ಕರಾಚಿಯಲ್ಲಿ ರೈಲು ಅಪಘಾತ: 17 ಮಂದಿ ದುರ್ಮರಣ

Posted By:
Subscribe to Oneindia Kannada

ಇಸ್ಲಾಮಾಬಾದ್, ನವೆಂಬರ್, 3: ಪಾಕಿಸ್ತಾನದ ರಾಜಧಾನಿ ಕರಾಚಿಯಲ್ಲಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಟ್ಟು 17 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಗುರುವಾರ (ನ.3) ನಡೆದಿದೆ.

ಘಟನೆಯಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಎರಡನೇ ಅತಿದೊಡ್ಡ ರೈಲು ದುರಂತ ಇದಾಗಿದೆ.

At least 17 die in Karachi train crash in Pakistan

ಕರಾಚಿಯ ಲ್ಯಾಂಡಿ ರೈಲ್ವೇ ನಿಲ್ದಾಣದಲ್ಲಿ ಝಕಾರಿಯಾ ಎಕ್ಸ ಪ್ರೆಸ್ ಮತ್ತು ಫರೀದ್ ಎಕ್ಸ್ ಪ್ರೆಸ್ ರೈಲುಗಳು ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಅಪಘಾತದಿಂದಾಗಿ ಕರಾಚಿಯಿಂದ ಹೋಗುವ ಎಲ್ಲಾ ರೈಲು ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.

ಅಷ್ಟೇ ಅಲ್ಲದೇ ರೈಲು ಬೋಗಿಗಳ ಅವಶೇಷಗಳಡಿ ಮತ್ತಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 17 ಮಂದಿ ಮೃತಪಟ್ಟಿದ್ದಾರೆ ಎಂದು ಕರಾಚಿಯ ಹಿರಿಯ ಪೊಲಿಸ್ ಅಧಿಕಾರಿ ಜವೆನ್ ಅಕ್ಬರ್ ರಿಯಾಜ್ ತಿಳಿಸಿದ್ದಾರೆ. ಗಾಯಾಳುಗಳನ್ನು ಕರಾಚಿಯ ಜಿನ್ಹಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ಅವರು ಹೇಳಿದ್ದಾರೆ.

ರೈಲು ಯಂತ್ರಗಳ ಕಳಪೆ ನಿರ್ವಹಣೆಯೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two trains collided early on Thursday morning near Landhi railway station in the southern city of Karachi. in accident 17 die and more than 40 people get injured. Initial reports said that one of the trains had been given the wrong signal and at least two carriages had overturned following the crash.
Please Wait while comments are loading...