SpaceX Mission: ಆಕಾಶದಿಂದ ಧರೆಗೆ ಶುಭಾಂಶು ಶುಕ್ಲಾ, ಇದು ಮಾನವ ಲೋಕದ ವಿಸ್ಮಯ!
ಬಾಹ್ಯಾಕಾಶ ಲೋಕದಲ್ಲಿ ದೊಡ್ಡ ದೊಡ್ಡ ಸಂಶೋಧನೆಗಳು ನಡೆಯುತ್ತಿದ್ದು, ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಲಾಗುತ್ತಿದೆ. ಭಾರತ ಸೇರಿದಂತೆ ಅಮೆರಿಕ & ರಷ್ಯಾ ಜೊತೆ ಚೀನಾ ಹಾಗೇ ಯುರೋಪಿಯನ್ ಒಕ್ಕೂಟ ಬಾಹ್ಯಾಕಾಶ ಸಂಶೋಧನೆ ವಿಚಾರದಲ್ಲಿ ಸಾಕಷ್ಟು ಮುಂದೆ ಇವೆ. ಅದರಲ್ಲೂ ಇತ್ತೀಚೆಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದ ಭಾರತೀಯ & ಇಸ್ರೋ ವಿಜ್ಞಾನಿ ಶುಭಾಂಶು ಶುಕ್ಲಾ ಅವರು ಇದೀಗ ಭರ್ಜರಿ ಸುದ್ದಿ ಒಂದನ್ನು ಹೊತ್ತುಕೊಂಡು ಭೂಮಿ ಕಡೆಗೆ ಬರುತ್ತಿದ್ದಾರೆ.
ಭೂಮಿ ಮೇಲೆ ಮಾತ್ರ ಬದುಕಲು ಅರ್ಹ ಅಂತಾ ತಿಳಿದುಕೊಂಡಿದ್ದ ಮನುಷ್ಯರು ಇದೀಗ ಇಡೀ ಬ್ರಹ್ಮಾಂಡ ಹುಡುಕುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಬೇರೆ ಬೇರೆ ಗ್ರಹಗಳಿಗೆ ಹೋಗಿ ಅಲ್ಲಿ ಏಲಿಯನ್ ಸೇರಿದಂತೆ ಬೇರೆ ಯಾವುದಾದರೂ ಜೀವಿಗಳು ಬದುಕಿವೆಯಾ? ಅನ್ನೋದನ್ನ ಹುಡುಕುತ್ತಿದ್ದಾರೆ. ಇದರ ಜೊತೆಗೆ ಈಗ ಮನುಷ್ಯರು ಇಡೀ ಬ್ರಹ್ಮಾಂಡ ಆಳುವ ಶಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೇ, ಭಾರತೀಯ ವಿಜ್ಞಾನಿ ಶುಭಾಂಶು ಶುಕ್ಲಾ ಕೂಡ ಬಾಹ್ಯಾಕಾಶಕ್ಕೆ ತೆರಳಿ ಸಂಶೋಧನೆ ನಡೆಸಿದ್ದಾರೆ. ಹೀಗೆ ಹಲವು ದಿನ ಸಂಶೋಧನೆ ನಡೆಸಿದ ನಂತರ ಶುಭಾಂಶು ಶುಕ್ಲಾ ವಾಪಸ್ ಭೂಮಿ ಕಡೆಗೆ ಮುಖ ಮಾಡಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಭೂಮಿಗೆ ಶುಭಾಂಶು
ಜೂನ್ 25 ಬುಧವಾರ ಅಂದ್ರೆ ಸರಿಯಾಗಿ 20 ದಿನಗಳ ಹಿಂದೆ ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿ ಮೂಲದ ವಿಜ್ಞಾನಿ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ವಿಸ್ಕಿ ಬಾಹ್ಯಾಕಾಶಕ್ಕೆ ಹಾರಿದ್ದರು. ಹೀಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸತತ ಸಂಶೋಧನೆ ನಡೆಸಿದ್ದರು. ಇದೀಗ ಬಾಹ್ಯಾಕಾಶ ನಿಲ್ದಾಣದಿಂದ ಹೊರಟು ನೇರವಾಗಿ ಭೂಮಿಗೆ ಬಂದು ಇಳಿಯಲಿದ್ದಾರೆ. ಹೀಗೆ ಶುಭಾಂಶು ಶುಕ್ಲಾ ಸೇರಿ ವಿಜ್ಞಾನಿಗಳ ತಂಡ ಭೂಮಿ ಕಡೆಗೆ ಪ್ರಯಾಣ ಬೆಳೆಸಿದ್ದು, ಅವರನ್ನೆಲ್ಲಾ ಸುರಕ್ಷಿತವಾಗಿ ಕರೆದುಕೊಂಡು ಬರಲು ಸಕಲ ಸಿದ್ಧತೆ ಇದೀಗ ಕೈಗೊಳ್ಳಲಾಗಿದೆ.












Click it and Unblock the Notifications