ನೈಜೀರಿಯಾ ಮಸೀದಿ ಮೇಲೆ ಆತ್ಮಾಹುತಿ ದಾಳಿ, 50 ಬಲಿ
ಮುಬಿ (ನೈಜೀರಿಯಾ), ನವೆಂಬರ್ 21: ಈಶಾನ್ಯ ನೈಜೀರಿಯಾದ ನಗರ ಮುಬಿಯ ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಪೋಟಿಸಿದೆ. ಪರಿಣಾಮ ಪ್ರಾರ್ಥನೆಗೆ ಬಂದಿದ್ದ 50ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಬಳಗ್ಗಿನ ಪ್ರಾರ್ಥನೆಗೆ ಜನರು ಮಸೀದಿಗೆ ಬಂದಿದ್ದ ವೇಳೆ ಅಪ್ರಾಪ್ತ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದರೆ ಈ ಭಾಗದಲ್ಲಿ ಬೋಕೋ ಹರಾಮ್ ಉಗ್ರರು ಮೇಲಿಂದ ಮೇಲೆ ದಾಳಿಗಳನ್ನು ಮಾಡುವುದರಿಂದ ಅವರೇ ಈ ದಾಳಿಯೂ ಮಾಡಿರಬಹುದು ಎಂದುಕೊಳ್ಳಲಾಗಿದೆ.












Click it and Unblock the Notifications