ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣ; ಇದೇನು ವಕೀಲರ ಆರೋಪ?
ನವದೆಹಲಿ, ಜೂನ್ 07: ಡೊಮಿನಿಕಾದಲ್ಲಿ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ವಕೀಲರು ಸಲ್ಲಿಸಿರುವ ದೂರಿನ ಹಿನ್ನೆಲೆ ಆಂಟಿಗಾ ಮತ್ತು ಬರ್ಬುಡಾದ ರಾಯಲ್ ಪೊಲೀಸ್ ಪಡೆಯು ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ಗ್ಯಾಸ್ಟನ್ ಬ್ರೌನ್ ತಿಳಿಸಿದ್ದಾರೆ.
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಬಹು ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅನ್ನು ಅಪಹರಿಸಲಾಗಿದೆ ಎಂಬುದಾಗಿ ಚೋಕ್ಸಿ ಪರ ವಕೀಲರು ಪೊಲೀಸ್ ಆಯುಕ್ತರಿಗೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಒಂದು ವೇಳೆ ವಕೀಲರು ಮಾಡುತ್ತಿರುವ ಆರೋಪ ನಿಜವಾಗಿದ್ದರೆ, ಪ್ರಕರಣವು ಗಂಭೀರ ಸ್ವರೂಪಕ್ಕೆ ತಿರುಗುತ್ತದೆ. ಇಡೀ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಾರೆ ಎಂದು ಅಂಟಿಗಾ ಮತ್ತು ಬರ್ಬುಡಾ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ಮೆಹುಲ್ ಚೋಕ್ಸಿ ಅಪಹರಣದ ಬಗ್ಗೆ ದೂರು
ಮೆಹುಲ್ ಚೋಕ್ಸಿ ಅನ್ನು ಅಪಹರಿಸಿ ಕರೆದುಕೊಂಡು ಹೋಗಿರುವ ಬಗ್ಗೆ ಆಂಟಿಗಾ ಮತ್ತು ಬರ್ಬುಡಾ ರಾಯಲ್ ಪೊಲೀಸ್ ಪಡೆಗೆ ಚೋಕ್ಸಿ ಪರ ವಕೀಲರು ದೂರು ನೀಡಿದ್ದಾರೆ. ಆಂಟಿಗಾದಲ್ಲಿ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ ಎಂದು ಚೋಕ್ಸಿ ತಮ್ಮ ವಕೀಲರ ಮೂಲಕ ಔಪಚಾರಿಕ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಅಪಹರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮೆಹುಲ್ ಚೋಕ್ಸಿ ಡೊಮಿನಿಕಾಗೆ ಬಂದಿದ್ದು ಯಾವಾಗ?
ಕಳೆದ ಮೇ 23ರಂದು ರಾತ್ರಿ 10 ಗಂಟೆ ಸುಮಾರಿಗೆ ಆರ್ಕ್‌ನ ಯಾಚ್ ಕ್ಯಾಲಿಯೋಪ್‌ನಲ್ಲಿ ಚೋಕ್ಸಿಯನ್ನು ಡೊಮಿನಿಕಾಗೆ ಕರೆತರಲಾಯಿತು ಎಂದು ಡೊಮಿನಿಕಾ ವಿರೋಧ ಪಕ್ಷದ ನಾಯಕ ಲೆನಾಕ್ಸ್ ಲಿಂಟನ್ ಹೇಳಿಕೆ ನೀಡಿರುವ ಬಗ್ಗೆ ಅಸೋಸಿಯೇಟ್ಸ್ ಟೈಮ್ಸ್ನ ವರದಿ ಮಾಡಿದೆ. ಮೇ 23 ರಂದು ಸಂಜೆ 5 ಗಂಟೆಯವರೆಗೆ ಅವರು ಆಂಟಿಗಾದಲ್ಲಿದ್ದರು ಎಂದು ಚೋಕ್ಸಿ ಅವರ ಕುಟುಂಬ ಹೇಳಿಕೊಂಡಿದ್ದು, ನಾಲ್ಕರಿಂದ ಐದು ಗಂಟೆಗಳಲ್ಲಿ 120 ಮೈಲಿ ದೂರವನ್ನು ಕ್ರಮಿಸಲು ಅಸಾಧ್ಯವಾಗುತ್ತದೆ. ಅದಕ್ಕೆ ಕನಿಷ್ಠ 12-13 ಗಂಟೆ ಬೇಕಾಗುತ್ತದೆ. ಕಸ್ಟಮ್ಸ್ ದಾಖಲೆಯ ಪ್ರಕಾರ, ದೋಣಿ ಆಂಟಿಗಾದಿಂದ ಬೆಳಿಗ್ಗೆ 10 ಗಂಟೆಗೆ ಹೊರಟಿದೆ ಎಂದು ಹೇಳಿದ ವರದಿಗೆ ಇದು ವಿರುದ್ಧವಾಗಿದೆ. ಲಿಂಟನ್ ಹೇಳಿಕೊಳ್ಳುವ ದೋಣಿಯಲ್ಲಿ ಚೋಕ್ಸಿ ಪ್ರಯಾಣಿಸಲಿಲ್ಲ ಎಂಬುದನ್ನು ಈ ವ್ಯತ್ಯಾಸವೇ ಸೂಚಿಸುತ್ತದೆ.

ಮೆಹುಲ್ ಚೋಕ್ಸಿ ದೇಹದಲ್ಲಿ ಗಾಯದ ಗುರುತು
ಡೊಮಿನಿಕಾ ಚೀನಾ ಸೌಹಾರ್ದತೆ ಆಸ್ಪತ್ರೆಯ ವೈದ್ಯರು ಮೆಹುಲ್ ಚೋಕ್ಸಿಗೆ ಚಿಕಿತ್ಸೆ ನೀಡಿದ್ದಾರೆ. ಚೋಕ್ಸಿ ದೇಹದಲ್ಲಿ ಅಲ್ಲಿಲ್ಲಿ ಗಾಯ ಮತ್ತು ಉಗುರಿನಲ್ಲಿ ಗಾಯಗಳಾಗಿದ್ದು, ತಳ್ಳಾಡುವಿಕೆಯಿಂದಾಗಿ ಮೂಗೇಟು ಬಿದ್ದಿರಬಹುದು ಎಂದು ವಕೀಲರು ಉಲ್ಲೇಖಿಸಿದ್ದಾರೆ. ಕಳೆದ 2018ರಿಂದ ಆಂಟಿಗಾ ಮತ್ತು ಬರ್ಬುಡಾದಲ್ಲಿ ಪ್ರಜೆಯಾಗಿ ವಾಸವಾಗಿದ್ದ ಮೆಹುಲ್ ಚೋಕ್ಸಿ ಕಳೆದ ಮೇ 23ರಂದು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತದನಂತರದಲ್ಲಿ ತಮ್ಮ ಪ್ರೇಯಸಿ ಜೊತೆಗೆ ಪ್ರಣಯ ಪ್ರವಾಸಕ್ಕೆ ತೆರಳಿದ್ದು ಎಂದು ಹೇಳಲಾದ ಚೋಕ್ಸಿ ಅವರನ್ನು ನೆರೆಯ ಡೊಮಿನಿಕಾದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಜಾಲಿ ಹಾರ್ಬರ್ ಬಳಿ ಅವರನ್ನು ಆಂಟಿಗಾ ಪೊಲೀಸರು ಬಂಧಿಸಿ ಡೊಮಿನಿಕಾಗೆ ಕರೆದುಕೊಂಡು ಹೋಗಿದ್ದಾರೆ ಎಂದು ವಕೀಲು ಆರೋಪಿಸಿದ್ದಾರೆ.

ಪಿಎನ್ ಬಿ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಪ್ರಕರಣ
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಭಾರತದಿಂದ ಯುರೋಪಿಗೆ ಓಡಿ ಹೋದ ನೀರವ್ ಮೋದಿ ಅಂತಿಮವಾಗಿ ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ 2017ರಲ್ಲೇ ಆಂಟಿಗಾ ಮತ್ತು ಬರ್ಬುಡಾ ರಾಷ್ಟ್ರಗಳ ನಾಗರಿಕತ್ವ ಪಡೆದುಕೊಂಡ ಮೆಹುಲ್ ಚೋಕ್ಸಿ ಇಲ್ಲಿಯವರೆಗೂ ಅದೇ ದೇಶದಲ್ಲಿ ವಾಸವಾಗಿದ್ದರು.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications