Axiom-4 Mission: ಆಕಾಶದಲ್ಲಿ ಮಗ, ಭೂಮಿ ಮೇಲೆ ಅಪ್ಪ & ಅಮ್ಮ... ಖುಷಿಗೆ ಕಣ್ಣೀರು ಹಾಕಿದ ಭಾರತೀಯರು!
ಮಕ್ಕಳು ಸಾಧನೆ ಮಾಡುವುದನ್ನು ನೋಡುವುದೇ ತಂದೆ & ತಾಯಿಗೆ ಭಾಗ್ಯ ಎನ್ನಬಹುದು. ಯಾಕೆ ಅಂದ್ರೆ ತಾವು ಹೆತ್ತ ಮಕ್ಕಳು ಇಡೀ ಜಗತ್ತು ತಿರುಗಿ ನೋಡುವಂತೆ ಸಾಧನೆ ಮಾಡಿದರೆ ಅದಕ್ಕಿಂತ ದೊಡ್ಡ ಗಿಫ್ಟ್ ಮತ್ತೊಂದು ಏನಿದೆ ಹೇಳಿ? ಅದೇ ರೀತಿ ಈಗ ಭಾರತದ ಹೆಮ್ಮೆಯ ಪುತ್ರ & ಗಗನಯಾತ್ರಿ ಶುಭಾಂಶು ಶುಕ್ಲಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾರತದ ಇತಿಹಾಸದಲ್ಲೇ ಶುಭಾಂಶು ಶುಕ್ಲಾ ಅವರ ಹೆಸರು ಅಜರಾಮರ ಎನ್ನಬಹುದು. ಹೀಗೆ ಮಗನ ಸಾಧನೆ ಕಣ್ತುಂಬಿಕೊಂಡ ಶುಭಾಂಶು ಶುಕ್ಲಾ ತಂದೆ & ತಾಯಿ ಕೂಡ ಇಡೀ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ.
ಚಂದ್ರನ ಮೇಲೆ ಹೋಗಿದ್ದು ಆಯ್ತು, ಸೂರ್ಯನ ಅಧ್ಯಯನ ಶುರುವಾಯ್ತು. ಹೀಗೆ ಭಾರತವು ಬಾಹ್ಯಾಕಾಶ ಲೋಕದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಇದರ ಜೊತೆಗೆ ಶುಭಾಂಶು ಶುಕ್ಲಾ ಇತಿಹಾಸ ಬರೆದಿದ್ದಾರೆ. ಹೌದು, ಶುಭಾಂಶು ಶುಕ್ಲಾ ಅವರು ಮಾಡಿರುವ ಸಾಧನೆ 40 ವರ್ಷಗಳ ಇತಿಹಾಸ ಅಳಿಸಿ ಹಾಕಿದೆ. ಹೇಗೆ ಅಂದ್ರೆ, 1984ರ ಸಮಯದಲ್ಲಿ ರಾಕೇಶ್ ಶರ್ಮಾ ಅವರು ಸೋವಿಯತ್ ರಷ್ಯಾ ಯೋಜನೆಯಲ್ಲಿ ಭಾಗಿಯಾಗಿ ಬಾಹ್ಯಾಕಾಶಕ್ಕೆ ಹಾರಿದ್ದರು. ಅಂದಿನ ಕಾಲಕ್ಕೆ ಇಡೀ ಪ್ರಪಂಚವೇ ಭಾರತದ ಬಾಹ್ಯಾಕಾಶ ಲೋಕದ ಕಡೆಗೆ ತಿರುಗಿ ನೋಡಿತ್ತು.

ಶುಭಾಂಶು ಶುಕ್ಲಾಗೆ ಜನರಿಂದ ಸಲಾಂ!
ಹೀಗೆ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹಾರಿ, 4 ದಶಕಗಳ ನಂತರ ಅಂದ್ರೆ 40 ವರ್ಷಗಳ ನಂತರ ಭಾರತೀಯ ವಿಜ್ಞಾನಿ ಒಬ್ಬರು ಮತ್ತೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೇ ಸಮಯದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಜ್ಜೆ ಹಾಕಿದ ಮೊದಲ ಭಾರತೀಯ ವಿಜ್ಞಾನಿ ಎಂಬ ಹೆಮ್ಮೆ ಕೂಡ ಶುಭಾಂಶು ಶುಕ್ಲಾ ಅವರ ಪಾಲಾಗಿದೆ. ಇಂತಹ ಶುಭ ಸಂದರ್ಭದಲ್ಲೇ ಮಗನನ್ನು ಕಣ್ತುಂಬಿಕೊಂಡ ಅಪ್ಪ & ಅಮ್ಮ ಈಗ ಆಂದನಬಾಷ್ಪ ಸುರಿಸಿದ್ದಾರೆ. ಆಕಾಶದಲ್ಲಿ ಮಗ & ಭೂಮಿ ಮೇಲೆ ಅಪ್ಪ & ಅಮ್ಮ... ಅಂತಾ ಸೋಷಿಯಲ್ ಮೀಡಿಯಾದಲ್ಲಿ ಶುಭಾಂಶು ಶುಕ್ಲಾ ಸಾಧನೆ ಬಗ್ಗೆ ಚರ್ಚೆಯನ್ನ ಮಾಡುತ್ತಿದ್ದಾರೆ ನೆಟ್ಟಿಗರು.
ಜಗತ್ತಿನ ಮೂಲೆ ಮೂಲೆಯಲ್ಲೂ ಸೌಂಡ್
ಒಟ್ಟಾರೆ ಹೇಳುವುದಾದರೆ ಭಾರತದ ಬಾಹ್ಯಾಕಾಶ ಲೋಕದಲ್ಲಿ ಇಂದಿನ ದಿನ ಎಂದಿಗೂ ಮರೆಯಲಾಗದು. ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಬಾಹ್ಯಾಕಾಶ ಲೋಕಕ್ಕೆ ನಮ್ಮ ವಿಜ್ಞಾನಿಗಳು ದೊಡ್ಡ ಗಿಫ್ಟ್ ಕೊಡುತ್ತಿದ್ದಾರೆ. ಅದೇ ರೀತಿ ಇಂದು ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದು, ಸಂಶೋಧನೆ ಕೂಡ ಶುರು ಮಾಡಿದ್ದಾರೆ. ಮನುಷ್ಯರ ಭವಿಷ್ಯದ ದೃಷ್ಟಿಯಿಂದ ಈ ಸಂಶೋಧನೆ ಭಾರಿ ಮಹತ್ವ ಕೂಡ ಪಡೆದುಕೊಂಡಿದೆ. ಭಾರತೀಯರ ಹೆಸರು ಮತ್ತೊಮ್ಮೆ ಜಗತ್ತಿನ ಮೂಲೆ ಮೂಲೆಯಲ್ಲೂ ರಾರಾಜಿಸುತ್ತಿದೆ.












Click it and Unblock the Notifications