ಫಿಲಿಪೈನ್ಸ್ ಮಾರುಕಟ್ಟೆಯಲ್ಲಿ ಸ್ಫೋಟ, 12ಕ್ಕೂ ಹೆಚ್ಚು ಸಾವು

Posted By:
Subscribe to Oneindia Kannada

ದಾವೋ, ಫಿಲಿಪೈನ್ಸ್ : ದಕ್ಷಿಣ ಫಿಲಿಪೈನ್ಸ್ ನ ದಾವೋದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 12 ಜನರು ಹತರಾಗಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಫಿಲಿಪೈನ್ಸ್ ನ ಅಧ್ಯಕ್ಷ ರೊಡ್ರಿಗೊ ಡುಟೆರ್ಟೆಯ ತವರಾಗಿರುವ ದಾವೋದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿದ್ದ ಎಂದು ಸ್ಥಳೀಯ ಮಿಲಿಟರಿ ಕಮಾಂಡರ್ ಲೆ.ಜ. ರೇ ಲಿಯೋನಾರ್ಡೋ ಗುರೆರೋ ಹೇಳಿದ್ದಾರೆ.

Blast in Philippine market, killing dozen

ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಅತ್ಯಂತ ಜನನಿಬಿಡವಾದ ಪ್ರದೇಶದ ಮಸಾಜ್ ಮಾಡುವ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಹೆಚ್ಚಿನ ಸಾವುನೋವುಗಳಾಗಿವೆ.

ಈ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಅಡುಗೆ ಅನಿಲದ ಗ್ಯಾಸ್ ಸ್ಫೋಟಗೊಂಡಿತು ಎಂದು ಹೇಳುತ್ತಿದ್ದರೆ, ಕೆಲವರು ಬಾಂಬ್ ಸ್ಫೋಟಗೊಂಡಿರಬಹುದು ಎನ್ನುತ್ತಿದ್ದಾರೆ.

ದುರ್ಘಟನೆ ಸ್ಥಳದಲ್ಲಿ ಪ್ಲಾಸ್ಟಿಕ್ ಕುರ್ಚಿಗಳು, ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಾಯಗೊಂಡವರ ಆರ್ತನಾದ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಅಧ್ಯಕ್ಷ ಡುಟೆರ್ಟೆ ಭೇಟಿ ನೀಡಿದರೂ ಯಾವುದೇ ಹೇಳಿಕೆ ನೀಡಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
More than dozen people have been killed and more than 24 people injured in a powerful blast took place in a market place in Philippine on Friday night.
Please Wait while comments are loading...