ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೋವಿಡ್ ಸೋಂಕು ಪತ್ತೆ

|
Google Oneindia Kannada News

ಬ್ರಿಟನ್, ಡಿಸೆಂಬರ್ 21: ಕೋವಿಡ್ ಸೋಂಕಿನ ಹೊಸ ಸ್ವರೂಪ ಬ್ರಿಟನ್‌ನಲ್ಲಿ ಪತ್ತೆಯಾಗಿದೆ. ಸೋಂಕು ಪತ್ತೆಯಾಗಿರುವ ವ್ಯಕ್ತಿ ಕೆಲವು ದಿನಗಳ ಹಿಂದೆ ಯುಕೆ ಯಿಂದ ವಾಪಸ್ ಆಗಿದ್ದ. ಆರೋಗ್ಯ ಸಚಿವಾಲಯವೂ ಇದನ್ನು ಖಚಿತಪಡಿಸಿದೆ.

ಹೊಸ ಸ್ವರೂಪದ ಕೋವಿಡ್ ಸೋಂಕು ಪತ್ತೆಯಾಗಿದೆ. ಇದು ಅತ್ಯಂತ ವೇಗವಾಗಿ ಹರಡಲಿದ್ದು, ಪರಿಸ್ಥಿತಿ ಕೈ ಮೀರಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ. ಬ್ರಿಟನ್‌ನಿಂದ ಬರುವ ಎಲ್ಲಾ ವಿಮಾನಗಳನ್ನು ಯುರೋಪ್‌ನ ಹಲವು ರಾಷ್ಟ್ರಗಳು ರದ್ದುಗೊಳಿಸಿವೆ.

ಲಾಕ್‌ಡೌನ್ ಎಫೆಕ್ಟ್: ಕೊರೊನಾ ಸೋಂಕಿನಿಂದ ಬ್ರಿಟನ್ ಬಚಾವ್..?ಲಾಕ್‌ಡೌನ್ ಎಫೆಕ್ಟ್: ಕೊರೊನಾ ಸೋಂಕಿನಿಂದ ಬ್ರಿಟನ್ ಬಚಾವ್..?

ವಿಶ್ವ ಆರೋಗ್ಯ ಸಂಸ್ಥೆ ಹೊಸ ಸ್ವರೂಪದ ವೈರಸ್ ಹರಡುವಿಕೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಐರೋಪ್ಯ ರಾಷ್ಟ್ರಗಳಿಗೆ ಸೂಚನೆಯನ್ನು ನೀಡಿದೆ. ಬ್ರಿಟನ್‌ನೆ ಕೆಲವು ಭಾಗಗಳಲ್ಲಿ ಮಾತ್ರ ಹೊಸ ಸ್ವರೂಪದ ಕೋವಿಡ್ ಸೋಂಕು ಪತ್ತೆಯಾಗಿದೆ.

ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಮುಂದುವರಿಸಲು ಅನುಮತಿ ನೀಡಿದ ಭಾರತ, ಬ್ರಿಟನ್ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಮುಂದುವರಿಸಲು ಅನುಮತಿ ನೀಡಿದ ಭಾರತ, ಬ್ರಿಟನ್

Britain Found New Strain Of Coronavirus

ಬ್ರಿಟನ್‌ನ ನಗರ ಪ್ರದೇಶದಲ್ಲಿ ಕಠಿಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹಲವು ಪ್ರದೇಶಗಳಲ್ಲಿ ಭಾನುವಾರದಿಂದಲೇ ಲಾಕ್ ಡೌನ್ ಜಾರಿಗೆ ಬಂದಿದೆ. ಡಿಸೆಂಬರ್ 26ರ ಬಳಿಕ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಭಾರತದಲ್ಲಿ 26,624 ಹೊಸ ಕೋವಿಡ್ ಪ್ರಕರಣ ದಾಖಲು ಭಾರತದಲ್ಲಿ 26,624 ಹೊಸ ಕೋವಿಡ್ ಪ್ರಕರಣ ದಾಖಲು

ಹೊಸ ಸ್ವರೂಪದ ಕೋವಿಡ್ ಸೋಂಕಿನ ಕುರಿತು ಬ್ರಿಟನ್ ಸರ್ಕಾರ ಘೋಷಿಸಿದ ಬಳಿಕ ಅಕ್ಕ-ಪಕ್ಕದ ರಾಷ್ಟ್ರಗಳು ಬ್ರಿಟನ್‌ಗೆ ವಿಮಾನ ಸಂಪರ್ಕವನ್ನು ರದ್ದುಗೊಳಿಸಿವೆ. ಯುರೋಪ್‌ನ ಎಲ್ಲಾ ರಾಷ್ಟ್ರಗಳಿಗೆ ಹೊಸ ಮಾದರಿ ಕೋವಿಡ್ ಸೋಂಕು ಹರಡುವ ಅಪಾಯದಿಂದ ವಿಮಾನ ಸಂಚಾರ ರದ್ದು ಮಾಡಲಾಗಿದೆ.

ಮೂಲ ಸ್ವರೂಪದ ಕೋವಿಡ್‌ ವೈರಸ್‌ಗೆ ಹೋಲಿಕೆ ಮಾಡಿದರೆ ಈ ವೈರಸ್‌ನಲ್ಲಿ 23 ಬದಲಾವಣೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೂಲ ವೈರಸ್‌ಗಿಂತ ಶೇ 70ರಷ್ಟು ವೇಗದಲ್ಲಿ ಇದು ಹಬ್ಬಬಲ್ಲದು ಎಂದು ಹೇಳಿದ್ದಾರೆ. ವಿಶ್ವಕ್ಕೆ ಇದು ಹಬ್ಬುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬ್ರಿಟನ್ ಸರ್ಕಾರ ಸೋಮವಾರ ಆರೋಗ್ಯ ಸಚಿವಾಲಯದ ಜಂಟಿ ಮೇಲ್ವಿಚಾರಕರ ಸಮಿತಿ ತುರ್ತು ಸಭೆಯನ್ನು ಕರೆದಿದೆ. ಹೊಸ ಸ್ವರೂಪದ ವೈರಸ್ ನಿಯಂತ್ರಣದ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

English summary
Britain has detected a patient infected with the new strain of Coronavirus. The patient and his partner returned from the United Kingdom few days back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X