ಚುನಾವಣೆ ಗೆಲ್ಲಬೇಕು ಇಲ್ಲ ಜೈಲಿಗೆ ಹೋಗಬೇಕು..! ಹಿಂಗೆ ಆಗದಿದ್ರೆ ಕೊಲೆ ಮಾಡ್ತಾರಂತೆ..!

ಚುನಾವಣೆ ಗೆಲ್ಲದೇ ಹೋದರೆ ಕೊಲೆ ಮಾಡೋ ವಿಚಾರ ಎಲ್ಲಾದರೂ ಕೇಳಿದ್ದೀರಾ..? ಆದ್ರೆ ಬ್ರೆಜಿಲ್ ಅಧ್ಯಕ್ಷ ಬೋಲ್ಸೊನಾರೋ ಹಿಂಗೆ ಹೇಳಿ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿವಾದ ಮಾಡಿಕೊಳ್ಳುತ್ತಾ ಟ್ರೆಂಡ್‌ನಲ್ಲಿ ಇರುವ ಬ್ರೆಜಿಲ್ ಅಧ್ಯಕ್ಷ, ಇಂತಹದ್ದೇ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ 2022ರ ಅಕ್ಟೋಬರ್ 2ರಂದು ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಆದರೆ ಚುನಾವಣೆಗೂ ಮುನ್ನ ಬೋಲ್ಸೊನಾರೋ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಚುನಾವಣೆಯ ಹಿನ್ನೆಲೆ ಏರ್ಪಡಿಸಿದ್ದ ಸಭೆಯಲ್ಲಿ ತಮ್ಮದೇ ಪಕ್ಷದ ನಾಯಕರ ಎದುರು ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ ಜೈರ್ ಬೋಲ್ಸೊನಾರೋ. ಈ ಚುನಾವಣೆ ನನಗೆ ಮಾಡು ಇಲ್ಲವೇ ಮಡಿ. ನನಗೀಗ 3 ಆಯ್ಕೆಗಳಿವೆ ಒಂದು ಚುನಾವಣೆ ಗೆಲ್ಲಬೇಕು, ಇಲ್ಲವಾದರೆ ಅರೆಸ್ಟ್ ಆಗಬೇಕು ಇದೂ ನಡೆಯದಿದ್ದರೆ ನಾನು ಕೊಲೆ ಆಗುತ್ತೇನೆ ಎಂದಿದ್ದಾರೆ ಬೋಲ್ಸೊನಾರೋ.

ಮತಯಂತ್ರಗಳ ಬಗ್ಗೆ ಈಗಾಗಲೇ ಬೋಲ್ಸೊನಾರೋ ಕಿರಿಕ್ ತೆಗೆದಿದ್ದು, ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಪತ್ರಕ್ಕೆ ಒಪ್ಪಿಗೆ ನೀಡಿ ಅಂತಾ ಒತ್ತಡ ಹೇರುತ್ತಿದ್ದಾರೆ. ಬೋಲ್ಸೊನಾರೋ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಲ್ಲೇ ಬೋಲ್ಸೊನಾರೋ ನೀಡಿರುವ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

ಬ್ರೆಜಿಲ್‌ನಲ್ಲಿ ಸೂಕ್ಷ್ಮ ಪರಿಸ್ಥಿತಿ

ಬ್ರೆಜಿಲ್‌ನಲ್ಲಿ ಸೂಕ್ಷ್ಮ ಪರಿಸ್ಥಿತಿ

ಮೊದಲೇ ಬ್ರೆಜಿಲ್ ಸೂಕ್ಷ್ಮ ಪರಿಸ್ಥಿತಿ ಇರುವ ದೇಶ. ಅಲ್ಲಿ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದರೆ ಕಂಟ್ರೋಲ್ ಮಾಡಲು ಭದ್ರತಾ ಪಡೆಗಳು ಪರದಾಡಬೇಕು. ಇದು ಗೊತ್ತಿದ್ದರೂ ಬೋಲ್ಸೊನಾರೋ ಇಂತಹ ಹೇಳಿಕೆಗಳನ್ನು ನೀಡಿ ಶಾಂತಿ ಕದಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಪಕ್ಷ ನಾಯಕರು ಬೋಲ್ಸೊನಾರೋ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಬ್ರೆಜಿಲ್ ಅಧ್ಯಕ್ಷರು, ಈ ರೀತಿ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಸೆಪ್ಟೆಂಬರ್ 7ರಂದು ಬಹುದೊಡ್ಡ ಸಭೆ ಕರೆದಿರುವ ಬೋಲ್ಸೊನಾರೋ, ಈ ಸಭೆಯಲ್ಲಿ ದೇಶದ ನಾಯಕರು ಪಾಲ್ಗೊಂಡು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ..!

ಸಾವಿರಾರು ಜನರಿಂದ ಹೋರಾಟ

ಸಾವಿರಾರು ಜನರಿಂದ ಹೋರಾಟ

ಬ್ರೆಜಿಲ್‌ ಸ್ಮಗ್ಲರ್‌ಗಳ ಸ್ವರ್ಗ, ಬ್ರೆಜಿಲ್‌ ರೌಡಿಗಳ ಅಡ್ಡೆ ಹೀಗೆ ಹಲವು ಕೆಟ್ಟ ಹೆಸರುಗಳನ್ನು ಪಡೆದಿದೆ ಪ್ರಕೃತಿಯ ತವರು. ಇಷ್ಟೆಲ್ಲಾ ಸಮಸ್ಯೆ ಇದ್ರೂ ಬೋಲ್ಸೊನಾರೋ ತಮ್ಮ ಆಡಳಿತದ ಅವಧಿಯಲ್ಲಿ ಏನನ್ನೂ ಸರಿಪಡಿಸಿಲ್ಲ. ಬದಲಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಹೋಗಿದೆ ಎಂಬ ಆರೋಪವಿದೆ. ಜನರು ಕೂಡ ಬೋಲ್ಸೊನಾರೋ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇಂತಹ ಹೊತ್ತಲ್ಲಿ ಚುನಾವಣೆ ವ್ಯವಸ್ಥೆ ಮೇಲೆ ಆರೋಪ ಮಾಡಿ, ತೇಪೆ ಹಾಕಲು ಬೋಲ್ಸೊನಾರೋ ಯತ್ನಿಸಿದ್ರಾ? ಎಂಬ ಡೌಟ್ ಮೂಡಿದೆ. ಅಮೆರಿಕದಲ್ಲಿ ಟ್ರಂಪ್ ಮಾಡಿದ ರೀತಿ, ಬ್ರೆಜಿಲ್‌ನಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಬ್ರೆಜಿಲ್‌ನ ರಾಜಧಾನಿ ಬ್ರೆಸಿಲಿಯಾ ಸೇರಿದಂತೆ 'ರಿಯೋ' ಮತ್ತಿತರೆಡೆ ಭಾರಿ ಹೋರಾಟ ಆರಂಭವಾಗಿದ್ದು, ಹಿಂಸೆಯ ಭೀತಿ ಆವರಿಸಿದೆ.

ಆರೋಪ ನಿರಾಕರಿಸಿದ ಆಯೋಗ

ಆರೋಪ ನಿರಾಕರಿಸಿದ ಆಯೋಗ

ಬ್ರೆಜಿಲ್ ಚುನಾವಣಾ ವ್ಯವಸ್ಥೆ ಬಗ್ಗೆ ಜೈರ್ ಬೋಲ್ಸೊನಾರೋ ಮಾಡಿರುವ ಆರೋಪವನ್ನು ಅಲ್ಲಿನ ಚುನಾವಣಾ ಆಯೋಗ ನಿರಾಕರಿಸಿದೆ. ಬೋಲ್ಸೊನಾರೋ ಮಾಡಿದ ಆರೋಪದಲ್ಲಿ ಸತ್ಯವಿಲ್ಲ. 2018ರಲ್ಲಿ ಮೋಸ ನಡೆದಿತ್ತು ಎಂದು ಜೈರ್ ಬೋಲ್ಸೊನಾರೋ ಹೇಳುತ್ತಿರುವುಕ್ಕೆ ಪುರಾವೆ ಇಲ್ಲ. ಬ್ರೆಜಿಲ್ ಚುನಾವಣಾ ವ್ಯವಸ್ಥೆ ಸರಿಯಾಗೇ ಇದೆ ಎಂದು ಬ್ರೆಜಿಲ್ ಚುನಾವಣಾ ಆಯೋಗ ಸಮರ್ಥನೆಯನ್ನೂ ನೀಡಿದೆ. ಆದ್ರೆ ಇದನ್ನು ಇಷ್ಟಕ್ಕೇ ನಿಲ್ಲಿಸಲು ಇಷ್ಟವಿಲ್ಲದ ಬೋಲ್ಸೊನಾರೋ ಬೆಂಬಲಿಗರು ಹೋರಾಟ ಆರಂಭಿಸಿದ್ದಾರೆ. ಕೊರೊನಾ ಕಂಟಕದ ನಡುವೆಯೇ ಹೋರಾಟ ಮತ್ತು ಹಿಂಸಾಚಾರವನ್ನ ಎದುರಿಸಬೇಕಾದ ಪರಿಸ್ಥಿತಿ ಬ್ರೆಜಿಲ್‌ನಲ್ಲಿ ಸೃಷ್ಟಿಯಾಗಿದೆ.

ಬೋಲ್ಸೊನಾರೋ ವಿರುದ್ಧ ಆಕ್ರೋಶ

ಬೋಲ್ಸೊನಾರೋ ವಿರುದ್ಧ ಆಕ್ರೋಶ

ಬ್ರೆಜಿಲ್‌ನಲ್ಲಿ ಬೋಲ್ಸೊನಾರೋ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ವಿವಾದ ಸೃಷ್ಟಿಸುತ್ತಿದ್ದಾರೆ. ಕೊರೊನಾ ನಿಯಂತ್ರಣದ ವಿಚಾರದಲ್ಲಿ ಈಗಾಗಲೇ ಬ್ರೆಜಿಲ್‌ ಸಂಸತ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಅಮೆಜಾನ್ ಮೂಲ ನಿವಾಸಿಗಳು ಜೈರ್ ಬೋಲ್ಸೊನಾರೋ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಹೋರಾಟ ಆರಂಭಿಸಿದ್ದಾರೆ. ಇದರ ನಡುವೆ ಪರಿಸರ ಸಂರಕ್ಷಣೆ ವಿಚಾರದಲ್ಲೂ ಬೋಲ್ಸೊನಾರೋ ಸರ್ಕಾರದ ಈ ಅಸಡ್ಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದ್ಯಾವುದಕ್ಕೂ ಜೈರ್ ಬೋಲ್ಸೊನಾರೋ ಕೇರ್ ಮಾಡುವ ಲಕ್ಷಣಗಳೇ ಕಾಣುತ್ತಿಲ್ಲ. ಇಷ್ಟೆಲ್ಲದರ ನಡುವೆ ಚುನಾವಣಾ ವ್ಯವಸ್ಥೆಯ ಮೇಲೆ ಬೋಲ್ಸೊನಾರೋ ಅನುಮಾನ ವ್ಯಕ್ತಪಡಿಸಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+