ಬಾಂಗ್ಲಾದಲ್ಲಿ ಕಟ್ಟಡಕ್ಕೆ ಬೆಂಕಿ: 70 ಮಂದಿ ದುರ್ಮರಣ
ಢಾಕಾ, ಫೆಬ್ರವರಿ 21: ಬಾಂಗ್ಲಾದೇಶದ ಢಾಕಾದಲ್ಲಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು 70 ಜನ ಮೃತರದಾದ ದಾರುಣ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಈ ಕಟ್ಟದದ ಒಂದು ಭಾಗವನ್ನು ರಾಸಾಯನಿಕಗಳನ್ನು ಶೇಖರಿಸುವ ಗೋದಾಮಿನಂತೆ ಬಳಸಲಾಗುತ್ತಿತ್ತು. ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ರಾಸಾಯನಿಕವಿದ್ದ ಗೋದಾಮಿಗೆ ವ್ಯಾಪಿಸಿದ್ದರಿಂದ ಈ ಭಾರೀ ಅನಾಹುತ ಸಂಭವಿಸಿದೆ ಎನ್ನಲಾಗಿದೆ.
ಕಟ್ಟಡದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಮೃತರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಬಹುದು ಎನ್ನಲಾಗಿದೆ.

ರಸ್ತೆ ಬದಿಯಲ್ಲಿಯೇ ಕಟ್ಟಡವಿದ್ದಿದ್ದರಿಂಡ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಸಮಯದಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಇತ್ತು. ಆದ್ದರಿಂದ ಹಲವರಿಗೆ ಇಲ್ಲಿಂದ ಪರಾರಿಯಾಗಲು ಕಷ್ಟವಾಯಿತು. ಬೆಂಕಿಯೊಂದಿಗೆ ರಾಸಾಯನಿಕಗಳೂ ಸುಟ್ಟಿದ್ದರಿಂದ ಭಾರೀ ಅನಾಹುತಕ್ಕೆ ಕಾರಣವಾಯಿತು ಎಂದು ವರದಿಗಳು ತಿಳಿಸಿವೆ.
ಇತ್ತೀಚೆಗಷ್ಟೇ ಭಾರತದ ರಾಜಧಾನಿ ದೆಹಲಿಯ ಕರೋಲ್ ಬಾಘ್ ನಲ್ಲಿರುವ ಅರ್ಪಿತ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 15 ಮಂದಿ ಸಜೀವ ದಹನವಾಗಿದ್ದರು.












Click it and Unblock the Notifications