ವಿಮಾನದಿಂದ ಉದುರಿದ ಮಾನವ ಅಂಗಾಂಗಗಳು!

ಜೆಡ್ಡಾದ ಮುಷ್ರೇಫಾ ಗಡಿ ಭಾಗದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಸ್ಥಳ ಪರೀಕ್ಷೆ ನಡೆಸಿ, ಮುಂದಿನ ವಿಚಾರಣೆ ನಡೆಸಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಪ್ರಸಂಗಗಳು ನಡೆದಿವೆ ಎಂದು ಸ್ಥಳೀಯರು ಹೇಳುತ್ತಾರೆ.
ವಿಮಾನದ ಹೊರ ಭಾಗದಿಂದ ಈ ಮಾನವ ಅಂಗಾಂಗಳು ಉದುರಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಡಿ ಭಾಗವನ್ನು ಅಕ್ರಮವಾಗಿ ನುಸುಳುವ ಯತ್ನದಲ್ಲಿ ಇಂತಹ ಅನಾಹುತಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೂಕ್ತ ದಾಖಲೆಗಳು ಇಲ್ಲದೆಯೋ ಅಥವಾ ಹಣವಿಲ್ಲದೆಯೋ ಅಕ್ರಮವಾಗಿ ನುಸುಳುಹೋಗುವ ಯತ್ನದಲ್ಲಿ ವಿಮಾನ ಮೇಲಕ್ಕೆ ಹಾರುವ ಕೊನೆಯ ಘಳಿಗೆಯಲ್ಲಿ ಹಿಂಭಾಗಗಳನ್ನು ಹಿಡಿದುಕೊಂಡು ಅಕ್ರಮ ನುಸುಳುಕೋರರು ಪಕ್ಕದ ಗಡಿ ತಲುಪುತ್ತಾರೆ. ಕೆಲವರು ವಿಪರೀತ ಹವಾಮಾನದಿಂದಾಗಿ ಅಲ್ಲೇ ಸತ್ತುಹೋಗುತ್ತಾರೆ. ಆಗ ದೇಹದ ಭಾಗಗಳು ಉದುರುತ್ತವೆ.
ಕೆಲವರು ಮರಗಟ್ಟಿಹೋಗಿ ಅಲ್ಲೇ ಉಳಿದುಬಿಡುತ್ತಾರೆ. ನಂತರ ನಿಧಾನವಾಗಿ ಸಿಬ್ಬಂದಿ ಪರೀಕ್ಷಾರ್ಥವಾಗಿ ವಿಮಾನವನ್ನು ಸುತ್ತುಹೊಡೆದಾಗ ಆ ದೇಹ ಕಾಣಿಸಿಕೊಳ್ಳುತ್ತದೆ ಎಂದು ಆ ಹಿರಿಯ ಅಧಿಕಾರಿ ಹೇಳುತ್ತಾರೆ. ಒಮ್ಮೆ, 2010ರಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಾಗ ವಿಮಾಣ ನಿಲ್ದಾಣದ ಭದ್ರತಾಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.












Click it and Unblock the Notifications