್' ಟ್ವೀಟ್ ಮೂಲಕ ತಿಳಿಸಿದೆ.

ಸದ್ಯ ನಿರಂತರ ಸಂಶೋಧನೆ ಮಾಡಿ ಮನುಷ್ಯರ ಅಂಡಾಣು ಮತ್ತು ವೀರ್ಯ ಇಲ್ಲದೆಯೇ ಭ್ರೂಣಗಳನ್ನು ನಿರ್ಮಾಣ ಮಾಡಲಾಗಿದೆ. ಮಾನವ ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿ ಬೆಳೆಯುವ ಭ್ರೂಣಗಳು ಹೋಲುವಂತಹ ಮಾದರಿ ನಿರ್ಮಾಣಗೊಂಡಿವೆ.
ಸಂಶ್ಲೇಷಿತ ಈ ಮಾದರಿ ಭ್ರೂಣಗಳು ಮತ್ತು ಆನುವಂಶಿಕ ಅಸಹಜತೆಗಳು ಪರಿಣಾಮಗಳು ಹಾಗೂ ಪುನರಾವರ್ತಿತ ಗರ್ಭಪಾತಕ್ಕೆ ಜೀವರಾಸಾಯನಿಕ ಕಾರಣಗಳ ಬಗ್ಗೆ ನಿರ್ಣಾಯಕ ಒಳನೋಟವನ್ನು ನೀಡಬಲ್ಲವು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಕ್ಯಾಲಿಫೋನಿಯಾದ ತಾಂತ್ರಿಕ ಸಂಸ್ಥೆ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸಂಶೋಧಕರು/ವಿಜ್ಞಾನಿಗಳು ನಿರ್ಮಿಸಿರುವ ಈ ಭ್ರೂಣಗಳಲ್ಲಿ ಹೃದಯ ಬಡಿತ ಹಾಗೂ ಅಭಿವೃದ್ಧಿಗೊಳ್ಳುವ ಮೆದುಳು ಇಲ್ಲ. ಇವೆರಡನ್ನು ಹೊಂದಿಲ್ಲವಾದರೂ, ಇವುಗಳು ಸಾಮಾನ್ಯ ವಾಗಿ ಜರಾಯು, ಹಳದಿ ಲೋಳೆ ಚೀಲ ಮತ್ತು ಭ್ರೂಣವಾಗಿ ಬೆಳೆಯುವ ಜೀವಕೋಶಗಳನ್ನು ಹೊಂದಿವೆ ಹೇಳಲಾಗಿದೆ.
ಇಂತಹ ಸಂಶೋಧನೆಗಳಿಗೆ ನಿಯಮದ ತುರ್ತು ಅಗತ್ಯವಿದೆ
ಸ್ಥಾಪಿತ ಕಾನೂನು ಚೌಕಟ್ಟು ಅಡಿಯಲ್ಲಿರುವ ಇನ್ ವಿಟ್ರೋ ಫಲೀಕರಣ (IVF) ಸಹಾಯದಿಂದ ಉದ್ಭವಿಸುವ ಮಾನವ ಭ್ರೂಣಗಳಿಗಿಂತ ಭಿನ್ನ ವಾಗಿ, ಮಾನವ ಭ್ರೂಣಗಳ ಸ್ಟೆಮ್ ಸೆಲ್ ಪಡೆದ ಮಾದರಿಗಳನ್ನು ನಿಯಂತ್ರಿಸುವ ಯಾವುದೇ ಸ್ಪಷ್ಟ ನಿಯಮಗಳಿಲ್ಲ. ಮನುಷ್ಯ ಭ್ರೂಣಗಳ ಸ್ಟೆಮ್ ಸೆಲ್ ಮಾದರಿ ಪಡೆದು ರಚನೆ ಹಾಗೂ ಬಳಕೆಗೆ ಚೌಕಟ್ಟನ್ನು ಒದಗಿಸಲು ನಿಯಮಗಳ ತುರ್ತು ಅವಶ್ಯಕತೆ ಇದೆ ಎಂದು ಫ್ರಾನ್ಸಿಸ್ ಕ್ರಿಕ್ ಇನ್ಸ್‌ಟಿಟ್ಯೂಟ್‌ನ ಸಂಶೋಧಕರೊಬ್ಬರು ಹೇಳಿದ್ದಾರೆ.
ಇತ್ತೀಚೆಗೆ ಜರುಗಿದ ಇಂಟರ್‌ನ್ಯಾಷನನಲ್ ಸೋಸೈಟಿ ಫಾರ್ ಸ್ಟೆಮ್ ಸೆಲ್ ಸಂಶೋಧನೆಯ ವಾರ್ಷಿಕ ಸಭೆಯಲ್ಲಿ ಡಾ. ಮ್ಯಾಗ್ಡಲೀನಾ ಜೆರ್ನಿಕಾ-ಗೊಯೆಟ್ಜ್ ಅವರು ಭ್ರೂಣ ನಿರ್ಮಾಣ ಕುರಿತು ಮಾತನಾಡಿದ್ದಾರೆ.
ಸಂಶೋಧನೆ ಮೂಲಕ ತಂತ್ರಜ್ಞಾನ ಸಹಾಯದಿಂದ ರಚಿಸಲಾದ ಈ ಭ್ರೂಣ ಕುರಿತು ಪ್ರಸಿದ್ಧ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಲಿಲ್ಲ. ಹೀಗೆಂದು ಕ್ಯಾಲ್ಟೆಕ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ಮತ್ತು ಜೈವಿಕ ಎಂಜಿನಿಯರಿಂಗ್ ಪ್ರಾಧ್ಯಾ ಪಕ ಜೆರ್ನಿಕಾ-ಗೊಯೆಟ್ಜ್ ಅವರು ಹೇಳಿದ್ದಾರೆ. ಇದಕ್ಕು ಮೊದಲು ಈ ಸಂಶೋಧನೆ ಕುರಿತು 'ದಿ ಗಾರ್ಡಿಯನ್' ಸುದ್ದಿ ಸಂಸ್ಥೆ ವರದಿ ಮಾಡಿತ್ತು ಎಂದು ಅವರು ತಿಳಿಸಿದರು.












Click it and Unblock the Notifications