ಕಾಬೂಲ್ ನಲ್ಲಿ ಬಾಂಬ್ ಸ್ಫೋಟ, ಹಲವರಿಗೆ ಗಾಯ

Posted By:
Subscribe to Oneindia Kannada

ಕಾಬೂಲ್, ಅಕ್ಟೋಬರ್ 31: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹಲವರು ಗಾಯಾಳುಗಳಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಧ್ಯಮ ಸಂಸ್ಥೆಯೊಂದರ ಪ್ರತಿನಿಧಿಗಳ ಪ್ರಕಾರ ಈ ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಾಳುಗಳಾಗಿದ್ದಾರೆ. ಕಾಬೂಲ್ ನ ವಜೀರ್ ಅಕ್ಬರ್ ಖಾನ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.

ಅಫ್ಘಾನಿಸ್ತಾನದ ಮಸೀದಿಗಳ ಮೇಲೆ ಉಗ್ರರ ಅಟ್ಟಹಾಸ, 72 ಜನರು ಬಲಿ

ಸಾರ್ವಜನಿಕ ಆರೋಗ್ಯಾಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಮೂರು ಮೃತ ದೇಹಗಳನ್ನು ಹಾಗೂ ಹತ್ತು ಗಾಯಾಳುಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಯಾವುದೇ ಉಗ್ರಗಾಮಿ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಜತೆಗೆ ಈ ಸ್ಫೋಟಕ್ಕೆ ಕಾರಣ ಏನು ಅಂತಲೂ ತಿಳಿದುಬಂದಿಲ್ಲ.

Blast hits Afghan capital Kabul, numerous casualties

ಕಾಬೂಲ್ ನ ಪೊಲೀಸ್ ವಕ್ತಾರರೊಬ್ಬರ ಪ್ರಕಾರ ಇದು ಆತ್ಮಹತ್ಯಾ ಬಾಂಬ್ ದಾಳಿ. ಆದರೆ ಪೊಲೀಸರು ಇತರ ಸಾಧ್ಯತೆಗಳ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದಾರೆ. ಯಾರಾದರೂ ಮುಂಚಿತವಾಗಿಯೇ ಅಲ್ಲಿ ಬಾಂಬ್ ಇರಿಸಿದ್ದರೆ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ವಜೀರ್ ಅಕ್ಬರ್ ಖಾನ್ ಪ್ರದೇಶವು ಹಲವು ದೇಶಗಳ ರಾಯಭಾರ ಕಚೇರಿಗಳಿಗೆ ಬಹಳ ಹತ್ತಿರದಲ್ಲಿದೆ. ಜತೆಗೆ ಆಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ವಿಶ್ರಾಂತಿ ಗೃಹ ಹಾಗೂ ಕಚೇರಿಗೂ ಸನಿಹದಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A large explosion hit the Afghan capital Kabul on Tuesday, in an area housing foreign embassies and government departments, causing numerous casualties.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ