ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಲಸಿಕೆಗಾಗಿ ಭಾರತದಲ್ಲಿ ಬಾಂಗ್ಲಾದೇಶದ ಹೂಡಿಕೆ

|
Google Oneindia Kannada News

ನವದೆಹಲಿ, ಆಗಸ್ಟ್.31: ವಿಶ್ವದಾದ್ಯಂತ ಆರೋಗ್ಯ ತಜ್ಞರು ಕೊರೊನಾವೈರಸ್ ಸೋಂಕಿಗೆ ಲಸಿಕೆ ಸಂಶೋಧಿಸುವಲ್ಲಿ ನಿರತರಾಗಿದ್ದಾರೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಹೂಡಿಕೆ ಮಾಡುವುದಾಗಿ ಬಾಂಗ್ಲಾದೇಶದ ಬೆಕ್ಸಿಂಕೋ ಘೋಷಿಸಿದೆ ಎಂದು ರಾಯಟರ್ಸ್ ವರದಿ ಮಾಡಿದೆ.

Recommended Video

ಇಡೀ ಪ್ರಪಂಚದಲ್ಲೇ ಇಷ್ಟು ಪ್ರಕರಣಗಳು ಯಾವ ದೇಶದಲ್ಲೂ ಪತ್ತೆಯಾಗಿಲ್ಲ | Oneindia Kannada

ಈಗ ಮಾಡಿರುವ ಹೂಡಿಕೆಯನ್ನು ಮುಂಗಡ ಹಣ ಎಂದು ಪರಿಗಣಿಸಬೇಕು. ಕೊವಿಡ್-19 ಲಸಿಕೆ ಅನುಮೋದನೆ ನಂತರ ಬಾಂಗ್ಲಾದೇಶ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ಲಸಿಕೆಯನ್ನು ಪ್ರಾಧಾನ್ಯತೆ ಮೇರೆಗೆ ನೀಡಲಾಗುತ್ತದೆ ಎಂದು ಬೆಕ್ಸಿಂಕೋ ತಿಳಿಸಿದೆ.

ಭಾರತೀಯ ಲಸಿಕೆ ಬಳಸಿಕೊಂಡು ಪ್ರಯೋಗಕ್ಕೆ ಬಾಂಗ್ಲಾದೇಶ ಸಿದ್ಧ!ಭಾರತೀಯ ಲಸಿಕೆ ಬಳಸಿಕೊಂಡು ಪ್ರಯೋಗಕ್ಕೆ ಬಾಂಗ್ಲಾದೇಶ ಸಿದ್ಧ!

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಬಾಂಗ್ಲಾದೇಶದ ಬೆಕ್ಸಿಂಕೋ ಹೂಡಿಕೆ ಮಾಡಿರುವ ಹಣದ ಮೊತ್ತವೆಷ್ಟು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಪರಸ್ಪರ ಉಭಯ ರಾಷ್ಟ್ರಗಳು ಕೈಜೋಡಿಸುವುದಾಗಿ ತಿಳಿಸಿವೆ.

Bangladesh’s Beximco Signs New Coronavirus Vaccine Deal With India

ಬಾಂಗ್ಲಾದೇಶ ಆರೋಗ್ಯ ಸಚಿವ ಜಾಹೀದ್ ಮಲ್ಲಿಕ್ ಚೀನಾದ ಸಿನೋವಾಕ್ ಬಯೋಟೆಕ್ ಲಿಮಿಟೆಡ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಪ್ರಾಯೋಗಿಕವುಾಗಿ ಬಳಸಲು ಅನುಮತಿ ನೀಡುವುದಾಗಿ ಘೋಷಿಸಿದ್ದರು. ಭಾರತದ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆಯನ್ನೂ ಪ್ರಾಯೋಗಿಕವಾಗಿ ಬಳಸಲು ಅನುಮತಿ ನೀಡುವ ಬಗ್ಗೆ ಇದೀಗ ಒಪ್ಪಂದವಾಗಿದೆ.

ಬಾಂಗ್ಲಾದೇಶದ ಬೆಕ್ಸಿಂಕೋ, ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಅಸ್ಟ್ರಾ ಜೆನಿಕಾ ಜೊತೆಗೆ ಗೇಟ್ಸ್ ಫೌಂಡೇಶನ್ ಮತ್ತು ಗವಿ ಲಸಿಕೆ ಒಕ್ಕೂಟವು ಒಂದು ಬಿಲಿಯನ್ ಡೆಜನ್ ಕೊವಿಡ್ ಲಸಿಕೆ ಉತ್ಪಾದಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 36 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲೇ 78512 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸೋಮವಾರ ಬೆಳಗ್ಗೆ 10 ಗಂಟೆವರೆಗೂ ಕೊರೊನಾವೈರಸ್ ಸೋಂಕಿಗೆ 971 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 64469ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 3621246ಕ್ಕೆ ಏರಿಕೆಯಾಗಿದೆ. ಈ ಪೈಕಿ 2774802 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 7,81,975 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಬಾಂಗ್ಲಾದೇಶದಲ್ಲಿ 2131 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 308925ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಸಂಖ್ಯೆಯು 4206ಕ್ಕೆ ಏರಿಕೆಯಾಗಿದೆ.

English summary
Bangladesh’s Beximco Signs New Coronavirus Vaccine Deal With India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X