ವಾಷಿಂಗ್ಟನ್ ಮಾಲ್ ನಲ್ಲಿ ಶೂಟೌಟ್ , 4 ಜನ ಸಾವು
ವಾಷಿಂಗ್ಟನ್, ಸೆ. 24: ವಾಷಿಂಗ್ಟನ್ ನ ಮಾಲ್ ವೊಂದರಲ್ಲಿ ದುಷ್ಕರ್ಮಿಯೊಬ್ಬ ದಾಳಿ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ದಾಳೀ ಮಾಡಿದ ವ್ಯಕ್ತಿ ಪರಾರಿಯಾಗಿದ್ದು, ತೀವ್ರ ಶೋಧಕಾರ್ಯ ನಡೆಸಲಾಗುತ್ತಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವಕ್ತಾರ ಸರ್ಜೆಂಟ್ ಮಾರ್ಕ್ ಫ್ರಾನ್ಸಿಸ್ ಅವರು, ಬರ್ಲಿಂಗ್ಟನ್ ನ ಕ್ಯಾಸ್ಕೇಡ್ ಮಾಲ್ ನಲ್ಲಿ ಈ ದಾಳಿ ನಡೆದಿದೆ.

ಒಬ್ಬ ಶಂಕಿತನನ್ನು ಗುರುತಿಸಲಾಗಿದ್ದು, ಮುಸುಕುಧಾರಿ ಯುವಕನೊಬ್ಬ ಮಾಲ್ ನಲ್ಲಿ ದಾಳಿ ನಡೆಸಿ ನಂತರ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸಿಕ್ಕಿವೆ ಎಂದಿದ್ದಾರೆ.
EMS starting to enter to attend to injured inside Mall w/ police escort and after initial clearance. pic.twitter.com/Nkfb7co6sa
— Sgt. Mark Francis (@wspd7pio) September 24, 2016
ಯುಎಸ್ ಫೆಸಿಫಿಕ್ ನಾಥ್ ವೆಸ್ಟ್ ರಾಜ್ಯ ಸಿಯಾಟೆಲ್ ನ ಉತ್ತರ ಭಾಗದಿಂದ 110 ಕಿ.ಮೀ ದೂರದಲ್ಲಿರುವ ಬರ್ಲಿಂಗ್ಟನ್ ನಲ್ಲಿ ಈ ಘಟನೆ ಸಂಭವಿಸಿದೆ.
FAMILIES/FRIENDS: Survivors inside the mall will be transported via bus to "His Place" church corner of Pease Rd and Burlington Blvd
— Sgt. Mark Francis (@wspd7pio) September 24, 2016












Click it and Unblock the Notifications