ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ಪೇಪರ್ ಜೊತೆಗೆ ಟಾಯ್ಲೆಟ್ ಪೇಪರ್ ಪ್ರಿಂಟ್ ಮಾಡಿದ ಸುದ್ದಿ ಪತ್ರಿಕೆ

|
Google Oneindia Kannada News

ಆಸ್ಟೇಲಿಯಾ, ಮಾರ್ಚ್ 6: ಸುದ್ದಿ ಪತ್ರಿಕೆಯೊಂದು ನ್ಯೂಸ್ ಪೇಪರ್ ಜೊತೆಗೆ ಟಾಯ್ಲೆಟ್ ಪೇಪರ್ ಅನ್ನು ಪ್ರಿಂಟ್ ಮಾಡಿದೆ. ಆಸ್ಟೇಲಿಯಾದಲ್ಲಿ ಕೊರೊನಾ ವೈರಸ್ ಎಫೆಕ್ಟ್ ನಿಂದ ಈ ಘಟನೆ ನಡೆದಿದೆ.

ಕೊರೊನಾ ವೈರಸ್‌ನಿಂದ ಆಸ್ಟೇಲಿಯಾದಲ್ಲಿ ಟಾಯ್ಲೆಟ್ ಪೇಪರ್ ಕೊರತೆ ಎದುರಾಗಿದೆ. ದಾಸ್ತಾನುಗಳನ್ನು ಟಾಯ್ಲೆಟ್ ಪೇಪರ್ ಕಡಿಮೆ ಆಗಿದ್ದು, ಬೇಡಿಕೆಗೆ ತಕ್ಕ ಪೂರೈಕೆ ನೀಡಲು ಆಗುತ್ತಿಲ್ಲ. ಹಾಗಾಗಿ, ಟಾಯ್ಲೆಟ್ ಪೇಪರ್‌ಗೆ ಇರುವ ಡಿಮ್ಯಾಂಡ್ ಅನ್ನು ಸರಿದೂಗಿಸಲು ನ್ಯೂಸ್ ಪೇಪರ್‌ ಸಂಸ್ಥೆಯೊಂದು ಮುಂದಾಗಿದೆ.

ಕೊರೊನಾ ಭೀತಿ: ಭಾರತದಲ್ಲಿ ಮಾಸ್ಕ್ ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ಕೊರೊನಾ ಭೀತಿ: ಭಾರತದಲ್ಲಿ ಮಾಸ್ಕ್ ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಎನ್‌ಟಿ ನ್ಯೂಸ್ ಎನ್ನುವ ಸುದ್ದಿ ಪತ್ರಿಕೆ ಎಂಟು ಪುಟಗಳನ್ನು ಅಧಿಕವಾಗಿ ಪ್ರಿಂಟ್ ಮಾಡಿದೆ. ಇದನ್ನು ಜನರು ಟಾಯ್ಲೆಟ್ ಪೇಪರ್ ಆಗಿ ಬಳಸಬಹುದು ಎಂದು ತಿಳಿಸಿದೆ. ಪತ್ರಿಕೆಯ ಸುದ್ದಿ ಮುಗಿದ ಮೇಲೆ ಟಾಯ್ಲೆಟ್ ಪೇಪರ್ ಗಳು ಇವೆ.

Australian Newspaper Prints Extra Pages To Use As Toilet Paper

ಎನ್‌ಟಿ ನ್ಯೂಸ್ ಪತ್ರಿಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಟಾಯ್ಲೆಟ್ ಪೇಪರ್‌ರೊಂದಿಗೆ ಪ್ರಿಂಟ್ ಆದ ಟಾಯ್ಲೆಟ್ ಪೇಪರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎನ್‌ಟಿ ನ್ಯೂಸ್ ತನ್ನ ಹಾಸ್ಯಮಯ ಶೀರ್ಷಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದ ಪ್ರತಿಕೆಯಾಗಿದೆ. ಇದೀಗ ಪತ್ರಿಕೆಯ ಜೊತೆಗೆ ಟಾಯ್ಲೆಟ್ ಪೇಪರ್ ಪ್ರಿಂಟ್ ಮಾಡಿದೆ.

ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

ಈ ಪತ್ರಿಕೆ ಸಂಪಾದಕ ಮ್ಯಾಟ್ ವಿಲಿಯಮ್ಸ್ ಮಾತನಾಡಿದ್ದು, ''ನಮ್ಮ ಪತ್ರಿಕೆ ತುಂಬ ಚೆನ್ನಾಗಿ ಮಾರಾಟ ಆಗುತ್ತಿದೆ. ನಾವು ನಮ್ಮ ಓದುಗರನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದನೆ ನೀಡುತ್ತಿದ್ದೇವೆ. ಈಗ ಟಾಯ್ಲೆಟ್ ಪೇಪರ್‌ಗೆ ದೊಡ್ಡ ಬೇಡಿಕೆ ಶುರುವಾಗಿದ್ದು, ಅದನ್ನು ಪೂರೈಸುತ್ತಿದ್ದೇವೆ'' ಎಂದಿದ್ದಾರೆ.

English summary
Australian NT newspaper prints extra pages for readers to use as toilet paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X