California Wildfire: ಬಿತ್ತು.. ಬಿತ್ತು.. ಮತ್ತಷ್ಟು ಕಾಡಿಗೆ ಬೆಂಕಿ ಬಿತ್ತು...
ಅಮೆರಿಕ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ, ನೋಡ ನೋಡುತ್ತಲೇ ಅಮೆರಿಕದ ಹಲವು ಕಡೆ ಕಾಡಿನ ಬೆಂಕಿ ಹಬ್ಬಿಕೊಳ್ಳುತ್ತಿದೆ. ಜನ ಕೂಡ ಈ ವಾತಾವರಣ ನೋಡಿ ಕಕ್ಕಾಬಿಕ್ಕಿ ಆಗಿದ್ದು, ಓಡಿ ಹೋಗುತ್ತಿದ್ದಾರೆ. ಅದರಲ್ಲೂ ಹಾಲಿವುಡ್ ಸೆಲೆಬ್ರಿಟಿಗಳಿಗೆ ಜೀವ ಭಯ ಶುರುವಾಗಿರುವ ಸಮಯದಲ್ಲೇ, ಅಮೆರಿಕದ ಹವಾಮಾನ ಇಲಾಖೆಯ ಅಧಿಕಾರಿಗಳು ಮತ್ತೊಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದರ ಜೊತೆಗೆ 25 ಜನರ ಜೀವ ಕಾಡಿನ ಬೆಂಕಿಗೆ ಬಲಿಯಾಗಿ ಹೋಗಿದೆ.
ಅಮೆರಿಕದ ಕಾಡುಗಳಿಗೆ ಬೆಂಕಿ ಬಿದ್ದು ಹಲವು ದಿನಗಳೇ ಕಳೆದಿವೆ. ಆದರೂ ಅಲ್ಲಿನ ಕಾಡಿನ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರ ಬದಲಾಗಿ, ಮತ್ತಷ್ಟು ಜಾಗಗಳಿಗೆ ಬೆಂಕಿಯ ಕಿಡಿ ಹಬ್ಬುತ್ತಿದೆ. ಇದು ಭಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿರುವ ಸಮಯದಲ್ಲೇ, ಈಗ ಮತ್ತಷ್ಟು ಆತಂಕ ಹುಟ್ಟಿಸುವ ಸುದ್ದಿ ಸಿಕ್ಕಿದೆ. ಹವಾಮಾನ ಇಲಾಖೆ ಅಧಿಕಾರಿಗಳು ಈಗ ಮತ್ತೆ ಬಿಸಿ ಬಿರುಗಾಳಿ ಬೀಸುವ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ಕಾಡಿನ ಪ್ರದೇಶಗಳಿಗೆ ಬೆಂಕಿ ಬೀಳುವ ಭಯ ಕಾಡುತ್ತಿದೆ.

ಬಿತ್ತು.. ಬಿತ್ತು.. ಮತ್ತಷ್ಟು ಬೆಂಕಿ ಬಿತ್ತು...
ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಬೆಂಕಿ ಬಿದ್ದು ನಿಯಂತ್ರಣಕ್ಕೆ ಸಿಗದಷ್ಟು ಕೈಮೀರಿ ಹೋಗಿದೆ ಪರಿಸ್ಥಿತಿ. ಹತ್ತಾರು ಸಾವಿರ ಕಟ್ಟಡಗಳು & ಮನೆಗಳು ಈಗಾಗಲೇ ಕಾಡಿನ ಬೆಂಕಿಗೆ ಸುಟ್ಟು ಭಸ್ಮವಾಗಿ ಹೋಗಿವೆ. ಇದೇ ಸಮಯದಲ್ಲಿ 25 ಜನರ ಜೀವ ಕೂಡ ಹೋಗಿದೆ ಎಂಬ ಸುದ್ದಿ ಇನ್ನಷ್ಟು ಭಯ ಹುಟ್ಟಿಸಿದೆ. ಜೋ ಬೈಡನ್ ಸರ್ಕಾರ ಇನ್ನು 5 ದಿನಗಳ ಕಾಲ ಆಡಳಿತದಲ್ಲಿ ಇರಲಿದ್ದು, ಟ್ರಂಪ್ ಸರ್ಕಾರ ಆಡಳಿತಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ವಾತಾವರಣ ಇನ್ನಷ್ಟು ಕಠಿಣವಾಗಿದೆ.
ದಿಢೀರ್ ಬೆಂಕಿ ಬಿದ್ದಿದ್ದು ಹೇಗೆ?
ಹಾಲಿವುಡ್ ಸಿನಿಮಾ ಸ್ಟಾರ್ಸ್ ಅಂದ್ರೆ ಬರೀ ದುಡ್ಡಿನ ಮೇಲೆ ಮಲಗುತ್ತಾರೆ, ಅವರಿಗೆ ಬೇಕು ಅಂತಾ ಅನಿಸುವ ಪ್ರತಿಯೊಂದು ವಸ್ತು ಕೂಡ ಖರೀದಿ ಮಾಡುವಷ್ಟು ಶಕ್ತಿ ಅವರಲ್ಲಿ ಇರುತ್ತದೆ, ಹೀಗೆ ಏನೇನೋ ಊಹೆಗಳು ಜಗತ್ತಿನಾದ್ಯಂತ ಇರುತ್ತವೆ. ಆದರೆ ಇದೀಗ ಅಮೆರಿಕದ ಕಾಡಿನ ಬೆಂಕಿ ಹಾಲಿವುಡ್ ಸಿನಿಮಾ ಸ್ಟಾರ್‌ಗಳ ಬಂಡವಾಳ ಬಯಲಾಗುವಂತೆ ಮಾಡಿದೆ.
ಈ ಮಧ್ಯೆ ದಿಢೀರ್ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಕಿ ಬಿದ್ದಿದ್ದು ಹೇಗೆ? ಎಂಬ ಪ್ರಶ್ನೆ ಕೂಡ ಜಗತ್ತಿನಾದ್ಯಂತ ಕಾಡುತ್ತಿದೆ. ಹಾಗೇ ಚಳಿಗಾಲದಲ್ಲಿ ಹೀಗೆಲ್ಲಾ ಬೆಂಕಿ ಬೀಳಲು ಸಾಧ್ಯ ಇಲ್ಲ ಎಂಬ ವಾದ ಕೂಡ ಕೇಳಿ ಬಂದಿದೆ. ಒಟ್ನಲ್ಲಿ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಬಿದ್ದಿರುವ ಕಾಡ್ಗಿಚ್ಚು ಸಾಕಷ್ಟು ದೊಡ್ಡ ಅವಾಂತರ ಸೃಷ್ಟಿ ಮಾಡುತ್ತಿದ್ದು, ಈ ಪರಿಸ್ಥಿತಿಗೆ ಆದಷ್ಟು ಬೇಗ ಬ್ರೇಕ್ ಬೀಳಬೇಕಿದೆ.












Click it and Unblock the Notifications