ಬಿಬಿಸಿ ಲೈವ್ ಸುದ್ದಿ ಪ್ರಸಾರದ ವೇಳೆ ಇಣುಕಿದ 'ಕಾಮದಾಟ'

By: ನ್ಯೂಸ್ ಡೆಸ್ಕ್
Subscribe to Oneindia Kannada

ಲಂಡನ್, ಆಗಸ್ಟ್ 10: ಬಿಬಿಸಿ ಸುದ್ದಿ ವಾಹಿನಿಯ ರಾತ್ರಿ ವೇಳೆಯ ಸುದ್ದಿ ಪ್ರಸಾರದ ವೇಳೆ ಭಾರಿ ಪ್ರಮಾದವೊಂದು ಜರುಗಿದೆ. ನಿರೂಪಕಿ ಸುದ್ದಿ ಓದ್ತಾ ಇದ್ರೆ, ಆಕೆಯ ಹಿಂದಿದ್ದ ಕಂಪ್ಯೂಟರ್ ಸ್ಕ್ರೀನ್ ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ.

ನೇರ ಪ್ರಸಾರದ ವೇಳೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೀಕ್ಷಕರೊಬ್ಬರು ಇಡೀ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ ಮೇಲೆ ಬಿಬಿಸಿಗೆ ಗೊತ್ತಾಗಿದೆ.

BBC News at 10 accidentally live broadcast obscene clipping

ಬಿಬಿಸಿ ಕಚೇರಿಯಲ್ಲಿದ್ದ ವ್ಯಕ್ತಿಯೊಬ್ಬ ಹೆಡ್ ಫೋನ್ ಹಾಕಿಕೊಂಡು ಅಶ್ಲೀಲ ವಿಡಿಯೋ ನೋಡುತ್ತಿದ್ದ, ಆ ರೀತಿಯದೃಶ್ಯ ಬಂದಾಗ ಅಕಸ್ಮಾತ್ ಆಗಿ ನೇರ ಪ್ರಸಾರದ ತೆರೆಯ ಮೇಲೆ ಬಂದಿದೆ. ಇದು ನಿರೂಪಕಿ ಸೋಫಿಯವರಿಗೆ ಗೊತ್ತಾಗಿಲ್ಲ. ಸನ್ನೆ ಮೂಲಕ ಆತನಿಗೆ ಸೂಚನೆ ನೀಡಿದರೂ ತಕ್ಷಣಕ್ಕೆ ಗೊತ್ತಾಗುವಂತಿರಲಿಲ್ಲ ಎಂದು ಬ್ರಿಟಿಷ್ ಮಾಧ್ಯಮಗಳು ಹೇಳಿವೆ.

Proof Rattlesnakes Don't Want To Bite Unless Provoked Nick TheWrangler

ಬಿಬಿಸಿಯಂಥ ವಾಹಿನಿಯಲ್ಲಿ ಇಂಥ ಘಟನೆ ನಡೆದಿರುವುದು ದುರದೃಷ್ಟಕರ ಅಂತಾ ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಬಿಬಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದೆ. ಆದರೆ, ಸರಿ ಸುಮಾರು 3.8 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBC News at 10 accidentally live broadcast obscene clipping. X-rated scene played on a computer screen behind Sophie Raworh and 3.8 million people around Britain viewed.
Please Wait while comments are loading...