ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬುರ್ಜ್ ಖಲೀಫಾಗೆ ತ್ರಿವರ್ಣ ಸೊಬಗು!

Posted By:
Subscribe to Oneindia Kannada

ದುಬೈ, ಜನವರಿ 25: ಭಾರತದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿಶ್ವದ ಅತಿ ಎತ್ತರದ ಕಟ್ಟಡವೆನಿಸಿರುವ ಬುರ್ಜ್ ಖಲೀಫಾ ತ್ರಿವರ್ಣಗಳ ಲೈಟಿಂಗ್ ನಿಂದ ಕಂಗೊಳಿಸಲಾರಂಭಿಸಿದೆ.

ಕಟ್ಟಡದ ಹೊರಮೇಲ್ಮೈಯನ್ನು ಎಲ್ ಇಡಿ ಲೈಟಿಂಗ್ ನಿಂದ ಅಲಂಕೃತಗೊಳಿಸಲಾಗಿದ್ದು, ಭಾರತದ ತ್ರಿವರ್ಣ ಧ್ವಜ ಹಾಗೂ ಮಧ್ಯದಲ್ಲಿ ಅಶೋಕ ಚಕ್ರ ಬರುವ ರೀತಿಯಲ್ಲಿ ಬೆಳಕಿನ ವಿನ್ಯಾಸವನ್ನು ಅಳವಡಿಸಲಾಗಿದೆ.[ಗ್ಯಾಲರಿ: ದೇಶದೆಲ್ಲೆಡೆ 68ನೇ ಗಣತಂತ್ರ ಸಂಭ್ರಮ]

Burj Khalifa in Dubai lit up in tricolour to mark India’s Republic Day

ಬುಧವಾರ ಹಾಗೂ ಗುರುವಾರಗಳಂದು ಈ ವಿಶೇಷ ತ್ರಿವರ್ಣದ ಲೈಟಿಂಗ್ ನಿಂತ ಖಲೀಫಾ ಕಟ್ಟಡ ಕಂಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.[ದೇಶದೆಲ್ಲೆಡೆ 68ನೇ ಗಣತಂತ್ರ ಸಂಭ್ರಮ]

ಇದಲ್ಲದೆ, ದುಬೈನಲ್ಲಿರುವ ಭಾರತೀಯ ಧೂತಾವಾಸ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಗುರುವಾರ ಬೆಳಗ್ಗೆ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Burj Khalifa tower, the world’s tallest building located in Dubai, was lit up in the colours of the Indian National flag on Wednesday to celebrate India’s 68th Republic Day.
Please Wait while comments are loading...