'ಸಹೋದರ ಮತ್ತು ಸಹೋದರಿ ಪ್ರೀತಿಸುತ್ತಾರೆ' ಆಕ್ರೋಶದ ಅಲೆ ಎಬ್ಬಿಸಿದ ಪಾಕಿಸ್ತಾನ ಪ್ರಶ್ನೆ ಪತ್ರಿಕೆ!
ಪಾಕಿಸ್ತಾನದ ವಿಶ್ವವಿದ್ಯಾನಿಲಯದ ಪತ್ರಿಕೆಯಲ್ಲಿ ಕೇಳಿದ 'ಸಹೋದರ ಮತ್ತು ಸಹೋದರಿ ಪ್ರೀತಿಸುತ್ತಾರೆ' ಎಂಬ ಆಘಾತಕಾರಿ ಪ್ರಶ್ನೆಯು ಟ್ವಿಟರ್‌ನಲ್ಲಿ ಆಕ್ರೋಶದ ಅಲೆಯನ್ನು ಎಬ್ಬಿಸಿದೆ.
ವಿಶ್ವವಿದ್ಯಾನಿಲಯಗಳು ಮತ್ತು ಶಾಲಾ ಪ್ರಶ್ನೆ ಪತ್ರಿಕೆಗಳಲ್ಲಿ ಹೇಳಿದ ಪ್ರಶ್ನೆ ಈ ಹಿಂದೆ ಆಕ್ರೋಶ ಹುಟ್ಟುಹಾಕಿರುವುದನ್ನು ನಾವು ನೋಡಿದ್ದೇವೆ. ಆದರೆ ಪಾಕಿಸ್ತಾನದ ವಿಶ್ವವಿದ್ಯಾನಿಲಯದ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆ ಟ್ವಿಟರ್‌ನಲ್ಲಿ ಆಕ್ರೋಶದ ಅಲೆಯನ್ನು ಎಬ್ಬಿಸಿದೆ.
ಪಾಕಿಸ್ತಾನದ ವಿಶ್ವವಿದ್ಯಾನಿಲಯವೊಂದು ಬಿಡುಗಡೆ ಮಾಡಿದ ಪ್ರಶ್ನೆ ಪತ್ರಿಕೆಯಲ್ಲಿ ಸಹೋದರ ಮತ್ತು ಸಹೋದರಿ ಪ್ರೀತಿ ಮಾಡುವ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ನೆಟ್ಟಿಗರು ಆಕ್ರೊಶ ಹೊರಹಾಕಿದ್ದಾರೆ. ಅದೊಂದು ಅಸಹ್ಯ ಪ್ರಶ್ನೆ ಎಂದಿದ್ದಾರೆ.
Stop dusting the filth under the carpet to protect the culprits. Is it enough to fire that moron who asked such a filthy question?Don’t the higher ups in the university know what’s going on? Or is the #comsatsuniversity owned by the teacher? Stop this nonsense rant #COMSATS pic.twitter.com/7GMBZ3ynTK
— Mishi khan (@mishilicious) February 20, 2023
ಇಸ್ಲಾಮಾಬಾದ್ ಮೂಲದ COMSATS ವಿಶ್ವವಿದ್ಯಾನಿಲಯದ ಪ್ರಶ್ನೆ ಪತ್ರಿಕೆಯಲ್ಲಿ ಈ "ಅಶ್ಲೀಲ ಪ್ರಶ್ನೆ" ಯನ್ನು ಕೇಳಲಾಗಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಮುಖ್ಯಸ್ಥರನ್ನು ಪ್ರಶ್ನಿಸಬೇಕೆಂಬ ಒತ್ತಾಯ ಹೇರಲಾಗಿದೆ.

ಪಾಕಿಸ್ತಾನ ಯೂನಿವರ್ಸಿಟಿ ಪೇಪರ್‌ನ ಪ್ರಶ್ನೆಯಲ್ಲಿ ಕೇಳಲಾದ ಪ್ರಶ್ನೆ ಹೀಗಿದೆ- 'ಮಾರ್ಕ್' ಮತ್ತು 'ಜೂಲಿ' ಎಂಬ ಸಹೋದರ ಮತ್ತು ಸಹೋದರಿ ಪ್ರೀತಿ ಮಾಡಲು ನಿರ್ಧರಿಸಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು ಮತ್ತು ಇಬ್ಬರೂ ಅದನ್ನು ಆನಂದಿಸಿದರು ಎಂದು ಹೇಳುತ್ತದೆ. ನಂತರ ವಿಶ್ವವಿದ್ಯಾಲಯವು ಸನ್ನಿವೇಶದ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಕೇಳಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಪ್ರಶ್ನೆ ಪತ್ರಿಕೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ''ಇಷ್ಟು ಕೊಳಕು ಪ್ರಶ್ನೆ ಕೇಳಿದ ಆ ಮೂರ್ಖನನ್ನು ವಜಾ ಮಾಡಿದರೆ ಸಾಕೆ? ವಿಶ್ವವಿದ್ಯಾನಿಲಯದ ಉನ್ನತಾಧಿಕಾರಿಗಳಿಗೆ ಏನು ನಡೆಯುತ್ತಿದೆ ಎಂದು ತಿಳಿದಿಲ್ಲವೇ? ಆವಿಶ್ವವಿದ್ಯಾಲಯವನ್ನೇ ಬಂದ್ ಮಾಡಬೇಕು" ಎಂದು ಹೇಳಿದ್ದಾರೆ.
ನಟಿ ಮತ್ತು ಗಾಯಕ ಮಿಶಿ ಖಾನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. "ನಮಗೆ ನಾಚಿಕೆಯಾಗುತ್ತಿದೆ. ಈ ವಿಶ್ವವಿದ್ಯಾಲಯವನ್ನು ಸೀಲ್ ಮಾಡಬೇಕು ಮತ್ತು ವಿಕೃತ ಶಿಕ್ಷಕರನ್ನು ಹೊರಹಾಕಬೇಕು. ಈ ಪ್ರಶ್ನೆಯನ್ನು ಕೇಳುವವರು ಕಂಬಿ ಹಿಂದೆ ಇರಬೇಕು. ಈ ಕೊಳಕು ಪ್ರಶ್ನೆಯನ್ನು ಕೇಳಲು ನಿಮಗೆ ಎಷ್ಟು ಧೈರ್ಯ?'' ಎಂದು ಕಿಡಿ ಕಾರಿದ್ದಾರೆ.

ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಕೇಳಿದ ಶಿಕ್ಷಕರನ್ನು ಪ್ರೊಫೆಸರ್ ಖೈರ್ ಉಲ್ ಬಶರ್ ಎಂದು ಗುರುತಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ. ಪ್ರಶ್ನೆಯು ದೊಡ್ಡ ವಿವಾದವನ್ನು ಹುಟ್ಟುಹಾಕಿದ ನಂತರ, ಮಾಧ್ಯಮ ವರದಿಗಳ ಪ್ರಕಾರ, ಶಿಕ್ಷಕನನ್ನು ವಿಶ್ವವಿದ್ಯಾಲಯದಿಂದ ವಜಾಗೊಳಿಸಲಾಯಿತು ಎಂದಿದೆ.
ವಿಶ್ವವಿದ್ಯಾನಿಲಯ "ರಸಪ್ರಶ್ನೆಯ ವಿಷಯ ಹೆಚ್ಚು ಆಕ್ಷೇಪಾರ್ಹವಾಗಿದೆ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪಠ್ಯಕ್ರಮದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಮತ್ತು ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಅಶಾಂತಿಯನ್ನು ಉಂಟುಮಾಡಿದೆ" ಎಂದಿದೆ.












Click it and Unblock the Notifications