Bohlale Mphahlele: 16 ವರ್ಷದ ವಿದ್ಯಾರ್ಥಿನಿಯ "ಕಿವಿಯೋಲೆ' ಆವಿಷ್ಕಾರಕ್ಕೆ ತಲೆದೂಗಿದ ಜಗತ್ತು: ಹೆಣ್ಮಕ್ಕಳಿಗೆ ಆಭರಣ - ರಕ್ಷಣೆ!
Bohlale Mphahlele: 16 ವರ್ಷದ ಯುವಕನೊಬ್ಬ ಆವಿಷ್ಕಾರ ಇದೀಗ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಇಂದು ಲಕ್ಷಾಂತರ ಜನರ ರಕ್ಷಣೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ 16 ವರ್ಷದ ವಿದ್ಯಾರ್ಥಿನಿ ಬೊಹ್ಲಾಲೆ ಎಂಫಹ್ಲೆಲೆ ವಿಶೇಷ ಸುರಕ್ಷತಾ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಲಿಂಗ ಆಧಾರಿತ ಹಿಂಸೆ, ಮಾನವ ಕಳ್ಳಸಾಗಣೆ ಸೇರಿದಂತೆ ಅಪಾಯಕಾರಿ ಪರಿಸ್ಥಿತಿಗೆ ಸಿಲುಕುವವರು ದಾಳಿಕೋರರಿಗೆ ತಿಳಿಯದಂತೆ ಸಹಾಯಕ್ಕಾಗಿ ಕರೆ ಮಾಡಲು ಈ ಬಳಸಬಹುದಾಗಿದೆ. ಈ ಮಾದರಿಯ ಆವಿಷ್ಕಾರವು ಇದೀಗ ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿದೆ. ಸಣ್ಣ ಗುಳಿಗೆ ಗಾತ್ರದ ಈ ಸಾಧನ ಯುವತಿಯರು ಹಾಗೂ ಮಹಿಳೆಯರಿಗೆ ತುಂಬಾನೇ ಅನುಕೂಲವಾಗಲಿದೆ.
ದಕ್ಷಿಣ ಆಫ್ರಿಕಾದ ವಿದ್ಯಾರ್ಥಿನಿ ಬೊಹ್ಲಾಲೆ ಎಂಫಹ್ಲೆಲೆ ಮಾಡಿರುವ ಆವಿಷ್ಕಾರವು ಇದೀಗ ವಿಶ್ವದ ಅಭಿವೃದ್ಧಿ ಹೊಂದಿರುವ ದೇಶಗಳ ಗಮನ ಸೆಳೆದಿದೆ. ಆಫ್ರಿಕಾದ ಲಿಂಪೊಪೊದ ಎಸ್‌ಜೆ ವ್ಯಾನ್ ಡೆರ್ ಮೆರ್ವೆ ತಾಂತ್ರಿಕ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ಬೊಹ್ಲಾಲೆ ಎಂಫಹ್ಲೆಲೆ, ಅಲರ್ಟಿಂಗ್ ಇಯರ್‌ಪೀಸ್ ಎಂದು ಕರೆಯಲ್ಪಡುವ ಸಾಧನವನ್ನು ಆವಿಷ್ಕಾರ ಮಾಡಿದ್ದಾರೆ. ಈ ಸಾಧನವನ್ನು ಕಿವಿಯೋಲೆ ಮಾದರಿಯಲ್ಲಿ ಬಳಸಬಹುದು. ಅಲ್ಲದೆ ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಈ ಸಾಧನದಿಂದ ಕರೆ ಸಹ ಮಾಡಬಹುದು! ಸಾಮಾನ್ಯ ಕಿವಿಯೋಲೆಯನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ಈ ಸಾಧನವು ತುರ್ತು ಸಮಯದಲ್ಲಿ ಕಾಲ್ ಅಥವಾ ತುರ್ತು ಸಂದೇಶ ಕಳುಹಿಸುವುದಕ್ಕೆ ಸಹಕಾರಿಯಾಗಿದೆ.

2020ರ Eskom for Young Scientists Expo ದಲ್ಲಿ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಎಂಬೆಡೆಡ್ ಸಿಸ್ಟಮ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಬಳಿಕ ಅವರ ಈ ಆವಿಷ್ಕಾರಕ್ಕೆ ದೇಶಾದ್ಯಂತ ಗಮನ ಸೆಳೆಯಲು ಕಾರಣವಾಯಿತು.
ಕಿವಿಯೋಲೆ ಮಾದರಿಯ ಈ ಸಾಧನೆ ಹೇಗೆ ಕೆಲಸ ಮಾಡುತ್ತದೆ ?
ಅಲರ್ಟಿಂಗ್ ಇಯರ್‌ಪೀಸ್ ಅಥವಾ ಕಿವಿಯೋಲೆ ಮಾದರಿಯ ತುರ್ತು ಮಾದರಿಯು ಮರೆಮಾಚಲಾಗಿರುವ ಬಟನ್ ಮೂಲಕ ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಸಾಧನವನ್ನು ಒಮ್ಮೆ ಸಕ್ರಿಯಗೊಳಿಸಿದರೆ ಸಾಕು ಅದು ದಾಳಿ ಮಾಡಬಹುದಾದ ವ್ಯಕ್ತಿ / ದಾಳಿ ಮಾಡಲು ಮುಂದಾದ ವ್ಯಕ್ತಿಯ ಫೋಟೋ ತೆಗೆದು, ಸಂಪರ್ಕ ಹೊಂದಿರುವ ಸಾಧನಗಳಿಗೆ ಕೂಡಲೇ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ. ಸೀಕ್ರೆಟ್ ಕ್ಯಾಮೆರಾದಿಂದ ಸೆರೆಹಿಡಿಯಲಾದ ಚಿತ್ರಗಳನ್ನು ಇದು ಒಳಗೊಂಡಿರಬಹುದು. ಇದು ತುರ್ತು ಸಂದರ್ಭಗಳಲ್ಲಿ ಆತ್ಮೀಯರು ಅಥವಾ ಪೊಲೀಸರನ್ನು ಸಂಪರ್ಕಿಸಲು ಸಹಾಯವಾಗಲಿದೆ.
ಈ ತಂತ್ರಜ್ಞಾನವನ್ನು ಆಭರಣದಂತೆ / ಕಿವಿಯೋಲೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ದುಷ್ಕರ್ಮಿಗಳು, ಕಳ್ಳರು ಹಾಗೂ ಅನಾಮಿಕರಿಗೆ ಇದೊಂದು ತುರ್ತು ಸಾಧನ ಎನ್ನುವುದು ತಿಳಿಯುವುದಿಲ್ಲ. ಅಪಾಯಕ್ಕೆ ಒಳಗಾದವರು ಕ್ಷಣ ಮಾತ್ರದಲ್ಲೇ ಈ ಸಾಧನವನ್ನು ಆಕ್ಟಿವ್ ಮಾಡಿಕೊಳ್ಳಬಹುದಾಗಿದೆ. ದಾಳಿಕೋರರ ಗಮನವನ್ನು ತಕ್ಷಣವೇ ಸೆಳೆಯದೆಯೂ ಇದನ್ನು ಆಕ್ಟಿವ್ ಮಾಡಲು ಸಾಧ್ಯವಿದೆ. ತುರ್ತು ಸಂದರ್ಭಗಳಲ್ಲಿ ಫೋನ್ ಮಾಡುವುದು ಅಪಾಯಕ್ಕೆ ಒಳಗಾದವರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಹೀಗಾಗಿ, ಈ ಸಾಧನವನ್ನು ಪರಿಚಯಿಸಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹೆಚ್ಚು ಹಿಂಸಾಚಾರ ನಡೆಯುತ್ತಿದೆ ಎನ್ನುವ ವಿಷಯವು ಗಮನಕ್ಕೆ ಬಂದ ಮೇಲೆ ಬೊಹ್ಲಾಲೆ ಎಂಫಹ್ಲೆಲೆ ಅವರು ಈ ರೀತಿಯ ಆವಿಷ್ಕಾರವೊಂದನ್ನು ಮಾಡಿದ್ದಾರೆ. ತಂತ್ರಜ್ಞಾನವು ದುರ್ಬಲರಿಗೆ ಸಹಾಯ ಮಾಡಬೇಕು. ಬೇಗ ಹಾಗೂ ಕಡಿಮೆ ಸಮಯದಲ್ಲಿ ಇದೆಲ್ಲವೂ ಆಗಬೇಕು. ಈ ಮಾದರಿಯ ಸಾಧನವೊಂದನ್ನು ಕಂಡುಹಿಡಿಯಬೇಕು ಎಂದು ಯೋಚಿಸುತ್ತಿರುವ ಸಂದರ್ಭದಲ್ಲಿ ಈ ಐಡಿಯಾ ಬಂದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
"ಎಚ್ಚರಿಕೆ ನೀಡುವ ಇಯರ್‌ಪೀಸ್ / ಕಿವಿಯೋಲೆಯು ವಿಶೇಷ ಆವಿಷ್ಕಾರವಾಗಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ನಾವು ದಿನನಿತ್ಯ ಎದುರಿಸುತ್ತಿರುವ ಲಿಂಗ ಆಧಾರಿತ ಹಿಂಸೆ, ಮಾನವ ಕಳ್ಳಸಾಗಣೆ ಮತ್ತು ಇತರ ಸವಾಲುಗಳ ಸಾಧ್ಯತೆಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ" ಎಂದು ಅವರು 2020 ರಲ್ಲಿ ಐಟಿವೆಬ್ ವರದಿ ಮಾಡಿದ ಸಂದರ್ಶನದಲ್ಲಿ ದಕ್ಷಿಣ ಆಫ್ರಿಕಾದ ವಿದ್ಯಾರ್ಥಿನಿ ಬೊಹ್ಲಾಲೆ ಎಂಫಹ್ಲೆಲೆ ವಿವರಿಸಿದ್ದರು.
ಈ ವಿನ್ಯಾಸವು ಬ್ಯಾಟರಿ ಬಾಳಿಕೆ, ಇಮೇಜ್ ಟ್ರಾನ್ಸ್‌ಮಿಷನ್, ತುರ್ತು ಆಯಕ್ಟೀವ್, ಡೇಟಾ ರಕ್ಷಣೆ ಮತ್ತು ವಿಶ್ವಾಸಾರ್ಹವಲ್ಲದ ಮೊಬೈಲ್ ಕವರೇಜ್ ಹೊಂದಿರುವ ಪ್ರದೇಶಗಳಲ್ಲಿ ಬಳಕೆದಾರರ ಸುರಕ್ಷತೆಯ ಕುರಿತಾದ ಪ್ರಶ್ನೆಗಳನ್ನು ಸಹ ಇದು ಪರಿಚಯಿಸುತ್ತದೆಯಾದರೂ ಕೆಲವೊಂದು ಬದಲಾವಣೆಗಳು ಆಗಬೇಕಾದ ಅವಶ್ಯಕತೆ ಇದೆ.
ಈ ಸವಾಲುಗಳು ಮೂಲ ಆವಿಷ್ಕಾರದ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದಿಲ್ಲ ಎಂದೂ ಹೇಳಲಾಗಿದೆ. ಒಟ್ಟಾರೆ 16 ವರ್ಷದ ಯುವಕನ ಆವಿಷ್ಕಾರವು ಈಗ ವಿಶ್ವದ ಗಮನ ಸೆಳೆಯುತ್ತಿದೆ. ಅವಶ್ಯಕತೆಯೇ ಆವಿಷ್ಕಾರದ ತಾಯಿ ಅಂತಾರಲ್ಲ ಆ ರೀತಿ ಈ ಸಾಧನ ಹಲವರಿಗೆ ಸಹಕಾರಿಯಾಗಿದೆ.
🚨 Breaking News:
— Jollyxam 🇳🇬 🔀🇮🇹 (@jollyxam) February 6, 2026
A 16-year-old SA innovator Bohlale Mphahlele has designed "Alerting Earpiece," a discreet wearable device designed to combat gender-based violence by recording attackers, sending live GPS locations, and alerting emergency contacts.
Beauty with brains 🧠👍🏼 pic.twitter.com/f2gSTge4kM


Click it and Unblock the Notifications
