ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಭರತ್ ವಾಟ್ವಾನಿ, ಸೋನಮ್ ವಾಂಗ್ ಚುಕ್ ಗೆ ರಾಮನ್ ಮಾಗ್ಸೆಸೆ ಗೌರವ

|
Google Oneindia Kannada News

ಮನಿಲಾ (ಫಿಲಿಪೈನ್ಸ್), ಜುಲೈ 26: ಏಷ್ಯಾ ಖಂಡದಲ್ಲಿ 'ನೊಬೆಲ್'ಗೆ ಸಮಾನವಾಗಿ ಪರಿಗಣಿಸುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಇಬ್ಬರು ಭಾರತೀಯರು ಆಯ್ಕೆಯಾಗಿದ್ದಾರೆ. ಮಾನಸಿಕ ಸಮಸ್ಯೆಯಿಂದ ರಸ್ತೆ ಬದಿಯಲ್ಲಿ ನರಳುತ್ತಿದ್ದವರಿಗೆ ಚಿಕಿತ್ಸೆ ಕೊಡಿಸಿ, ಅವರು ಮತ್ತೆ ತಮ್ಮ ಕುಟುಂಬವನ್ನು ಸೇರಲು ನೆರವಾದ ಭರತ್ ವಾಟ್ವಾನಿ ಅವರಿಗೆ ಗೌರವ ದೊರೆತಿದೆ.

ಇನ್ನು ಭಾರತದವರೇ ಆದ ಸೋನಮ್ ವಾಂಗ್ ಚುಕ್ ಸಮಾಜದ ಪ್ರಗತಿಗಾಗಿ ಪರಿಸರ, ಸಂಸ್ಕೃತಿ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ರಾಮನ್ ಮ್ಯಾಗ್ಸಸೆ ಘೋಷಿಸಲಾಗಿದೆ. ಗುರುವಾರದಂದು ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಿದ್ದು, ಒಟ್ಟು ಆರು ಮಂದಿ ಪೈಕಿ ಭಾರತದವರು ಇಬ್ಬರಿದ್ದಾರೆ.

ಕಾಂಬೋಡಿಯಾದ ಯುಕ್ ಚಾಂಗ್, ಪೂರ್ವ ತಿಮೋರ್ ನ ಮರಿಯಾ ಡಿ ಲೌರ್ಡೆಸ್ ಮಾರ್ಟಿನ್ ಕ್ರುಜ್, ಫಿಲಿಪೈನ್ಸ್ ನ ಹೊವಾರ್ಡ್ ಡೀ, ವಿಯೆಟ್ನಾಂ ದೇಶದ ವೋ ಥಿ ಹೊಂಗ್ ಯೆನ್ ರೊಮ್ ಗೆ ಈ ಸಾಲಿನ ರಾಮನ್ ಮ್ಯಾಗ್ಸೆಸೆ ಗೌರವ ಸಂದಿದೆ.

Bharat Vatwani, Sonam Wangchuk among Ramon Magsaysay award winners

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಷನ್ ನ ಅಧ್ಯಕ್ಷರಾದ ಕಾರ್ಮೆಂಸಿಟಾ ಅಬೆಲ್ಲಾ ಮಾತನಾಡಿ, ತಮ್ಮ ಸಮಾಜವನ್ನು ಮುನ್ನಡೆಸಿದ, ಭರವಸೆದಾಯಕ, ದೊಡ್ಡಸಮುದಾಯದ ಒಳಿತಾತಿಗಾಗಿ ಕೆಲಸ ಮಾಡಿರುವ ಈ ಬಾರಿಯ ಪ್ರಶಸ್ತಿ ವಿಜೇತರು ನಿಚ್ಚಳವಾಗಿ ಏಷ್ಯಾದ ಹೀರೋಗಳು ಎಂದಿದ್ದಾರೆ.

ಅಂದಹಾಗೆ ಏಷ್ಯಾದ ಅತ್ಯಂತ ಪ್ರತಿಷ್ಠಿತ ಗೌರವವಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು 1957ರಲ್ಲಿ ಆರಂಭವಾಗಿದ್ದು, ಫಿಲಿಪೈನ್ಸ್ ನ ಮೂರನೇ ಅಧ್ಯಕ್ಷರ ಹೆಸರಿನಲ್ಲಿ ಕೊಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿಯು ಪ್ರಶಸ್ತಿ ಪತ್ರ, ದಿವಂಗತ ಅಧ್ಯಕ್ಷರ ಚಿತ್ರವನ್ನು ಒಳಗೊಂಡ ಪದಕ ಮತ್ತು ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ವರ್ಷದ ಆಗಸ್ಟ್ 31ರಂದು ಫಿಲಿಪೈನ್ಸ್ ನಲ್ಲಿ ನಡೆಯಲಿದೆ.

English summary
Two Indians Bharat Vatwani and Sonam Wangchuk are among the winners of this year's Ramon Magsaysay Award, regarded as the Asian version of the Nobel Prize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X