ಕರಾಚಿ: 'ಭಜರಂಗಿ ಭಾಯಿಜಾನ್' ನಿರ್ದೇಶಕನಿಗೆ 'ಶೇಮ್ ಶೇಮ್' ಸ್ವಾಗತ

Posted By:
Subscribe to Oneindia Kannada

ಕರಾಚಿ, ಏಪ್ರಿಲ್ 27: ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅವರಿಗೆ ಚಪ್ಪಲಿ ತೋರಿಸಿ ಸ್ವಾಗತ ಕೋರಲಾಗಿದೆ. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಹಲ್ಲೆಗೂ ಯತ್ನಿಸಿದ ಘಟನೆ ನಡೆದಿದೆ.

ಪಾಕಿಸ್ತಾನ ವಿರೋಧಿ ಚಿತ್ರ ನಿರ್ದೇಶಿಸಿದ್ದಕ್ಕಾಗಿ ಕಬೀರ್ ಖಾನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಶೇಮ್ ಶೇಮ್ ಎಂದು ಕೂಗುತ್ತಾ ಗುಂಪೊಂದು ಕಬೀರ್ ಖಾನ್ ಅವರನ್ನು ಸುತ್ತುವರೆದಿದೆ. [ಫ್ಯಾಂಟಮ್ ವಿಮರ್ಶೆ: ಥ್ರಿಲ್ ಇದ್ದರೂ ಬೋರ್ ಬೋರ್]

Bollywood director Kabir Khan heckled at Karachi airport

ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಬೀರ್ ಖಾನ್ ಗೆ ಈ ರೀತಿ ಅನಿರೀಕ್ಷಿತ ಸ್ವಾಗತ ಸಿಕ್ಕಿದೆ.

ಭಜರಂಗಿ ಭಾಯಿಜಾನ್ಚಿತ್ರ ನಿರ್ದೇಶಿಸಿ ಉಭಯ ದೇಶಗಳ ಜನರ ಮನಗೆದ್ದಿದ್ದ ಕಬೀರ್ ಖಾನ್ ಅವರಿಗೆ ಈ ರೀತಿ ಅಪಮಾನವಾಗಲು ಕಾರಣವಾಗಿದ್ದು ಫ್ಯಾಂಟಮ್ ಚಿತ್ರ. [ಪಾಕಿಸ್ತಾನದಲ್ಲಿ ಫ್ಯಾಂಟಮ್ ಗೆ ಹೆದರಿದ 'ಉಗ್ರ']

ಸೈಫ್ ಅಲಿ ಖಾನ್ ನಟನೆಯ ಫ್ಯಾಂಟಮ್ ಚಿತ್ರದಲ್ಲಿ ಪಾಕಿಸ್ತಾನ ವಿರೋಧಿ ಸಂದೇಶವಿದೆ. ಉಗ್ರರ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನವೆಂದರೆ ಉಗ್ರರ ಪಾಲಿನ ಸ್ವರ್ಗ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದನ್ನು ಆಕ್ಷೇಪಿಸಿರುವ ಜನತೆ, ಕಬೀರ್ ಖಾನ್ ಗೆ ತಿರುಗೇಟು ನೀಡಿದ್ದಾರೆ. ಕಬೀರ್ ಖಾನ್ ಗೆ ಸಿಕ್ಕ ಶೇಮ್ ಶೇಮ್ ಸ್ವಾಗತದ ವಿಡಿಯೋ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood director Kabir Khan, known for blockbuster Bajrangi Bhaijaan, was heckled at Karachi airport in Pakistan, media reported.
Please Wait while comments are loading...