ಅಮೇರಿಕಾ ಮೇಲೆ ಗಂಭೀರ ಆರೋಪ ಮಾಡಿದ ಬಿಜೆಪಿ

ಅಮೇರಿಕಾದಲ್ಲಿರುವ ಸ್ಟೇಟ್ ಡಿಪಾರ್ಟ್‌ಮೆಂಟ್ ಹಾಗೂ "ಡೀಪ್ ಸ್ಟೇಟ್" ಅಂಶಗಳು ತನಿಖಾ ಪತ್ರಕರ್ತರು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಜೊತೆಗೂಡಿ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.

ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ಕಳೆದ ಎರಡು ದಶಕಗಳಲ್ಲಿ ಬಲವಾದ ಸಂಬಂಧವನ್ನು ಬೆಸೆದಿರುವುದರಿಂದ ಈ ಆರೋಪವು ಆಶ್ಚರ್ಯಕರವಾಗಿದೆ. ಮತ್ತೊಂದೆಡೆ ಕೆಲವು ಭಿನ್ನಾಭಿಪ್ರಾಯಗಳು ಮತ್ತು ಕಿರಿಕಿರಿಗಳ ಹೊರತಾಗಿಯೂ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಉಭಯ ರಾಷ್ಟ್ರಗಳು ಪ್ರತಿಜ್ಞೆ ಮಾಡಿವೆ.

BJP Accuses US State Department And Deep State of Destabilizing India

ಭಾರತವನ್ನು ಅಸ್ಥಿರಗೊಳಿಸಲು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಲು ಯುಎಸ್ "ಡೀಪ್ ಸ್ಟೇಟ್" ಕೆಲಸ ಮಾಡುತ್ತಿದೆ. ಈ ಅಜೆಂಡಾ ಹಿಂದೆ ಅಮೇರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ಸದಾ ಇದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ನೇರ ಆರೋಪ ಮಾಡಿದ್ದಾರೆ.

ಅಮೆರಿಕಾವು ಪತ್ರಕರ್ತರ ಗುಂಪು ಮತ್ತು ಭಾರತದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜತೆಗೂಡಿ ಭಾರತದ ಬೆಳವಣಿಗೆಯಲ್ಲಿ ಆಧಾರರಹಿತ ಆರೋಪಗಳು ಮತ್ತು ದುರುದ್ದೇಶಪೂರಿತ ವರದಿಗಳನ್ನು ಬಿಂಬಿಸಲು ಮುಂದಾಗಿದೆ ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ದೂರಿದ್ದಾರೆ.

BJP Accuses US State Department And Deep State of Destabilizing India

ರಾಹುಲ್ ಗಾಂಧಿ ಅವರು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ, ಹಾಗೂ ಇನ್ನಿತರ ವರದಿಗಳನ್ನು ಬಳಸಿಕೊಂಡು ಅದಾನಿ ಗ್ರೂಪ್ ಮತ್ತು ಇತರೆ ಆಧಾರರಹಿತ ವಿಚಾರಗಳನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ಮೋದಿಯನ್ನು ದುರ್ಬಲಗೊಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.

ಫ್ರೆಂಚ್ ಮಾಧ್ಯಮದ ವರದಿಯಲ್ಲಿ ಉಲ್ಲೇಖವಾಗಿರುವಂತೆ Organized Crime and Corruption Reporting Projectಗೆ (OCCRP) ಅಮೇರಿಕಾ US ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ ಮತ್ತು ಜಾರ್ಜ್ ಸೊರೊಸ್‌ನಂತಹ ವ್ಯಕ್ತಿಗಳು ಧನಸಹಾಯವನ್ನು ನೀಡಿದ್ದಾರೆ. ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಭಾರತವನ್ನು ಅಸ್ಥಿರಗೊಳಿಸುವ ಡೀಪ್ ಸ್ಟೇಟ್ ಸ್ಪಷ್ಟ ಉದ್ದೇಶವನ್ನು ಹೊಂದಿತ್ತು ಎಂದು ಅವರು ಆರೋಪ ಮಾಡಿದ್ದಾರೆ.

BJP Accuses US State Department And Deep State of Destabilizing India

ಈ ಅಜೆಂಡಾ ಹಿಂದೆ ಅಮೇರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ಸದಾ ಇದೆ. OCCRP ಆಳವಾದ ಅಜೆಂಡಾ ಕೈಗೊಳ್ಳಲು ಮಾಧ್ಯಮಗಳು ಸಾಧನವಾಗಿ ಕಾರ್ಯನಿರ್ವಹಿಸುತ್ತಿವೆ. ಫ್ರೆಂಚ್ ತನಿಖಾ ಮಾಧ್ಯಮ ಗುಂಪು OCCRPಗೆ ಶೇ 50ರಷ್ಟು ಹಣ ನೇರವಾಗಿ US ಸ್ಟೇಟ್ ಡಿಪಾರ್ಟ್‌ಮೆಂಟ್‌ನಿಂದ ಬರುತ್ತದೆ ಎಂದು ಬಹಿರಂಗಪಡಿಸಿದೆ ಎಂದು ಸಂಬಿತ್‌ ಪಾತ್ರ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಅತ್ಯುತ್ತಮ ದೇಶದ್ರೋಹಿ ಎಂದು ಸಂಬಿತ್‌ ಪಾತ್ರ ಆರೋಪಿಸಿದ್ದಾರೆ. ಅಮೆರಿಕದ ಕೆಲವು ಏಜೆನ್ಸಿಗಳು ಮತ್ತು ಬಿಲಿಯನೇರ್ ಜಾರ್ಜ್ ಸೊರೊಸ್ ಅವರು ಭಾರತವನ್ನು ಅಸ್ಥಿರಗೊಳಿಸಲು ತ್ರಿಕೋನವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಂಬಿತ್ ಪಾತ್ರ ಅವರ ಆರೋಪವನ್ನು ಅವರ ಪಕ್ಷದ ಸಹೋದ್ಯೋಗಿ ನಿಶಿಕಾಂತ್ ದುಬೆ ಅವರು ಸಂಸತ್ತಿನಲ್ಲಿ ಪುನರುಚ್ಛರಿಸಿದ್ದಾರೆ. ಪ್ರಧಾನಿ ಮೋದಿಯವರ ಮೇಲಿನ ದ್ವೇಷದಿಂದಾಗಿ ಸರ್ಕಾರವನ್ನು ಹಳಿ ತಪ್ಪಿಸಲು ಕಾಂಗ್ರೆಸ್ ವಿದೇಶಿ ಶಕ್ತಿಗಳೊಂದಿಗೆ ಪಿತೂರಿ ನಡೆಸುತ್ತಿದೆ ಎಂದು ದುಬೆ ಕೂಡ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+