ಕೆಲಸದ ಕೊನೆ ದಿನ ಸ್ಪೈಡರ್ ಮ್ಯಾನ್ ದಿರಿಸಿನಲ್ಲಿ ಬಂದು ಸುದ್ದಿಯಾದ ಬ್ಯಾಂಕರ್

ಕೆಲಸ ಮಾಡುತ್ತಿರುವ ಜಾಗದಲ್ಲಿ ಇದೇ ಕೊನೆ ದಿನ ಅಂತ ನಿಗದಿ ಆದ ಮೇಲೆ ಅದನ್ನು ಸ್ಮರಣೀಯ ಮಾಡಿಕೊಳ್ಳಬೇಕು ಅಂತ ಹಲವರು ಅಂದುಕೊಳ್ಳಬಹುದು. ಬರೀ ಕೆಲಸ ತೊರೆದು ಹೋಗುವವರಿಗೆ ಮಾತ್ರವಲ್ಲ, ಸಹೋದ್ಯೋಗಿಗಳಿಗೂ ಇಂಟರ್ ನೆಟ್ ನಲ್ಲೂ ಸುದ್ದಿ ಆಗಿರುವ ವಿಶಿಷ್ಟ ಘಟನೆ ಇಲ್ಲಿದೆ.

ಬ್ರೆಜಿಲ್ ದೇಶದ ಸಾವೊ ಪಾಲೋದ ಬ್ಯಾಂಕರ್ ಇದೀಗ ಸುದ್ದಿಯಲ್ಲಿದ್ದಾರೆ. ತಮ್ಮ ಉದ್ಯೋಗದ ಕೊನೆಯ ದಿನದಂದು ಸ್ಪೈಡರ್ ಮ್ಯಾನ್ ದಿರಿಸು ಧರಿಸಿ ಬಂದ ಈ ಬ್ಯಾಂಕರ್ ಬಗ್ಗೆಯೇ ಈಗ ಇಂಟರ್ ನೆಟ್ ನಲ್ಲಿ ಚರ್ಚೆ. ಕಚೇರಿ ಸುತ್ತ ಓಡಾಡುತ್ತಾ ತನ್ನ ಸಹೋದ್ಯೋಗಿಗಳ ಜತೆ ಈ ವ್ಯಕ್ತಿ ಮಾತುಕತೆ ನಡೆಸುತ್ತಿರುವ ದೃಶ್ಯಾವಳಿಗಳ ವಿಡಿಯೋ ಮಜಾ ನೀಡುತ್ತಿದೆ.

ಫೋಟೋಗಳು, ವಿಡಿಯೋ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಆ ವ್ಯಕ್ತಿಯ ಹೆಸರು ಗೊತ್ತಾಗಿಲ್ಲ. ಆದರೆ ತನ್ನ ಕಂಪ್ಯೂಟರ್ ಮುಂದೆ ಕೂತಿದ್ದಾರೆ. ಸ್ಪೈಡರ್ ಮ್ಯಾನ್ ನಂತೆ ವೇಷ ಧರಿಸಿ ಕಚೇರಿಯಲ್ಲಿನ ಇತರ ಉದ್ಯೋಗಿಗಳ ಜತೆಗೆ ಮಾತುಕತೆ ನಡೆಸಿರುವುದು ಕಂಡುಬಂದಿದೆ.

Banker dresses up as Spider-Man on the last day of work

ಸ್ಪೈಡರ್ ಮ್ಯಾನ್ ವೇಷ ಧರಿಸಿ ಬರುವ ಮೂಲಕ ಈ ವ್ಯಕ್ತಿ ಮಾತ್ರ ಖುಷಿ ಪಟ್ಟಿರುವುದಲ್ಲ. ಜತೆಗೆ ತನ್ನ ಸುತ್ತಲಿನವರಿಗೆ ಮನರಂಜನೆ ನೀಡಿದ್ದಾರೆ. ಅಂದ ಹಾಗೆ ಬ್ಯಾಂಕರ್ ಆಗಿ ಉದ್ಯೋಗ ಮಾಡುತ್ತಿದ್ದ ಈ ವ್ಯಕ್ತಿಗೆ ವೆಬ್ ಡಿಸೈನರ್ ಆಗಿ ಕೆಲಸ ಸಿಕ್ಕಿದೆ ಎಂಬುದು ಸದ್ಯಕ್ಕೆ ಬಂದ ಸುದ್ದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+