ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

152 ಬಂಡಾಯ ಯೋಧರಿಗೆ ಗಲ್ಲು ಶಿಕ್ಷೆ ಪ್ರಕಟ

By Mahesh
|
Google Oneindia Kannada News

ಢಾಕಾ, ನ.6: ಇಲ್ಲಿನ ನ್ಯಾಯಾಲಯವೊಂದು 2009ರಲ್ಲಿ ನಡೆದ ಸೇನಾ ಬಂಡಾಯ ಹಾಗೂ ನರಮೇಧದ ಸಂಬಂಧ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಸುಮಾರು 152 ಯೋಧರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಇಡೀ ವಿಶ್ವದಲ್ಲಿ ಇಷ್ಟೊಂದು ಮಂದಿಗೆ ಸಾಮೂಹಿಕ ಮರಣದಂಡನೆ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.ಗಲ್ಲು ಶಿಕ್ಷೆಗೊಳಗಾಗಿರುವವರ ಪೈಕಿ ಬಾಂಗ್ಲಾದೇಶ್ ರೈಫಲ್ಸ್ ಮಿಲಿಟರಿ ವಿಭಾಗದ ಮಾಜಿ ಸಹಾಯಕ ನಿರ್ದೇಶಕರಾಗಿದ್ದ ತೌಹಿದ್ ಅಹಮದ್ ಕೂಡ ಸೇರಿದಂತೆ 74 ಮಂದಿ ಹಿರಿಯ ಸೇನಾ ಅಧಿಕಾರಿಗಳಿದ್ದಾರೆ.

ಪ್ರಕರಣ ಸಂಬಂಧ ಒಟ್ಟು 820 ಯೋಧರು, 26 ನಾಗರಿಕರನ್ನು ವಿಚಾರಣೆಗೊಳಪಡಿಸಿರುವ ಬಾಂಗ್ಲಾದ ಮೆಟ್ರೋಪಾಲಿಟನ್ ವಿಭಾಗೀಯ ನ್ಯಾಯಾಲಯವು ದೊಡ್ಡ ಪ್ರಮಾಣದಲ್ಲಿ ಮರಣದಂಡನೆ ವಿಧಿಸಿದೆ. ಅಲ್ಲದೇ ಇತರೆ 158 ಮಂದಿಗೆ ಜೀವಾವಧಿ, 251 ಮಂದಿಗೆ 3 ರಿಂದ 10 ವರ್ಷ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಪ್ರಕರಣದ 270 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

Bangladesh sentences 152 soldiers to death for mutiny crimes

ಈ ತೀರ್ಪು ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಮುತ್ತಲೂ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಮೀಪವೇ ಇದ್ದ ಕೇಂದ್ರ ಕಾರಾಗೃಹದಿಂದ ಕೈದಿಗಳನ್ನು ವ್ಯಾನ್‌ಗಳ ಮೂಲಕ ಕರೆತರಲಾಯಿತು.

ಪ್ರಕರಣದ ಬರ್ಬರತೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಅಖ್ತರ್ ಉಜ್ಜಮನ್, ''ದೋಷಿಗಳು ಎಸಗಿರುವ ತಪ್ಪಿಗಾಗಿ ಅವರನ್ನು ಸಾಯುವ ವರೆಗೂ ಗಲ್ಲಿನಿಂದ ಕೆಳಗಿಳಿಸಕೂಡದು. ಅವರ ಮೃತ ದೇಹಗಳನ್ನು ಸಂಬಂಧಿಸಿದವರಿಗೆ ಕೊಡಬಾರದು,'' ಎಂದಿದ್ದಾರೆ.

ಮೇಜರ್ ಜನರಲ್ ಅಜೀಜ್ ಅಹಮದ್ ತೀರ್ಪಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ''ಮಹತ್ವದ ತೀರ್ಪಿನಿಂದಾಗಿ ಮೃತರ ಕುಟುಂಬಕ್ಕೆ ಸಮಾಧಾನ ಸಿಗಲಿದೆ,'' ಎಂದು ಅಜೀಜ್ ತಿಳಿಸಿದ್ದಾರೆ.

ಸಂಬಳ ಮತ್ತಿತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ 2009ರ ಫೆಬ್ರವರಿಯಲ್ಲಿ ಅಧಿಕಾರಿಗಳ ವಿರುದ್ಧ ಬಂಡಾಯವೆದ್ದಿದ್ದ ಯೋಧರು, 74 ಅಧಿಕಾರಿಗಳನ್ನು ಸಜೀವ ದಹನ ಮಾಡಿದ್ದರು.

English summary
A special court in Bangaladesh on Tuesday sentenced to death 152 soldiers from among hundreds of mutineers in the group.They are accused of murder and arson at the headquarters of the country's border guards in 2009. More than 150 others, mostly border guards, were given life sentences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X