ಬಹ್ರೈನ್‌ನ ದೀರ್ಘಾವಧಿ ಪ್ರಧಾನಿ ಸಲ್ಮಾನ್ ಅಲ್ ಖಲೀಫಾ ನಿಧನ
ಬಹ್ರೈನ್, ನವೆಂಬರ್ 12: ಬಹ್ರೈನ್‌ನ ಸುದೀರ್ಘ ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ (84) ನಿಧನರಾಗಿದ್ದಾರೆ ಎಂದು ಬಹ್ರೇನ್ ರಾಯಲ್ ಕೋರ್ಟ್ ಮಾಹಿತಿ ನೀಡಿದೆ.
ಖಲೀಫಾ ನಿಧನಕ್ಕೆ ಬಹ್ರೇನ್ ದೊರೆ ಹಮೀದ್ ಬಿನ್ ಸಂತಾಪ ಸೂಚಿಸಿದ್ದು ದೇಶಾದ್ಯಂತ ಒಂದು ವಾರಗಳ ಕಾಲ ಶೋಕಾಚರಣೆ ಘೊಷಿಸಿದ್ದಾರೆ. ಖಲೀಫಾ ನಿಧನಕ್ಕೆ ಇಸ್ರೇಲ್ ಪ್ರಧಾನಿ ಸೇರಿದಂತೆ ವಿಶ್ವದ ನಾನಾ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಕೊರೊನಾ ಕಾರಣದಿಂದಾಗಿ ಅತ್ಯಂತ ಆಪ್ತವಲಯದವರ ಸಮ್ಮುಖದಲ್ಲಷ್ಟೇ ಅಂತ್ಯಕ್ರಿಯೆ ನಡೆಯಲಿದೆ.1970 ರಿಂದ ಬಹ್ರೇನ್ ಗೆ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಆಗಸ್ಟ್ 15, 1971 ರಂದು ಬಹ್ರೇನ್ ಸ್ವಾತಂತ್ರ್ಯಗೊಂಡಾಗಿನಿಂದ ಅಲ್ಲಿನ ಪ್ರಧಾನಿಯಾಗಿದ್ದರು. ಅವರು ವಿಶ್ವದ ಯಾವುದೇ ಸರ್ಕಾರದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಎನಿಸಿದ್ದಾರೆ.












Click it and Unblock the Notifications