ಕಾರಿನ ಬಾಗಿಲು ತೆಗೆದಾಗ ಮೋದಿ ಪತ್ನಿಯಿಲ್ಲದೆ ಪೆಚ್ಚಾದ ಅಮೆರಿಕಾ ಸಿಬ್ಬಂದಿ

ವಾಷಿಂಗ್ಟನ್, ಜೂನ್ 27: ಪ್ರಧಾನಿ ನರೇಂದ್ರ ಮೋದಿಗೆ ಮದುವೆಯಾಗಿದ್ದರೂ ಪತ್ನಿ ಜತೆಗಿಲ್ಲ ಅಂತ ನಮಗೆ ಗೊತ್ತು. ಆದರೆ ಅಮೆರಿಕನ್ನರಿಗೆ ಗೊತ್ತಾ? ಇಲ್ಲ. ಇದೇ ಕಾರಣಕ್ಕೆ ಇವತ್ತು ವೈಟ್ ಹೌಸ್ ಸಿಬ್ಬಂದಿಯೊಬ್ಬರು ಪೇಚಿಗೆ ಸಿಲುಕಿದ ಘಟನೆ ನಡೆಯಿತು.

ಸಾಮಾನ್ಯವಾಗಿ ವಿದೇಶ ಪ್ರವಾಸಗಳಿಗೆ ಬಂದಾಗ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ತಮ್ಮ ಪತ್ನಿಯರೊಂದಿಗೆ ಆಗಮಿಸುವುದು ವಾಡಿಕೆ. ಅದೇ ರೀತಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದ ಮೋದಿ ಕಾರು ವೈಟ್ ಹೌಸ್ ಮುಂಭಾಗ ತಲುಪುತ್ತಿದ್ದಂತೆ ಮೆಲೇನಿಯಾ ಟ್ರಂಪ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿಗಾಗಿ ಕಾದು ನಿಂತಿದ್ದರು.

Bhabhi ji nahi aayi? US guard opening left door of the car expecting Mrs Modi is making waves

ಪ್ರಧಾನಿ ಮೋದಿ ಕಾರು ಬಂದು ವೈಟ್ ಹೌಸ್ ಬಾಗಿಲ ಮುಂಭಾಗ ನಿಂತಿತು. ಎರಡೂ ಕಡೆಯಿಂದ ಸಿಬ್ಬಂದಿಗಳು ಸೆಲ್ಯೂಟ್ ಮಾಡಿ ಕಾರಿನ ಬಾಗಿಲು ತೆರೆದರು. ಬಲಭಾಗದಿಂದ ಪ್ರಧಾನಿ ನರೇಂದ್ರ ಮೋದಿ ಹೊರ ಬಂದರು. ಎಡಗಡೆಯಿಂದ ಇನ್ನೊಬ್ಬರು ಸಿಬ್ಬಂದಿ ಅವರ ಪತ್ನಿಗಾಗಿ ಬಾಗಿಲು ತೆಗೆದರು. ಆದರೆ ಪತ್ನಿ ಬರಲಿಲ್ಲ. ಪೆಚ್ಚಾದ ಸಿಬ್ಬಂದಿ ಮತ್ತೆ ಬಾಗಿಲು ಹಾಕಿ ಸುಮ್ಮನಾದರು.

ಸಾಮಾನ್ಯವಾಗಿ ವಿದೇಶಗಳಿಗೆ ಹೋದಾಗ ಪ್ರಧಾನಿಗಳು ಬಲಬಾಗದಲ್ಲಿ ಕುಳಿತಿರುತ್ತಾರೆ. ಅವರ ಪಕ್ಕ ಎಡ ಭಾಗದಲ್ಲಿ ಪತ್ನಿ ಕುಳಿತಿರುತ್ತಾರೆ. ಹೀಗಾಗಿ ಅದೇ ಅಂದಾಜಿನ ಮೇಲೆ ಸಿಬ್ಬಂದಿ ಮೋದಿ ಪತ್ನಿಗಾಗಿ ಬಾಗಿಲು ತೆಗೆದು ಮುಚ್ಚಬೇಕಾಯಿತು.

ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನರು ಇದರ ಸುತ್ತ ಚಿತ್ರ ವಿಚಿತ್ರ ಹಾಸ್ಯಗಳನ್ನು ಸೃಷ್ಟಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+