ಈಜಿಪ್ಟ್ ಏರ್ ವಿಮಾನ ಹೈಜಾಕರ್ ಈಗಲೂ ಟ್ರೆಂಡಿಂಗ್!

Posted By:
Subscribe to Oneindia Kannada

ಲಂಡನ್, ಮಾರ್ಚ್ 30: ಅಲೆಕ್ಸಾಂಡ್ರಿಯಾದಿಂದ ರಾಜಧಾನಿ ಕೈರೋಗೆ ತೆರಳುತ್ತಿದ್ದ ಈಜಿಪ್ಟ್ಏರ್ ವಿಮಾನ ಮಂಗಳವಾರ ಹೈಜಾಕ್ ಆಗಿದ್ದು, ವಿಮಾನವನ್ನು ಬಲವಂತವಾಗಿ ಸೈಪ್ರಸ್ ನ ಲಾರ್ನಕಾ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದು ಎಲ್ಲರಿಗೂ ತಿಳಿದಿರಬಹುದು. ಹೈಜಾಕರ್ ಮುಸ್ತಫಾ ಬುಧವಾರ ಕೂಡಾ ಟ್ರೆಂಡಿಂಗ್ ನಲ್ಲಿದ್ದಾರೆ. ಮುಸ್ತಫಾ ಜೊತೆಗೆ ಲಂಡನ್ನಿನ ಒತ್ತೆಯಾಳು ಕೂಡಾ ಎಲ್ಲರ ಗಮನ ಸೆಳೆದಿದ್ದಾರೆ.

ವಿಮಾನ ಹೈಜಾಕಿಗೆ ಉಗ್ರರು ಕಾರಣರಲ್ಲ, ಒಡೆದ ಸಂಸಾರ ಕಾರಣ ಎಂದು ಈಜಿಪ್ಟ್ ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ನಂತರ ಹೈಜಾಕ್ ಮಾಡಿದವರು ಡಾ. ಇಬ್ರಾಹಿಂ ಅಲ್ಲ, ಕೈರೋ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಪ್ರೊಫೆಸರ್ ಡಾ. ಸೈಫ್ ಎಲ್ ಡೆನ್ ಮುಸ್ತಫಾ ಎಂದು ತಿಳಿದು ಬಂದಿತ್ತು.[ಹೈಜಾಕ್ ಡ್ರಾಮಾ ಅಂತ್ಯ, ಅಪಹರಣಕಾರನ ಬಂಧನ]

British hostage clicks a picture with EgyptAir hijacker

ಹೈಜಾಕರ್ ಮುಸ್ತಫಾ ಅವರ ಜೊತೆ ಬ್ರಿಟಿಷ್ ಪ್ರಯಾಣಿಕ ಬೆಂಜಮಿನ್ ಇನ್ನೆಸ್ ಕೂಡಾ ಜನಪ್ರಿಯತೆ ಗಳಿಸಿದ್ದಾರೆ. ಲೀಡ್ಸ್ ಮೂಲದ ಬೆಂಜಮಿನ್ ಅವರು ಅಬೆರ್ದೀನ್ ನಿವಾಸಿಯಾಗಿದ್ದಾರೆ. ಮುಸ್ತಫಾ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಈಜಿಪ್ಟ್ ಏರ್ ಎಂಎಸ್181 ವಿಮಾನದ 56 ಪ್ರಯಾಣಿಕರ ಪೈಕಿ ಬೆಂಜಮಿನ್ ಕೂಡಾ ಒಬ್ಬರಾಗಿದ್ದಾರೆ.
-
-
-
-
ಈಜಿಪ್ಟ್ ಏರ್ ವಿಮಾನ ಹೈಜಾಕರ್ ಈಗಲೂ ಟ್ರೆಂಡಿಂಗ್!

ಈಜಿಪ್ಟ್ ಏರ್ ವಿಮಾನ ಹೈಜಾಕರ್ ಈಗಲೂ ಟ್ರೆಂಡಿಂಗ್!

ಹೈಜಾಕರ್ ಜೊತೆ ಫೋಟೊ: ಹೈಜಾಕರ್ ಮುಸ್ತಫಾ ಜೊತೆ ನಿಂತು ಧೈರ್ಯವಾಗಿ ಬೆಂಜಮಿನ್ ಒಂದು ಫೋಟೋ ತೆಗೆಸಿಕೊಂಡಿದ್ದು ಡೈಲಿ ಮೇಲ್ ವರದಿ ಮಾಡಿದೆ. ಈ ಚಿತ್ರ ಈಗ ಸಕತ್ ಟ್ರೆಂಡಿಂಗ್ ನಲ್ಲಿದೆ. ಹೈಜಾಕ್ ಡ್ರಾಮಾದ ಅಂತಿಮ ಘಟ್ಟದಲ್ಲಿ ಈ ಚಿತ್ರತೆಗೆದುಕೊಳ್ಳಲಾಗಿದೆ. ಮುಸ್ತಫಾ ಅವರ ಸೊಂಟದ ಪಟ್ಟಿ(ಸ್ಫೋಟಕ ಇದೆ ಎಂದು ಶಂಕಿಸಲಾಗಿದ್ದ) ಯನ್ನು ಕೂಡಾ ಕಾಣಬಹುದಾಗಿದೆ.

ಬೇಲ್ ಇಲ್ಲದೆ ಬಂಧನ: ಮುಸ್ತಫಾ ಬಳಿ ಇರುವುದು ನಕಲಿ ಸ್ಫೋಟಕ ಬೆಲ್ಟ್ ಎಂದು ತಿಳಿದ ಮೇಲೆ ಸೈಪ್ರಸ್ ನ ಅಧಿಕಾರಿಗಳು ಧೈರ್ಯವಾಗಿ ಮುನ್ನುಗ್ಗಿ ಆತನನ್ನು ಬಂಧಿಸಿ ಲಾರ್ನಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜಾಮೀನುರಹಿತ ಬಂಧನಕ್ಕೆ ಆದೇಶಿಸಲಾಗಿದೆ. ತನ್ನ ವಿಚ್ಛೇದಿತ ಪತ್ನಿ ಹಾಗೂ ಮಗುವಿನ ಜೊತೆ ಇರಲು ಬಯಸಿದ್ದ ಮುಸ್ತಫಾ ಈ ರೀತಿ ಮಾಡಿದ್ದು ಈಗ ನಗೆಪಾಟಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A day after the EgyptAir hijacking came to an end, a photo of a British passenger with the hijacker has gone viral on social media.
Please Wait while comments are loading...