ಖಾಲಿ ಜೇಬಿನಲ್ಲಿ ಹುಟ್ಟಿದ ಗೂಗಲ್ ಸಿಇಒ ಸುಂದರ್ ಪಿಚೈ ಪ್ರೇಮ ಕಥೆ

Subscribe to Oneindia Kannada

ಬೆಂಗಳೂರು, ಜೂನ್ 15: ಅವರಿಬ್ಬರ ಪ್ರೀತಿ ಹುಟ್ಟಿಕೊಂಡಿದ್ದು ಕಾಲೇಜು ದಿನಗಳಲ್ಲಿ. ಆಕೆ ಹೆಸರು ಅಂಜಲಿ; ಆತನ ಹೆಸರು ಸುಂದರ್ ಪಿಚೈ; ಸದ್ಯ ಗೂಗಲ್ ಸಂಸ್ಥೆಯ ಸಿಇಒ. ಅವರ ಪ್ರತಿ ದಿನದ ಸಂಬಳವೇ 3.5 ಕೋಟಿ.

ಆದರೆ ಅಂಜಲಿ ಪ್ರೇಮದ ಬಲೆಯಲ್ಲಿ ಬಿದ್ದಾಗ ಪಿಚೈ ಜೇಬಿನಲ್ಲಿ ಏನೂ ಇರಲಿಲ್ಲ; ಖಾಲಿ ಜೇಬು. ಅವತ್ತಿಗೆ ಚೆನ್ನೈ ಅಪಾರ್ಟ್ಮೆಂಟ್ ಒಂದರಲ್ಲಿ ಪಿಚೈ ವಾಸವಾಗಿದ್ದರು. ಕಾರಿರಲಿಲ್ಲ, ಮನೆಯಲ್ಲೊಂದು ಟಿವಿಯೂ ಇರಲಿಲ್ಲ.

ಗೂಗಲ್‌ ಸಿಇಒ ಸುಂದರ್‌ ಪಿಚೈ 2016ರ ವಾರ್ಷಿಕ ವೇತನ ಎಷ್ಟು ಗೊತ್ತೆ?

 Sundar Pichai and Anjali Pichai

ಅಲ್ಲಿಂದ ಐಐಟಿ ಖರಗ್ ಪುರದಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡಲು ಇಬ್ಬರೂ ತೆರಳಿದರು. ಅಲ್ಲಿ ಡೇಟಿಂಗ್ ಆರಂಭಿಸಿದರು. ಜೇಬಿನಲ್ಲಿ ಕಾಸಿಲ್ಲದಿದ್ದರೇನಂತೆ ಹೃದಯ ಶ್ರೀಮಂತವಾಗಿತ್ತು. ಪಿಚೈ ಅಂಜಲಿ ಮುಂದೆ ಮದುವೆ ಪ್ರಸ್ತಾಪ ಇಟ್ಟರು. ಅಂಜಲಿಯೂ ಅಷ್ಟೆ ಅತ್ತಿತ್ತ ನೋಡದೆ ಮದುವೆಗೆ ಒಪ್ಪಿಗೆ ನೀಡಿಯೇ ಬಟ್ಟರು. ಅಂಜಲಿಗೆ ಪಿಚೈ ಬಡತನದ ಬಗ್ಗೆ ಗೊತ್ತಿರಲಿಲ್ಲವೆಂದಲ್ಲ. ಸುಂದರ್ ಮನೆಯ ಎಲ್ಲಾ ಪರಿಸ್ಥಿತಿಯೂ ಅಂಜಲಿಗೆ ಗೊತ್ತಿತ್ತು. ಹೀಗಿದ್ದೂ ಮದುವೆಗೆ ಒಪ್ಪಿಕೊಂಡರು.

ಬಾಲಕಿಗೆ ಗೂಗಲ್ ಸಿಇಒ ಪಿಚ್ಚೈ ಬರೆದ 'ಸುಂದರ' ಪತ್ರ

ಮುಂದೆ ಸುಂದರ್ ಪಿಚೈ ಸ್ನಾತಕೋತ್ತರ ವ್ಯಾಸಾಂಗಕ್ಕೆ ಅಮೆರಿಕಾಗೆ ಹಾರಿದರು. ಆದರೆ ಅಂಜಲಿ ಮಾತ್ರ ಭಾರತದಲ್ಲೇ ಉಳಿದುಕೊಂಡರು. ಅಮೆರಿಕಾದಿಂದ ಮರಳಿದರೂ ಫೋನ್ ಕೊಳ್ಳುವಷ್ಟೂ ಹಣ ಪಿಚೈ ಬಳಿ ಉಳಿದಿರಲಿಲ್ಲ. ಅದೇ ಕಾರಣಕ್ಕೆ ಇಬ್ಬರ ನಡುವೆ ಹುಸಿ ಮುನಿಸು. ಆರು ತಿಂಗಳು ಒಬ್ಬರಿಗೊಬ್ಬರು ಮಾತೂ ಆಡಲಿಲ್ಲ.

ಮುಂದೆ ಸುಂದರ್ ಪಿಚ್ಚೈ ಗೂಗಲ್ ನಲ್ಲಿ ಕೆಲಸ ಸಿಕ್ಕಿತು. ಅಂಜಲಿಯೂ ಅಮೆರಿಕಾಗೆ ಶಿಫ್ಟ್ ಆದರು. ಒಂದಷ್ಟು ಹಣ ಕೈ ಸೇರುತ್ತಿದ್ದಂತೆ ಸುಂದರ್ ಪಿಚೈ ಮದುವೆಯಾಗಲು ನಿರ್ಧರಿಸಿದರು. ಹೀಗೆ ಅಂಜಲಿ ಮತ್ತು ಪಿಚೈ ಮದುವೆಯಾಯಿತು.

ಖರಗ್ಪುರ ಐಐಟಿಯಲ್ಲಿ ಗೂಗಲ್ ಮುಖ್ಯಸ್ಥರ 'ಸುಂದರ' ಫ್ಲಾಷ್ ಬ್ಯಾಕ್

ಆದರೆ ಇಂಟರೆಸ್ಟಿಂಗ್ ಪಾಯಿಂಟ್ ಇರುವುದು ಇಲ್ಲಿ. ಮದುವೆಯಾದ ನಂತರ ಇಬ್ಬರೂ ಒಟ್ಟಿಗೆ ಬಾಳಲು ಆರಂಭಿಸಿದರು. ಆಗ ಪಿಚೈಗೆ ಮೈಕ್ರೋಸಾಫ್ಟ್, ಯಾಹೂ ಮತ್ತು ಟ್ವಿಟ್ಟರಿನಿಂದ ಆಫರ್ ಗಳು ಬಂದಿದ್ದವು. ಆದರೆ ಅಂಜಲಿ ಮಾತ್ರ ಅದ್ಯಾವುದೂ ಬೇಡ ಗೂಗಲ್ ನಲ್ಲೇ ಮುಂದುವರಿಯಿರಿ ಎಂದು ಪಿಚೈಗೆ ಪ್ರೀತಿಯಲ್ಲಿ ತಾಕೀತು ಮಾಡಿದರು.

ಪರಿಣಾಮ ನಾನಿವತ್ತು ಗೂಗಲ್ ಸಿಇಒ ಆಗಿದ್ದೇನೆ ಎಂದು ಅವತ್ತಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಸುಂದರ್ ಪಿಚೈ.ಇದಕ್ಕೆ ಅಲ್ವಾ ಹೇಳುವುದು ಪ್ರತಿ ಯಶಸ್ವೀ ಪುರುಷನ ಹಿಂದೆಯೂ ಆದರ್ಶ ಪತ್ನಿ ಇರುತ್ತಾಳೆ ಅಂತ.

ಮದುವೆಯಾಗುವಾಗ ಹಣವಿಲ್ಲದಿದ್ದರೇನಂತೆ ಇವತ್ತು ದಂಪತಿಗಳು ಅಮೆರಿಕಾದ ಭವ್ಯ ಬಂಗಲೆಯಲ್ಲಿ ವಾಸವಾಗಿದ್ದಾರೆ. ಕಾವ್ಯ ಮತ್ತು ಕಿರಣ್ ಎಂಬ ಇಬ್ಬರು ಮಕ್ಕಳೂ ಇದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is the Beautiful love story of Google CEO Sundar Pichai and Anjali Pichai. He had nothing when they started dating, today he makes over 3.5 crore per day as Google CEO.
Please Wait while comments are loading...