ಸೆಲ್ಫಿ ಕ್ಲಿಕ್ಕಿಸಿ 'ಕಿತ್ನಾ ಅಚ್ಛಾ ಹೇ ಮೋದಿ' ಎಂದ ಆಸ್ಟ್ರೇಲಿಯಾ ಪ್ರಧಾನಿ
ಒಸಾಕಾ, ಜೂನ್ 29: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಪ್ತ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಅದನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿ, 'ಕಿತ್ನಾ ಅಚ್ಛಾ ಹೈ ಮೋದಿ' (ಮೋದಿ ಎಷ್ಟು ಒಳ್ಳೆಯವರು) ಎಂದು ಬರೆದಿದ್ದಾರೆ.
ಸ್ಕಾಟ್ ಮಾರಿಸ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, 'ಗೆಳೆಯ, ನಮ್ಮ ದ್ವಿಪಕ್ಷೀಯ ಸಂಬಂಧದ ಶಕ್ತಿ ಆಶ್ಚರ್ಯ ತಂದಿದೆ' ಎಂದು ಧನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಈ ಇಬ್ಬರೂ ನಾಯಕರು ಜಪಾನ್‌ನ ಒಸಾಕಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಮೊದಲೂ ಸಹ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಅವರನ್ನು ಭೇಟಿ ಆಗಿದ್ದರು.

ಈ ಇಬ್ಬರು ನಾಯಕರ ಸೆಲ್ಫಿ ಚಿತ್ರ ಎರಡೂ ದೇಶಕ್ಕೆ ಸಂದೇಶ ನೀಡುತ್ತಿದ್ದು, ಎರಡೂ ದೇಶದ ನಡುವಿನ ಬಾಂದವ್ಯ ಉತ್ತಮವಾಗಿದೆಯೆಂದು ಸೂಚಿಸುತ್ತಿದೆ.
ಜಿ-20 ಶೃಂಗಸಭೆಯಲ್ಲಿ ಮೋದಿ ಅವರು ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ. ಇದರ ಜೊತೆಗೆ ಇಂಡೋನೇಷ್ಯಾ, ಬ್ರೆಜಿಲ್, ಟರ್ಕಿ ಇನ್ನೂ ಮುಂತಾದ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.












Click it and Unblock the Notifications