ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟರ್‌ ಬೃಹತ್ ಹ್ಯಾಕ್: ಬಿಟ್‌ಕಾಯಿನ್ ದಂಧೆಯಿಂದ ದಾಳಿ?

|
Google Oneindia Kannada News

ವಾಷಿಂಗ್ಟನ್, ಜುಲೈ 16: ಹಿಂದೆದೂ ಕಾಣದ ಟ್ವಿಟರ್ ಹ್ಯಾಕ್ ನಡೆದ ಬಳಿಕ ಸಾಮಾಜಿಕ ಜಾಲತಾಣ ಮಾಧ್ಯಮ ಟ್ವಿಟರ್ ಸಿಇಒ ಜ್ಯಾಕ್ ಡೊರ್ಸಿ ನಾವೆಲ್ಲರೂ ಭಯಭೀತರಾಗಿದ್ದೇವೆ ಎಂದು ಹೇಳಿದ್ದು, ಕಠಿಣ ಸಮಯವನ್ನು ಎದುರಿಸುತ್ತಿದ್ದೇವೆ ಎಂದಿದ್ದಾರೆ. ಮಲ್ನೋಟಕ್ಕೆ ಇದು ಬಿಟ್‌ಕಾಯಿನ್ ದಂಧೆಯಿಂದ ಹ್ಯಾಕ್ ಆಗಿರಬಹುದು ಎಂದು ಊಹಿಸಲಾಗಿದೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್, ಮತ್ತು ನ್ಯೂಯಾರ್ಕ್ ನಗರದ ಮಾಜಿ ಮೇಯರ್ ಮೈಕ್ ಬ್ಲೂಮ್‌ಬರ್ಗ್, ಬಿಲ್‌ಗೇಟ್ಸ್‌, ರಿಯಾಲಿಟಿ ಶೋ ಸ್ಟಾರ್ ಕಿಮ್ ಕಾರ್ದಶಿಯಾನ್, ಪಾಪ್ ಸ್ಟಾರ್ ಕಾನ್ಯೆ ವೆಸ್ಟ್ ಸೇರಿದಂತೆ ಉನ್ನತ ಮಟ್ಟದ ಟ್ವಿಟ್ಟರ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಭಾರಿ ಪ್ರಮಾಣದ ಹ್ಯಾಕರ್ ದಾಳಿ ನಡೆದಿದೆ.

US ಮಾಜಿ ಅಧ್ಯಕ್ಷ ಒಬಾಮಾ, ಬಿಲ್ ಗೇಟ್ಸ್ ಟ್ವಿಟರ್ ಖಾತೆಗಳೇ ಹ್ಯಾಕ್!US ಮಾಜಿ ಅಧ್ಯಕ್ಷ ಒಬಾಮಾ, ಬಿಲ್ ಗೇಟ್ಸ್ ಟ್ವಿಟರ್ ಖಾತೆಗಳೇ ಹ್ಯಾಕ್!

ಈ ಕುರಿತು ಟ್ವಿಟರ್‌ ನಲ್ಲಿ ತಿಳಿಸಿರುವ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಇದು "ಟ್ವಿಟ್ಟರ್‌ನಲ್ಲಿ ನಮಗೆ ಕಠಿಣ ದಿನ" ಎಂದು ಹೇಳಿದರು.

ಹೆಚ್ಚಿನ ಖಾತೆಗಳು ಮತ್ತೆ ಟ್ವೀಟ್ ಮಾಡಲು ಸಾಧ್ಯವಾಗುತ್ತದೆ ಎಂದು ಟ್ವಿಟರ್ ಹೇಳಿದೆ. "ಹೆಚ್ಚಿನ ಖಾತೆಗಳು ಮತ್ತೆ ಟ್ವೀಟ್ ಮಾಡಲು ಸಾಧ್ಯವಾಗುತ್ತದೆ. ನಾವು ಫಿಕ್ಸ್ ಮಾಡುವ ಕೆಲಸವನ್ನು ಮುಂದುವರಿಸುತ್ತಿದ್ದಂತೆ, ಈ ಕಾರ್ಯವು ಬರಬಹುದು ಮತ್ತು ಹೋಗಬಹುದು" ಎಂದು ಟ್ವಿಟರ್ ಬೆಂಬಲ ಟ್ವೀಟ್ ಮಾಡಿದೆ.

"ನಾವು ಸಾಧ್ಯವಾದಷ್ಟು ಬೇಗ ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಕೆಲಸ ಮಾಡುತ್ತಿದ್ದೇವೆ" ಎಂದು ಅದು ಹೇಳಿದೆ.

ಬಿಟ್‌ಕಾಯಿನ್ ದಂಧೆಯಿಂದ ಹ್ಯಾಕ್?

ಬಿಟ್‌ಕಾಯಿನ್ ದಂಧೆಯಿಂದ ಹ್ಯಾಕ್?

ನಕಲಿ ಟ್ವೀಟ್‌ಗಳು ವೈರಲ್‌ ಆದಾಗ ಈ ಹಗರಣ ಬೆಳಕಿಗೆ ಬಂದಿದ್ದು, ಈ ಉನ್ನತ ಮಟ್ಟದ ಖಾತೆಗಳ ಮೂಲಕ ಬಿಟ್‌ಕಾಯಿನ್‌ ವಿಳಾಸಕ್ಕೆ ಕಳುಹಿಸುವ ಪ್ರತಿ $ 1,000 ಕ್ಕೆ $ 2,000 ನೀಡುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

ನಂತರ, ಬಿಟ್‌ಕಾಯಿನ್ ಹಗರಣದ ಟ್ವೀಟ್‌ಗಳನ್ನು ಬಿಲ್ ಗೇಟ್ಸ್ ಮತ್ತು ಎಲೋನ್ ಮಸ್ಕ್ ಅವರ ಖಾತೆಗಳಿಂದ ಅಳಿಸಲಾಗಿದೆ ಮತ್ತು ನಂತರ ಮತ್ತೆ ಟ್ವೀಟ್ ಮಾಡಲಾಗಿದೆ. ಟ್ವಿಟ್ಟರ್ ಬೆಂಬಲವು "ಟ್ವಿಟ್ಟರ್‌ನಲ್ಲಿ ಖಾತೆಗಳ ಮೇಲೆ ಪರಿಣಾಮ ಬೀರುವ ಭದ್ರತಾ ಘಟನೆಯ ಬಗ್ಗೆ ನಮಗೆ ತಿಳಿದಿದೆ. ನಾವು ಅದನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಶೀಘ್ರದಲ್ಲೇ ನಾವು ಎಲ್ಲರನ್ನು ನವೀಕರಿಸುತ್ತೇವೆ" ಎಂದು ಘೋಷಿಸಿದರು.

ಬಿಲ್‌ಗೇಟ್ಸ್‌ ಖಾತೆಯಿಂದಲೂ ನಕಲಿ ಟ್ವೀಟ್

ಬಿಲ್‌ಗೇಟ್ಸ್‌ ಖಾತೆಯಿಂದಲೂ ನಕಲಿ ಟ್ವೀಟ್

ಹೌದು, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್‌ಗೇಟ್ಸ್‌ ಖಾತೆಯಿಂದಲೂ ನಕಲಿ ಟ್ವೀಟ್ ಹೋಗಿದೆ. ಆ ನಕಲಿ ಟ್ವೀಟ್ ಹೀಗಿದೆ: ''ಪ್ರತಿಯೊಬ್ಬರೂ ನನ್ನನ್ನು ಹಿಂತಿರುಗಿಸಲು ಕೇಳುತ್ತಿದ್ದಾರೆ, ಮತ್ತು ಈಗ ಸಮಯ. ನನ್ನ ಬಿಟಿಸಿ ವಿಳಾಸಕ್ಕೆ ಮುಂದಿನ 30 ನಿಮಿಷಗಳವರೆಗೆ ಕಳುಹಿಸಿದ ಎಲ್ಲಾ ಪಾವತಿಗಳನ್ನು ನಾನು ದ್ವಿಗುಣಗೊಳಿಸುತ್ತಿದ್ದೇನೆ. ನೀವು $ 1,000 ಕಳುಹಿಸುತ್ತೀರಿ, ನಾನು ನಿಮಗೆ $ 2,000 ವಾಪಸ್ ಕಳುಹಿಸುತ್ತೇನೆ . ಕೇವಲ 30 ನಿಮಿಷಗಳ ಕಾಲ ಈ ಅವಕಾಶ! ಆನಂದಿಸಿ! " ಎಂದು ಜನರಿಂದ ಹಣ ಪಡೆಯಲು ಪ್ರಯತ್ನ ನಡೆದಿದೆ.

ಟೆಸ್ಲಾ ಸಿಇಒ ಎಲೋನ್ ಮಸ್ಕ್ರನ್ನು ಬಿಡಲಿಲ್ಲ ಹ್ಯಾಕರ್ಸ್

ಟೆಸ್ಲಾ ಸಿಇಒ ಎಲೋನ್ ಮಸ್ಕ್ರನ್ನು ಬಿಡಲಿಲ್ಲ ಹ್ಯಾಕರ್ಸ್

ಮತ್ತೊಂದೆಡೆ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಖಾತೆಯಲ್ಲೂ ನಕಲಿ ಟ್ವೀಟ್ ಮಾಡಲಾಗಿದೆ. ಬಿಲ್‌ಗೇಟ್ಸ್‌ ಖಾತೆಯಲ್ಲಿ ಯಾವ ರೀತಿ ಜನರಿಂದ ಹಣ ಪಡೆಯಲು ಪ್ರಯತ್ನಿಸಲಾಗಿದೆಯೋ ಅದೇ ರೀತಿ ಟ್ವೀಟ್ ಮಾಡಲಾಗಿದೆ. ನೀವು ಒಂದು ಸಾವಿರ ಡಾಲರ್ ಕಳಿಸಿದರೆ ನಿಮಗೆ 2000 ಡಾಲರ್ ವಾಪಸ್ ಕಳುಹಿಸುತ್ತೇನೆ. ಕೇವಲ 30 ನಿಮಿಷ ಅವಕಾಶ ಎಂದು ಹ್ಯಾಕರ್ಸ್ ಟ್ವೀಟ್ ಮಾಡಿ ಕೊನೆಗೆ ಅಳಿಸಿ ಹಾಕಿದ್ದಾರೆ.

ಸೆಲೆಬ್ರೆಟಿಗಳ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದ್ದು ಇದೇ ಮೊದಲೇನಲ್ಲ!

ಸೆಲೆಬ್ರೆಟಿಗಳ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದ್ದು ಇದೇ ಮೊದಲೇನಲ್ಲ!

ಹ್ಯಾಕರ್‌ಗಳು ಟ್ವಿಟರ್‌ನಲ್ಲಿ ಕಿಡಿಗೇಡಿತನವನ್ನು ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವಷ್ಟೇ, ಟ್ವಿಟರ್ ಸಿಇಒ ಜ್ಯಾಕ್ ಡಾರ್ಸಿಯವರ ಖಾತೆಯನ್ನು ಜನಾಂಗೀಯ ಮತ್ತು ಅಶ್ಲೀಲ ಟೀಕೆಗಳನ್ನು ಟ್ವೀಟ್ ಮಾಡಲು ಬಳಸಲಾಗುತ್ತಿತ್ತು.

English summary
Twitter CEO Jack Dorsey shocked after biggest twitter attack and The scam came into light when fake tweets went viral, offering $2,000 for every $1,000 sent to a Bitcoin address through these high-profile accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X