ಸ್ಟಾಕ್ ಹೋಮ್ ನಲ್ಲಿ ಟ್ರಕ್ ಹರಿದು ಐವರು ಸಾವು
ಸ್ಟಾಕ್ ಹೋಮ್ ನಲ್ಲಿ ಸಾರ್ವಜನಿಕ ಗುಂಪೊಂದರ ಮೇಲೆ ಟ್ರಕ್ ಹರಿದು ಐವರು ಮೃತಪಟ್ಟಿರುವ ಘಟನೆ ನಡೆದಿದೆ.
ಸ್ಟಾಕ್ ಹೋಮ್, ಏಪ್ರಿಲ್ 07: ಸ್ಟಾಕ್ ಹೋಮ್ ನಲ್ಲಿ ಸಾರ್ವಜನಿಕ ಗುಂಪೊಂದರ ಮೇಲೆ ಟ್ರಕ್ ಹರಿದು ಐವರು ಮೃತಪಟ್ಟಿರುವ ಘಟನೆ ನಡೆದಿದೆ.
ಶಾಪಿಂಗ್ ಸೆಂಟರ್ ಬಳಿ ಇದ್ದ ಸಾರ್ವಜನಿಕರ ಗುಂಪಿನ ಮೇಲೆ ವಾಹನವೊಂದು ಗುದ್ದಿದ್ದು,ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಾಹನದ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ವಾಹನದ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಪ್ರತ್ಯಕ್ಷ ಸಾಕ್ಷಿಯೊಬ್ಬರು ಹೇಳಿದ್ದಾರೆ.
ಸ್ವೀಡಿಷ್ ರೇಡಿಯೋ ವರದಿ ಪ್ರಕಾರ, ಐವರು ಸಾವನ್ನಪ್ಪಿದ್ದಾರೆ. ಆದರೆ, ಅಧಿಕೃತ ಹೇಳಿಕೆಯಂತೆ ಮೂವರು ಸಾವನ್ನಪ್ಪಿದ್ದು, ಒಬ್ಬ ಶಂಕಿತನನ್ನು ಬಂಧಿಸಲಾಗಿದೆ ಎಂದು ಸ್ವೀಡಿಷ್ ಪೊಲೀಸರು ಹೇಳಿದ್ದಾರೆ.












Click it and Unblock the Notifications