ಬಾಂಗ್ಲಾದೇಶ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ, ಭಾರತದ ಸ್ಪೀಕರ್ ಭಾಗಿ | Bangladesh Election
ಭಾರತದ ನೆರೆಯ ದೇಶ ಹಾಗೂ ಭಾರತವೇ ಮುಂದೆ ನಿಂತು ಪಾಕಿಸ್ತಾನಕ್ಕೆ ಸರಿಯಾಗಿ ಪೆಟ್ಟು ಕೊಟ್ಟು ಸ್ವಾತಂತ್ರ್ಯ ಕೊಡಿಸಿದ ದೇಶ ಬಾಂಗ್ಲಾದೇಶಕ್ಕೆ ಇಂದು ಹೊಸ ಪ್ರಧಾನಿಯ ಆಗಮನ ಆಗಿದೆ. ಕಳೆದ ಕೆಲ ವರ್ಷಗಳಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ದೊಡ್ಡ ಕಿಚ್ಚು ಹೊತ್ತಿಕೊಂಡು, ಸಂಬಂಧವೇ ಹಾಳಾಗಿ ಹೋಗಿತ್ತು. ಅದರಲ್ಲೂ ಇನ್ನೇನು ಬಾಂಗ್ಲಾ ಹಂಗಾಮಿ ಸರ್ಕಾರ ಭಾರತವನ್ನ ದೂರ ಮಾಡಿ ಬಿಡುತ್ತದೆ ಎಂಬ ಆತಂಕದ ವಾತಾವರಣ ಆವರಿಸಿತ್ತು. ಹೀಗಿದ್ದಾಗ ದಿಢೀರ್ ಎಲ್ಲವೂ ಬದಲಾಗಿದ್ದು, ಬಾಂಗ್ಲಾದೇಶಕ್ಕೆ ಇಂದು ಹೊಸ ಪ್ರಧಾನಿ ಎಂಟ್ರಿ ಕೊಟ್ಟಿದ್ದಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಭಾರತದ ಜೊತೆಗೆ ಬಾಂಗ್ಲಾ ಹೊಸ ಪ್ರಧಾನಿಗೆ ಉತ್ತಮ ಸ್ನೇಹ ಸಂಬಂಧ ಇದೆ.
ಬಾಂಗ್ಲಾದೇಶ ಚುನಾವಣೆ ತುಂಬಾ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿತ್ತು. ಅದರಲ್ಲೂ ಪಾಪಿಗಳ ಸ್ವರ್ಗವಾಗಿರುವ ಉಗ್ರ ಪೋಷಕ ಪಾಕಿಸ್ತಾನ ಮತ್ತು ಅಭಿವೃದ್ಧಿಯಲ್ಲಿ ಮುಂದೆ ನುಗ್ಗುತ್ತಿರುವ ಭಾರತದ ನಡುವೆ ಈ ವಿಚಾರದಲ್ಲಿ ಪರೋಕ್ಷ ತಿಕ್ಕಾಟ ಶುರುವಾಗಿತ್ತು. ಒಂದು ಕಡೆ ಪಾಕಿಸ್ತಾನ ತಾನು ಬೆಂಬಲ ನೀಡಿದ್ದ ಜಮಾತ್-ಎ-ಇಸ್ಲಾಮಿ ಪಕ್ಷವೇ ಗೆಲ್ಲಲಿದೆ ಎಂಬ ನಿರೀಕ್ಷೆಯಲ್ಲಿ ಇತ್ತು, ಆದರೆ ಮತ್ತೊಂದು ಕಡೆ ಭಾರತದ ಪರ ಒಲವು ಹೊಂದಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ ಭರ್ಜರಿ ಬಹುಮತ ಸಿಕ್ಕಿದೆ. ಆ ಮೂಲಕ ಪಾಕಿಸ್ತಾನ ಇದೀಗ ಸೋತು ಸುಣ್ಣವಾಗಿದ್ದು, ಭಾರತದ ಜೊತೆಗೆ ಸ್ನೇಹವನ್ನೇ ಬಯಸುತ್ತಿರುವ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಸುಮಾರು 1,200 ಅತಿಥಿಗಳ ಉಪಸ್ಥಿತಿ
ಬಾಂಗ್ಲಾದೇಶ ಚುನಾವಣೆ ಫಲಿತಾಂಶ ಬಂದ ದಿನವೇ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖ್ಯಸ್ಥ ತಾರಿಕ್ ರೆಹಮಾನ್ ಮುಂದಿನ ಪ್ರಧಾನಿ ಎನ್ನುವ ವಿಚಾರವು ಇಡೀ ಜಗತ್ತಿಗೇ ಗೊತ್ತಾಗಿತ್ತು. ಅದೇ ರೀತಿಯಾಗಿ ಈಗ ತಾರಿಕ್ ರೆಹಮಾನ್ ಪ್ರಮಾಣ ವಚನ ಸ್ವೀಕರಿಸಿದ್ದು ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ತಾರಿಕ್ ರೆಹಮಾನ್ ತಮ್ಮ ಪಕ್ಷದ ಇತರ ಪ್ರತಿನಿಧಿಗಳ ಜೊತೆಗೆ ಈಗ ಢಾಕಾದ ರಾಷ್ಟ್ರೀಯ ಸಂಸತ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆ ಮೂಲಕ ಬಾಂಗ್ಲಾದೇಶ ಹೊಸ ಮನ್ವರಂತಕ್ಕೆ ಹೆಜ್ಜೆ ಇಟ್ಟಂತೆ ಆಗಿದೆ. ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಪ್ರಮಾಣವಚನ ಬೋಧಿಸಿದ್ದು, ಜಗತ್ತಿನ ವಿವಿಧ ಮೂಲೆಗಳ 1,200 ಜನ ಅತಿಥಿಗಳು ಈ ಕಾರ್ಯಕ್ರಮದ ಭಾಗವಾಗಿದ್ದರು. 25 ಚುನಾಯಿತ ಸಂಸದರು ಇದೀಗ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಬಾಂಗ್ಲಾದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗೇ ಇನ್ನುಮುಂದೆ ಬಾಂಗ್ಲಾದೇಶ ಶಾಂತಿಯಲ್ಲಿ ಬದುಕುವ ಮುನ್ಸೂಚನೆ ಕೂಡ ಸಿಗುತ್ತಿದೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications